ವಾಲ್ಮೀಕಿಯವರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಿ: ಡಿ.ಪಿ.ದಾಸನ್ನವರ

| Published : Oct 18 2024, 12:02 AM IST

ವಾಲ್ಮೀಕಿಯವರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಿ: ಡಿ.ಪಿ.ದಾಸನ್ನವರ
Share this Article
  • FB
  • TW
  • Linkdin
  • Email

ಸಾರಾಂಶ

ಋಷಿಮುನಿಗಳ ನಾಡಿನಲ್ಲಿ ಮಹಾಕವಿ ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಗ್ರಂಥ ಮೂಲಕ ಮಾನವ ಜನ್ಮಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ. ಮಹರ್ಷಿ ವಾಲ್ಮೀಕಿಯವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹುಣಶ್ಯಾಳ ಪಿ.ವೈ.ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಡಿ.ಪಿ.ದಾಸನ್ನವರ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಋಷಿಮುನಿಗಳ ನಾಡಿನಲ್ಲಿ ಮಹಾಕವಿ ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಗ್ರಂಥ ಮೂಲಕ ಮಾನವ ಜನ್ಮಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ. ಮಹರ್ಷಿ ವಾಲ್ಮೀಕಿಯವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹುಣಶ್ಯಾಳ ಪಿ.ವೈ.ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಡಿ.ಪಿ.ದಾಸನ್ನವರ ಹೇಳಿದರು.

ಪಟ್ಟಣದ ತಹಸೀಲ್ದಾರ್‌ ಕಾರ್ಯಲಯದ ಸಭಾ ಭವನದಲ್ಲಿ ಗುರುವಾರ ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಪುರಭೆ ಮೂಡಲಗಿ ಹಾಗೂ ಗೋಕಾಕ ಪರಿಶಿಷ್ಟ ವರ್ಗಗಗಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಲ್ಮೀಕಿಯವರು ನಾರದಮುನಿಗಳ ಉಪದೇಶದಿಂದ ಜೀವನದಲ್ಲಿ ಬದಲಾವಣೆಗೊಂಡು ಪಾಪ ವಿಮೋಚನೆಗಾಗಿ ಕಠಿಣ ತಪಸ್ಸುಗೈದು 24 ಸಾವಿರ ಶ್ಲೋಕಗಳಿಂದ ರಾಮಾಯಣ ಮಹಾ ಕಾವ್ಯವನ್ನು ರಚಿಸಿದ್ದಾರೆ ಎಂದರು.

ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ತಹಸೀಲ್ದಾರ್‌ ಶಿವಾನಂದ ಬಬಲಿ, ತಾಪಂ ಇಒ ಎಫ್.ಜಿ.ಚಿನ್ನನವರ, ಸಿಡಿಪಿಒ ಯಲ್ಲಪ್ಪ ಗದಾಡಿ, ಬಿಇಒ ಅಜೀತ ಮನ್ನಿಕೇರಿ, ಹೆಸ್ಕಾಂ ಅಧಿಕಾರಿ ಎಂ.ಎಸ್.ನಾಗನ್ನವರ, ಪುರಸಭೆ ಮುಖ್ಯಾಧಿಕಾರಿ ತುಕ್ಕಾರಾಮ ಮಾದರ, ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಭಾರತಿ ಕೋಣಿ, ಅರಣ್ಯ ಇಲಾಖೆಯ ಸಂಜು ಸವಸುದ್ದಿ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಎಸ್.ಕೆ.ಆಸಂಗಿ, ಪುರಸಭೆ ಅಧ್ಯಕ್ಷೆ ಖರ್ಶಾದ ನದಾಫ್, ಉಪಾಧ್ಯಕ್ಷೆ ಭೀಮವ್ವ ಪೂಜೇರಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ ಹಾಗೂ ವಾಲ್ಮೀಕಿ ಸಮಾಜ ಬಾಂಧವರು ಸೇರಿದಂತೆ ಅನೇಕ ಗಣ್ಯರು ಪೂಜೆಯೊಂದಿಗೆ ಪುಷ್ಪ ನಮನ ಸಲ್ಲಿಸಿದರು.

2023-24ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಾಲ್ಮೀಕಿ ಸಮಾಜದ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಸತ್ಕರಿಸಿ ಗೌರವಿಸಿದರು.

ಸಮಾರಂಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ರಾಮಣ್ಣ ಹಂದಿಗುಂದ, ಹನಮಂತ ಗುಡ್ಲಮನಿ, ಮೂಡಲಗಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರವೀಂದ್ರ ಸೋನವಾಲಕರ, ಮಲ್ಲಿಕಾರ್ಜು ಕಬ್ಬೂರ, ಚನ್ನಗೌಡ ಪಾಟೀಲ, ಹನಮಂತ ತೇರದಾಳ, ಮರೆಪ್ಪ ಮರೆಪ್ಪಗೋಳ, ಲಕ್ಷ್ಮಣ ಕತ್ತಿ, ಮಲ್ಲನಗೌಡ ಪಾಟೀಲ, ಈಶ್ವರ ಬೆಳಗಲಿ, ಈರಪ್ಪ ಬನ್ನೂರ, ಶ್ರೀಶೈಲ್ ಭಜಂತ್ರಿ, ಬಸವರಾಜ ಪಾಟೀಲ, ಕುಮಾರ ಲೋಕನ್ನವರ, ಶೀವರಡ್ಡಿ ಹುಚ್ಚರಡ್ಡಿ, ಸಿದ್ದಣ್ಣ ದುರದುಂದಿ, ನಾಗರಾಜ ಕುದರಿ, ವಾಲ್ಮೀಕಿ ಸಮಾಜದ ಆನಂದ ಟಪಾಲದಾರ, ಯಲ್ಲಾಲಿಂಗ ವಾಳದ, ಮಲ್ಲಪ್ಪ ದಳವಾಯಿ, ಬಸವಣ್ಣಿ ಬರನಟ್ಟಿ, ಬಿಳಿಯಪ್ಪ ದೇವರಮನ್ನಿ, ಚಂದ್ರಕಾಂತ ಪೂಜೇರಿ, ಭಿಮಪ್ಪ ಹುಲ್ಯಾಳ, ವಿವಿಧ ಇಲಾಖೆ ಅಧಿಕಾರಿಗಳು ಪುರಸಭೆ ಸದಸ್ಯರು ಮತ್ತು ವಾಲ್ಮೀಕಿ ಸಮಾಜ ಭಾಂದವರ ಉಪಸ್ಥಿತರಿದ್ದರು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಭರತೇಶ ಬೋಳಿ ಸ್ವಾಗತಿಸಿದರು. ಎನ್.ಎಸ್.ಎಫ್ ಶಾಲೆಯ ಶಿಕ್ಷಕ ಎ.ಜಿ.ಕೋಳಿ ನಿರೂಪಿಸಿ, ವಂದಿಸಿದರು.