ಸಾರಾಂಶ
ಕಾರವಾರ: ಅಂದಾಜು 1900 ಮೀಟರ್ ಎತ್ತರ ಇರುವ ಇಲ್ಲಿನ ಶಿರ್ವೆ ಗುಡ್ಡವನ್ನು ವ್ಯಕ್ತಿಯೊಬ್ಬರು ಒಂದೇ ದಿನ ಮೂರುಬಾರಿ ಏರಿ ಸಾಧನೆ ಮಾಡಿದ್ದಾರೆ.
ಗುರುವಾರ ಮೂರು ಬಾರಿ ಶಿರ್ವೆ ಗುಡ್ಡ ಏರಿ ಇಳಿದು ಕತ್ತಲಾವರಿಸುತ್ತಿದ್ದ ಕಾರಣ ನಾಲ್ಕನೆಯ ಬಾರಿ ಏರಿಳಿಯುವುದನ್ನು ನಿಲ್ಲಿಸಿದ ರಮೇಶ ಶ್ರಿನಿವಾಸಪುರ ಅವರು ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಮಾತ್ರವಲ್ಲ, ಸಹ್ಯಾದ್ರಿಯ ಪರ್ವತಗಳ ಪೈಕಿ ಎತ್ತರದ ತುದಿಯನ್ನು ಏರಿಳಿದು ವಿಭಿನ್ನ ಸಾಧನೆ ಮಾಡಿದ್ದಾರೆ. ಸ್ಥಳೀಯರಲ್ಲಿ ಪ್ರವಾಸೋದ್ಯಮ ಹಾಗೂ ಚಾರಣಪ್ರಿಯರಲ್ಲಿ ಈ ಬಗ್ಗೆ ಆಸಕ್ತಿ ಮೂಡಿಸಲು ಶಿರ್ವೆ ಗುಡ್ಡದ ಬಗ್ಗೆ ಹೊರ ಜಗತ್ತಿಗೆ ಯುವ ಜನರಿಗೆ ತಲುಪಲು ಈ ವಿಭಿನ್ನ ಯೋಜನೆ ಕೈಗೊಂಡಿದ್ದಾಗಿ ರಮೇಶ ಶ್ರಿನಿವಾಸಪುರ ತಿಳಿಸಿದ್ದಾರೆ.ಕೈಗಾದಲ್ಲಿ ಉದ್ಯೋಗಿಯಾಗಿರುವ ರಮೇಶ ಈಗಾಗಲೇ ಎವೆರೆಸ್ಟ್ ಬೇಸ್ ಕ್ಯಾಂಪ್ ಸೇರಿದಂತೆ ಹಿಮಾಚಲ ಮತ್ತು ಉತ್ತರಾಖಂಡ ಹಾಗೂ ಕಾಶ್ಮೀರ ವ್ಯಾಲಿಗಳಲ್ಲಿ ಹಲವು ದಾಖಲೆ ಚಾರಣ ಸಾಹಸ ಕೈಗೊಂಡಿದ್ದು, ಬೈಕ್‌ನಲ್ಲಿ ಕನ್ಯಾಕುಮಾರಿ, ಕಾಶ್ಮೀರದಲ್ಲಿ ಡರ್ಟ್ ಟ್ರ್ಯಾಕ್ ಬೈಕ್ ಟ್ರಾವೆಲಿಂಗ್ ಕೈಗೊಂಡಿದ್ದಾರೆ.
