ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರು
ಗಿರಿಜನರು ಅರಣ್ಯ ಸಂರಕ್ಷಣೆಯೊಂದಿಗೆ ಸಮುದಾಯ ಸಂರಕ್ಷಣೆಗೆ ಮುಂದಾಗಬೇಕು ಎಂದು ಏಟ್ರಿ ಸಂಸ್ಥೆಯ ಪ್ರಾಧ್ಯಾಪಕ ಹಾಗೂ ಸಂಶೋಧಕ ಡಾ.ಆರ್.ಸಿದ್ದಪ್ಪಶೆಟ್ಟಿ ಅವರು ಸಲಹೆ ನೀಡಿದರು.ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಅಡವಿ, ಯರಕನಗದ್ದೆ ಕಾಲೋನಿಯಲ್ಲಿ ಅಶೋಕ ಪರಿಸರ ಸಂಶೋಧನಾ ಮತ್ತು ಪರಿಸರ ವಿಜ್ಞಾನ ಸಂಸ್ಥೆ (ಏಟ್ರಿ) ವತಿಯಿಂದ ಯಳಂದೂರು ತಾಲೂಕಿನ ೮ ಅರಣ್ಯ ಹಕ್ಕು ಸಮಿತಿಗಳ ಸದಸ್ಯರಿಗೆ ಸಮುದಾಯ ಸಂರಕ್ಷಣೆ ಯೋಜನೆ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಬಿಳಿಗಿರಿರಂಗಸ್ವಾಮಿ ಹುಲಿ ಯೋಜನೆಯಲ್ಲಿ ವಾಸವಾಗಿರುವ ಸೋಲಿಗರಾದ ತಾವುಗಳು ಅರಣ್ಯ ಹಕ್ಕು ಕಾಯಿದೆ ೨೦೦೬ ರಡಿಯಲ್ಲಿ ಭೂಮಿ ಹಕ್ಕು ಮತ್ತು ಸಮುದಾಯ ಸಂಪನ್ಮೂಲ ಹಕ್ಕುಗಳನ್ನು ಪಡೆದುಕೊಂಡಿರುವುದು ಸರಿಯಷ್ಟೆ, ಆದರೆ ತಾವುಗಳು ಈಗಾಗಲೆ ಸಮುದಾಯ ಸಂರಕ್ಷಣ ಯೋಜನೆ ಮಾಡಿದ್ದಿರಾ ಅದನ್ನು ಮತ್ತೊಮ್ಮ ಚರ್ಚಿಸಿ ಉತ್ತಮವಾಗಿ ಸಮುದಾಯ ಸಂರಕ್ಷಣಾ ಯೋಜನೆ ತಯಾರು ಮಾಡಿ ಗ್ರಾಮ ಸಭೆಗಳಲ್ಲಿ ಅನುಮೋದಿಸಿ ಉಪ ವಿಬಾಗ ಮತ್ತು ಜಿಲ್ಲಾ ಮಟ್ಟದ ಅರನ್ಯ ಹಕ್ಕು ಸಮಿತಿಗೆ ಸಲ್ಲಿಸಿ ಅರಣ್ಯ ಸಂರಕ್ಷಣೆ ಮತ್ತು ಮೇಲ್ವಿಚಾರಣೆ ಮಾಡಿಕೊಂಡು ನಿಮ್ಮ ಜೀವನೋಪಾಯ ಮತ್ತು ಅರಣ್ಯ ಸಂರಕ್ಷಣ ಮಾಡಬೇಕೆಂದು ತಿಳಿಸಿದರು. ಹಾಗೂ ಸಮುದಾಯ ಸಂರಕ್ಷಣ ಯೋಜನೆ ಕುರಿತು ಮಾಹಿತಿ ನೀಡಿದರು.
ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಹಾಗೂ ಬಿಳಿಗಿರಿರಂಗನಬೆಟ್ಟದ ಏಟ್ರಿ ಸಂಸ್ಧೆಯ ಸಂಶೋಧಕ ಡಾ.ಸಿ.ಮಾದೇಗೌಡ ಮಾತನಾಡಿ, ಈಗಾಗಲೆ ಮೂರು ಬಾರಿ ಸಮುದಾಯ ಸಂರಕ್ಷಣಾ ಯೋಜನೆ ಕುರಿತು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿರುತ್ತದೆ. ಈಗ ನಾವುಗಳು ಕುಲಂಕುಶವಾಗಿ ಚರ್ಚಿಸಿ ಯೋಜನೆ ತಯಾರು ಮಾಡೋಣ ಎಂದು ತಿಳಿಸಿದರು. ಕಾಯಗಾರದಲ್ಲಿ ಮುಖ್ಯವಾಗಿ ಲ್ಯಾಂಟಾನ ಸಮಸ್ಯೆ, ನೆಲ್ಲಿಮರಗಳಿಗೆ ಉಪ್ಪಿಲು, ಕಾಡುಗಳ್ಳರು ಮತ್ತು ಬೇಟೆಗಾರರು, ಪ್ಲಾಸ್ಟಿಕ್ ಬಳಕೆ ನಿಷೇಧ, ಗಣಿಗಾರಿಕೆ ನಿಷೇಧ, ಪ್ರವಾಸೋದ್ಯಮ, ಬರಗಾಲ, ಪರಿಸರ ಬದಲಾವಣೆ, ಪ್ರಾಣಿ ಮತ್ತು ಮಾನವ ಸಂರ್ಘಷ ಮತ್ತು ಸೋಲಿಗರ ಜೀವನೋಪಾಯ ಮತ್ತು ಅಡಳಿತದ ಕುರಿತು ಚರ್ಚಿಸಲಾಯಿತು.ಕಾರ್ಯಾಗಾರದಲ್ಲಿ ೬೦ಕ್ಕೂ ಅರಣ್ಯ ಹಕ್ಕು ಸಮಿತಿ ಸದಸ್ಯರು, ಅಧ್ಯಕ್ಷರು, ಕಾರ್ಯದರ್ಶಿಗಳು , ತಾಲೂಕು ಸೋಲಿಗ ಅಭಿವೃದ್ದಿ ಸಂಘದ ಅಧ್ಯಕ್ಷ ದಾಸೇಗೌಡ, ಅಡವಿ ಸಂಘದ ಅದ್ಯಕ್ಷೆ ಮಾದಮ್ಮ, ಮುಖಂಡರಾದ ಸಿದ್ದೇಗೌಡ, ಸಣ್ಣರಂಗೇಗೌಡ, ಮಸಣಮ್ಮ, ರಂಗಮ್ಮ, ಸಿದ್ದಮ್ಮ, ಗಿರಿಮಾದೇಗೌಡ, ಶಿವಕುಮಾರ, ಮರಿಯನಕೇತೇಗೌಡ, ಅಚ್ಚುಗೇಗೌಡ ಮುತಾಂದವರು ಭಾಗವಹಿಸಿದ್ದರು.