ಸಾರಾಂಶ
ಅಭ್ಯಾಸ ವರ್ಗವು ಮೂರು ಅವಧಿಯಲ್ಲಿ ನಡೆಯಿತು. ಭಾರತೀಯ ನ್ಯಾಯ ಸಂಹಿತೆ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕುರಿತು ಉಚ್ಚ ನ್ಯಾಯಾಲಯದ ಖ್ಯಾತ ವಕೀಲ ಅಮರ್ ಕೊರೆಯ, ಕಮರ್ಷಿಯಲ್ ಕೋರ್ಟ್ ಆಕ್ಟ್ ಕುರಿತು ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಎಂ.ಎನ್. ಕುಮಾರ್ ಮತ್ತು ಸಂಘಟನಾತ್ಮಕ ವಿಷಯದ ಬಗ್ಗೆ ಮಂಗಳೂರು ವಕೀಲ ಜಗದೀಶ್ ಕೆ.ಆರ್. ಇವರು ಮಾಹಿತಿಯನ್ನು ನೀಡಿದರು.
ಕನ್ನಡಪ್ರಭ ವಾರ್ತೆ ಬ್ರಹ್ಮಾವರ
ಅಧಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಇದರ ಉಡುಪಿ ಜಿಲ್ಲಾ ಪ್ರಶಿಕ್ಷಣ ವರ್ಗವು ಉಡುಪಿಯ ಹಿರಿಯ ವಕೀಲ ಬಿ. ನಾಗರಾಜ್ ಅವರ ಮನೆಯಲ್ಲಿ ಉಡುಪಿ ಜಿಲ್ಲಾ ಅಧ್ಯಕ್ಷ ಸಂತೋಷ್ ಹೆಬ್ಬಾರ್ ಅಧ್ಯಕ್ಷತೆಯಲ್ಲಿ ನಡೆಯಿತು.ಉಡುಪಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ನಾಗರಾಜ್, ವರ್ಗವನ್ನು ಉದ್ಘಾಡಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ದಕ್ಷಿಣ ಪ್ರಾಂತ್ಯದ ಕಾರ್ಯಾಧ್ಯಕ್ಷ ನ್ಯಾಯವಾದಿ ಗುರುಪ್ರಸಾದ್ ಶೆಟ್ಟಿ, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಪ್ರಮೋದ್ ಹಂದೆ, ನ್ಯಾಯವಾದಿ ಅಮೃತಕಲಾ ಉಪಸ್ಥಿತರಿದ್ದರು.ಅಭ್ಯಾಸ ವರ್ಗವು ಮೂರು ಅವಧಿಯಲ್ಲಿ ನಡೆಯಿತು. ಭಾರತೀಯ ನ್ಯಾಯ ಸಂಹಿತೆ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕುರಿತು ಉಚ್ಚ ನ್ಯಾಯಾಲಯದ ಖ್ಯಾತ ವಕೀಲ ಅಮರ್ ಕೊರೆಯ, ಕಮರ್ಷಿಯಲ್ ಕೋರ್ಟ್ ಆಕ್ಟ್ ಕುರಿತು ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಎಂ.ಎನ್. ಕುಮಾರ್ ಮತ್ತು ಸಂಘಟನಾತ್ಮಕ ವಿಷಯದ ಬಗ್ಗೆ ಮಂಗಳೂರು ವಕೀಲ ಜಗದೀಶ್ ಕೆ.ಆರ್. ಇವರು ಮಾಹಿತಿಯನ್ನು ನೀಡಿದರು.ಸಮಾರೋಪ ಸಮಾರಂಭದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯವಾದಿ, ಅಧಿವಕ್ತ ಪರಿಷತ್ತಿನ ದಕ್ಷಿಣ ಪ್ರಾಂತದ ಉಪಾಧ್ಯಕ್ಷ ರೋಹಿತ್ ಗೌಡ ಮತ್ತು ಮಂಗಳೂರು ವಿಭಾಗದ ಸಂಚಾಲಕ ಚೇತನ್ ನಾಯಕ್ ಎಸ್. ಉಪಸ್ಥಿತರಿದ್ದರು.ಉಡುಪಿಯ ನ್ಯಾಯವಾದಿ ಸಂತೋಷ ಹೆಬ್ಬಾರ್ ಸ್ವಾಗತಿಸಿದರು. ಉಡುಪಿ ಜಿಲ್ಲಾ ಅಧಿವಕ್ತ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಆರೂರು ಸುಖೇಶ್ ಶೆಟ್ಟಿ ಅವರು ವಂದಿಸಿದರು. ನ್ಯಾಯವಾದಿ ಸಂತೋಷ್ ಕುಮಾರ್ ಮೂಡುಬೆಳ್ಳೆ ಕಾರ್ಯಕ್ರಮದ ನಿರ್ವಹಣೆ ಮಾಡಿದರು.