ವಿವೇಕರ ಸಂದೇಶ ಜೀವನದಲ್ಲಿ ಅಳವಡಿಸಿಕೊಳ್ಳಿ

| Published : Jan 14 2024, 01:35 AM IST

ಸಾರಾಂಶ

ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ, ಬದುಕುವುದಿದ್ದರೇ ಶತ್ರುಗಳ ಎದುರಲ್ಲೆ ಬದುಕಬೇಕು ಅವರು ಹತ್ತಿರ ಸುಳಿದಾಗಲೆಲ್ಲಾ ಬದುಕುವ ಛಲ ಇಮ್ಮಡಿಯಾಗುತ್ತದೆ ಎಂದು ಸಿಡಿಲ ಸಂತ, ಆಧ್ಯಾತ್ಮಿಕ ಸಂತನ ಸಂದೇಶ ಇಂದಿಗೂ ಪ್ರಸ್ತುತ

ಮುಂಡಗೋಡ: ಸ್ವಾಮಿ ವಿವೇಕಾನಂದರು ಯುವ ಸಮುದಾಯದ ಆರಾಧ್ಯ ದೈವ ಹಾಗೂ ಐಕಾನ್ ಆಗಿದ್ದಾರೆ ಎಂದು ಸಮೀಧಾ ಫೌಂಡೇಷನ್ ಟ್ರಸ್ಟ ಅಧ್ಯಕ್ಷ ಸಾಮಾಜಿಕ ಕಾರ್ಯಕರ್ತ ಸಂತೋಷ ವರಕ್ ಯರೇಬೈಲ್ ಹೇಳಿದರು.

ಮುಂಡಗೋಡ ತಾಲೂಕಿನ ಕೆಂದಲಗೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮೀಧಾ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಾಮಿ ವಿವೇಕಾನಂದರ ೧೬೧ ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ, ಬದುಕುವುದಿದ್ದರೇ ಶತ್ರುಗಳ ಎದುರಲ್ಲೆ ಬದುಕಬೇಕು ಅವರು ಹತ್ತಿರ ಸುಳಿದಾಗಲೆಲ್ಲಾ ಬದುಕುವ ಛಲ ಇಮ್ಮಡಿಯಾಗುತ್ತದೆ ಎಂದು ಸಿಡಿಲ ಸಂತ, ಆಧ್ಯಾತ್ಮಿಕ ಸಂತನ ಸಂದೇಶ ಇಂದಿಗೂ ಪ್ರಸ್ತುತವಾಗಿದೆ. ಭಾರತದ ಆಧ್ಯಾತ್ಮಿಕ ಶಕ್ತಿ ಮತ್ತು ಹಿಂದುತ್ವವನ್ನು ವಿಶ್ವದಾದ್ಯಂತ ಪ್ರಚಾರ ಮಾಡಿದವರಲ್ಲಿ ಸ್ವಾಮಿ ವಿವೇಕಾನಂದರು ಮೊದಲಿಗರು. ಸ್ವಾಮಿ ವಿವೇಕಾನಂದರ ತತ್ವ, ಆದರ್ಶ, ಚಿಂತನೆ, ಸಂದೇಶಗಳನ್ನು ಮಕ್ಕಳು, ಯುವಕರು ಓದಬೇಕು ಹಾಗೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸದೃಢ ಸಮಾಜ ಕಟ್ಟಲು ಸಾಧ್ಯ ಎಂದರು.

ಶಾಲೆಗೆ ಸಮೀಧಾ ಫೌಂಡೇಷನ್ ಟ್ರಸ್ಟ ವತಿಯಿಂದ ಸ್ವಾಮಿ ವಿವೇಕಾನಂದರ ಭಾವಚಿತ್ರ ಕೊಡುಗೆಯಾಗಿ ನೀಡಲಾಯಿತಲ್ಲದೇ ಶಾಲಾ ಮಕ್ಕಳಿಗೆ ಶಾಲಾ ಪರಿಕರ ಹಾಗೂ ಆಟಿಕೆ ಸಾಮಾನು ವಿತರಿಸಲಾಯಿತು.

ಶಾಲೆಯ ಮುಖ್ಯೋದ್ಯಾಪಕ ಪಟಗಾರ್ ಸ್ವಾಗತಿಸಿ ವಂದಿಸಿದರು. ಸಮೀಧಾ ಫೌಂಡೇಷನ್ ಟ್ರಸ್ಟ ಕಾರ್ಯದರ್ಶಿ ಬಮ್ಮು ಪೋಂಡೆ, ಎಸ್ ಡಿಎಂಸಿ ಅಧ್ಯಕ್ಷ ಸಹದೇವ್ ತಾಂಬೆ, ಸದಸ್ಯ ಫಕಿರಪ್ಪ ಕಟ್ಟಿಮನಿ ಮುಂತಾದವರು ಉಪಸ್ಥಿತರಿದ್ದರು.