ಮಹಾವೀರರ ಬೋಧನೆ, ತತ್ವಾದರ್ಶ ಅಳವಡಿಸಿಕೊಳ್ಳಿ

| Published : Apr 11 2025, 12:34 AM IST

ಸಾರಾಂಶ

ಮಹಾಲಿಂಗಪುರ ಪಟ್ಟಣದ ಜೋಡು ರಸ್ತೆಯಲ್ಲಿರುವ ಜೈನ್ ಮಂದಿರದಲ್ಲಿ ಜೈನ ಧರ್ಮದ ೨೪ನೇ ತೀರ್ಥಂಕರರಾದ ಮಹಾವೀರ ಜಯಂತಿ ಆಚರಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಪಟ್ಟಣದ ಜೋಡು ರಸ್ತೆಯಲ್ಲಿರುವ ಜೈನ್ ಮಂದಿರದಲ್ಲಿ ಜೈನ ಧರ್ಮದ ೨೪ನೇ ತೀರ್ಥಂಕರರಾದ ಮಹಾವೀರ ಜಯಂತಿ ಆಚರಣೆ ಮಾಡಲಾಯಿತು.

ನಂತರ ನಿಲೇಶ ಒಸ್ವಾಲ್ ಮಾತನಾಡಿ, ಮಹಾವಿರರು ಜೈನ ಧರ್ಮದ ೨೪ನೇ ಮತ್ತು ಕೊನೆಯ ತೀರ್ಥಂಕರರೆನ್ನುವ ಹೆಮ್ಮೆಗೆ ಪಾತ್ರರಾದವರು. ಜೈನ ಧರ್ಮದ ಮೂಲ ತತ್ವಗಳನ್ನು ಸ್ಥಾಪಿಸಿದವರು. ಮಹಾವೀರರು ಬಿಹಾರ ರಾಜ್ಯದ ವೈಶಾಲಿ ಜಿಲ್ಲೆಯಲ್ಲಿರುವ ಕುಂದಲಗ್ರಾಮದಲ್ಲಿ ಜನಿಸಿ ತಮ್ಮ ಜೀವನದ ಮೂಲಕ ಅಹಿಂಸೆ, ಸತ್ಯ, ಕರುಣೆ ಮತ್ತು ಸ್ವಯಂ ಕೃಷಿಯ ಅದ್ಭುತ ತತ್ವಗಳನ್ನು ಪ್ರಸ್ತುತಪಡಿಸಿದರು. ಅವರ ಬೋಧನೆಗಳು ಇಂದಿಗೂ ಪ್ರತಿಯೊಬ್ಬ ವ್ಯಕ್ತಿಗೂ ಸ್ಫೂರ್ತಿಯ ಮೂಲವಾಗಿದೆ ಎಂದರು.ಪಿಯೂಷ್ ಓಸ್ವಾಲ್ ಮಾತನಾಡಿದರು.

ಜೈನ ಸಮುದಾಯದ ಮುಖಂಡರಾದ ಕೆಮಚಂದ ಓಸ್ವಾಲ್ , ಶಿವಲಾಲ ಜೈನ, ಅಶೋಕ ಓಸ್ವಾಲ, ಪಾಪು ಓಸ್ವಾಲ, ನಿರ್ಮಲ ಓಸ್ವಾಲ್‌, ಕಾಂತಿಲಾಲ್ ಕೊಠಾರಿ, ಜಸರಾಜ್ ಕೊರವಾಲ್, ಪಂಕಜ್ ಕೋರವಾಲ್, ಹರ್ಷ ಓಸ್ವಾಲ್‌, ಮೇಘ ಓಸ್ವಾಲ ಸೇರಿದಂತೆ ಅನೇಕ ಸಮಾಜದ ಮಹಿಳೆಯರು ಮುಖಂಡರು ಭಾಗವಹಿಸಿದ್ದರು.