ಸಾಮಾಜಿಕ ನ್ಯಾಯ ಪ್ರತಿಪಾದನೆ ಎಸ್‌ಎಸ್‌ಡಿ ಧ್ಯೇಯ

| Published : Nov 11 2024, 12:47 AM IST

ಸಾಮಾಜಿಕ ನ್ಯಾಯ ಪ್ರತಿಪಾದನೆ ಎಸ್‌ಎಸ್‌ಡಿ ಧ್ಯೇಯ
Share this Article
  • FB
  • TW
  • Linkdin
  • Email

ಸಾರಾಂಶ

ಅಂಬೇಡ್ಕರ್ ರಚಿಸಿರುವ ಸಂವಿಧಾನವೇ ಪವಿತ್ರ ಗ್ರಂಥವಾಗಿದ್ದು, ಈ ದೇಶದಲ್ಲಿ ಸಮಾನತೆ ನೆಲಸಲು ಕಾರಣವಾಗಿದೆ, ಶೋಷಿತರು, ಮಹಿಳೆಯರು, ದೀನದಲಿತರ ರಕ್ಷಣೆ ಇದರಿಂದಲೇ ಆಗುತ್ತಿದೆ. ಎಲ್ಲಾ ತುಳಿತಕ್ಕೆ ಒಳಗಾದವರ ಹಕ್ಕುಗಳನ್ನು ಕಾಪಾಡುವ ಉದ್ದೇಶದಿಂದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಸ್ಥಾಪಿಸಿದ ಸಂಘಟನೆ ಇದಾಗಿದೆ,

ಸ್ವಾಭಿಮಾನಿ ಚಳವಳಿಯ ಮುನ್ನಡೆಗಾಗಿ ಸ್ವಯಂ ರಕ್ಷಣೆಯ ಕಾರ್ಯಪಡೆಯ ಸಿದ್ಧತೆಯೇ ಸಮಾತಾ ಸೈನಿಕ ದಳದ ಸ್ಥಾಪನೆಗೆ ಮೂಲ ಕಾರಣವಾಗಿದ್ದು, ಸಾಮಾಜಿಕ ನ್ಯಾಯ ಪ್ರತಿಪಾದಿಸುವವರೊಂದಿಗೆ ಎಸ್‌ಎಸ್‌ಡಿ ಸದಾ ಹೆಗಲುಕೊಟ್ಟು ನಿಲ್ಲುತ್ತದೆ ಎಂದು ಸಮತಾ ಸೈನಿಕ ದಳದ ರಾಷ್ಟ್ರೀಯ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಹೇಳಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸಮತಾಸೈನಿಕ ದಳದ ಶತಮಾನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅ‍ವರು, ಮಹಾರಾಷ್ಟ್ರದಲ್ಲಿ ಅಧಿಕೃತವಾಗಿ ಪ್ರಾರಂಭವಾದ ಸಂಘಟನೆ ಕಳೆದ ನೂರು ವರ್ಷಗಳಲ್ಲಿ ದೇಶದಾದ್ಯಂತ ತನ್ನ ಶಾಖೆಗಳನ್ನು ಹೊಂದಿದೆ, ಶೋಷಿತರ ರಕ್ಷಣೆಗೆ ನಮ್ಮ ಹೋರಾಟ ನಿರಂತರವಾಗಿ ನಡೆಸಿಕೊಂಡು ಬರಲಾಗಿದೆ ಎಂದು ತಿಳಿಸಿದರು.

ಸಂವಿಧಾನವೇ ಪವಿತ್ರ ಗ್ರಂಥ

ಅಂಬೇಡ್ಕರ್ ರಚಿಸಿರುವ ಸಂವಿಧಾನವೇ ಪವಿತ್ರ ಗ್ರಂಥವಾಗಿದ್ದು, ಈ ದೇಶದಲ್ಲಿ ಸಮಾನತೆ ನೆಲಸಲು ಕಾರಣವಾಗಿದೆ, ಶೋಷಿತರು, ಮಹಿಳೆಯರು, ದೀನದಲಿತರ ರಕ್ಷಣೆ ಇದರಿಂದಲೇ ಆಗುತ್ತಿದೆ. ಎಲ್ಲಾ ತುಳಿತಕ್ಕೆ ಒಳಗಾದವರ ಹಕ್ಕುಗಳನ್ನು ಕಾಪಾಡುವ ಉದ್ದೇಶದಿಂದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಸ್ಥಾಪಿಸಿದ ಸಂಘಟನೆ ಇದಾಗಿದೆ, ಅವರ ಸಿದ್ದಾಂತಗಳನ್ನು ಅನುಸರಿಸುವ ಮೂಲಕ ನಮ್ಮ ಹೋರಾಟ ಮುಂದುವರೆದಿದೆ ಎಂದು ತಿಳಿಸಿದರು

ಶತಮಾನೋತ್ಸವದ ಅಂಗವಾಗಿ ಕಲಾತಂಡಗಳೊಂದಿಗೆ ಅಂಬೇಡ್ಕರ್ ಭಾವ ಚಿತ್ರ ಇರುವ ಬೆಳ್ಳಿ ರಥದ ಮೆರವಣಿಗೆ ಕೋಲಾರ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿಬಂತು.ಸಾಧಕರಿಗೆ ಸನ್ಮಾನ

ಇದೇ ಸಂರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು, ಸಮಾಜಕಲ್ಯಾಣ ಇಲಾಖೆಜಂಟಿ ನಿರ್ದೇಶಕ ಶ್ರೀನಿವಾಸ್, ದಲಿತ ಮುಖಂಡರಾದ ಕೆ.ಟಿ.ನಾಗರಾಜ್, ಬೆಳಮಾರನಹಳ್ಳಿ ಆನಂದ್, ಸೂರಿ ಅವರನ್ನು ಸನ್ಮಾನಿಸಲಾಯಿತು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಗ್ರಹಾರ ಬಿ.ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಕಾರ್ಯದರ್ಶಿ ಜಿ.ಸಿ.ವೆಂಕಟರಮಣಪ್ಪ, ಜಿಲ್ಲಾಧ್ಯಕ್ಷ ಗುಟ್ಟಹಳ್ಳಿ ಶ್ರೀನಿವಾಸ್, ಸಮತಾ ಸೈನಿಕ ದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಬೇಟಪ್ಪ, ಮುಖಂಡ ಶೆಟ್ಟಹಳ್ಳಿ ನಾಗರಾಜ್,ಶ್ರೀನಿವಾಸಪುರ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಅರವಿಂದ್ ಇದ್ದರು.