ಪುಣೆಯಿಂದ ಗೋವಾ ಮಾರ್ಗವಾಗಿ ಸೈಕ್ಲಿಂಗ್ ಮಾಡುತ್ತಾ ದಿನಕ್ಕೆ ಇನ್ನೂರು ಕಿಮೀ, ಅಧಿಕ ಸೈಕ್ಲಿಂಗ್ ಮಾಡಿ ಹಲವು ಮ್ಯಾರಥಾನ್‌ಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಕೇವಲ ಉತ್ಸವ ಮತ್ತು ಹಬ್ಬದ ದಿನಗಳಲ್ಲಿ ಮಾತ್ರ ಶಿರ್ವೆ ಕಡೆಗೆ ಜನ ಗಮನ ಹೋಗುವ ಈ ಚಾರಣದ ತುದಿಗೆ ಯಾವಾಗಲೂ ಹಸಿರು ಪರ್ವತದ ಚಾರಣ ಅವಕಾಶ ಇದ್ದು ಇಲ್ಲಿ ಮೂಲ ಸೌಲಭ್ಯ ಕಲ್ಪಿಸುವ ಅಗತ್ಯವಿದೆ. ಕಥಾಯಾನ ತಂಡದ ನಿರ್ದೇಶಕ ಸಂತೋಷಕುಮಾರ ಮೆಹೆಂದಳೆ ಮತ್ತು ಸದಸ್ಯರು ಸಹಕಾರ ಮತ್ತು ಬೆಂಬಲ ನೀಡಿದ್ದು, ಏರಿಳಿಯಲು ಜತೆಯಾಗಿ ಮತ್ತೊಬ್ಬ ಸಹೋದ್ಯೋಗಿ ಶಿವಬಸವಯ್ಯ ಇವರಿಗೆ ಸಾಥ್ ನೀಡಿದ್ದರು.ಮೀಟರ್ ಬಡ್ಡಿ: ಬಂಧಿತರ ಸಂಖ್ಯೆ 30ಕ್ಕೆ ಏರಿಕೆಮುಂಡಗೋಡ: ದರೋಡೆ ಮತ್ತು ಮೀಟರ್ ಬಡ್ಡಿ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶುಕ್ರವಾರ ಮತ್ತಷ್ಟು ಜನರನ್ನು ಬಂಧಿಸಿದ್ದು, ಈವರೆಗೆ ಒಟ್ಟು ೩೦ಕ್ಕೂ ಅಧಿಕ ಜನರು ಬಂಧನಕ್ಕೊಳಗಾಗಿದ್ದಾರೆ.ಮಲ್ಲಿಕಜಾನ್ ಜಹೀರ ಶಬ್ಬೀರ ಶೇಖ್, ಮಹಮ್ಮದ ಇಬ್ರಾಹಿಂ ರಫಿಕ್ ಮಕ್ಬೂಲ್‌ಸಾಬ ಜಮಖಂಡಿ, ಶಾಹಿಲ್ ಬಾಬಾಬುಡನ್ ನಂದಿಗಟ್ಟಿ, ಹರುಣ ಹಮ್ಬದ ಶೇಖ್, ಮಹಮ್ಮದ ಯೂಸುಪ್ ರಿಯಾಜ್ ಅಹ್ಮದ್ ಗಡವಾಲೆ, ಮಹಮ್ಮದ ಇಸ್ಮಾಯಿಲ್ ಸೈಪುದ್ದಿನ್ ಪಾನವಾಲೆ, ತನ್ವೀರ ಅಬ್ದುಲ್ ಹಮೀದ್ ಅಕ್ಕಿಆಲೂರ, ದಾದಾಕಲಂದರ್ ಅಬ್ದುಲ್‌ಖಾದರ್ ಮಲ್ಲಿಗಾರ ಬಂಧಿತ ಆರೋಪಿಗಳು. ಇವರು ಬಡಿಗೆ, ಕಬ್ಬಿಣದ ರಾಡ್‌ಗಳು, ಚಾಕು, ಕಾರದ ಪುಡಿ ಇಟ್ಟುಕೊಂಡು ರಸ್ತೆಯಲ್ಲಿ ಜನರನ್ನು ತಡೆದು ಅವರಿಗೆ ಹೆದರಿಸಿ ಅವರಿಂದ ಬೆಲೆಬಾಳುವ ವಸ್ತು ಹಾಗೂ ದುಡ್ಡು ಕಸಿದುಕೊಂಡು ದರೋಡೆ ಮಾಡುವ ತಯಾರಿ ಮಾಡಿಕೊಂಡಿದ್ದಾಗ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಎಸ್ಪಿ ಎಂ. ನಾರಾಯಣ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.