ಅದ್ಯಪಾಡಿ ಶ್ರೀ ಅದಿನಾಥೇಶ್ವರ ದೇವಳ ವೆಬ್ ಸೈಟ್ ಲೋಕಾರ್ಪಣೆ

| Published : Dec 27 2024, 12:48 AM IST

ಅದ್ಯಪಾಡಿ ಶ್ರೀ ಅದಿನಾಥೇಶ್ವರ ದೇವಳ ವೆಬ್ ಸೈಟ್ ಲೋಕಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

900 ವರ್ಷಗಳ ಇತಿಹಾಸ ಇರುವ, ಮುಜರಾಯಿ ಇಲಾಖೆಯ ಎ ಗ್ರೇಡ್‌ ದೇವಾಲಯವಾಗಿರುವ ಅದ್ಯಪಾಡಿಯ ಶ್ರೀ ಆದಿನಾಥೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಮಾರ್ಚ್‌ 16ರಂದು ಬ್ರಹ್ಮಕಲಶಾಭಿಷೇಕ ಸಂಪನ್ನವಾಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ಕ್ಷೇತ್ರದ ವೆಬ್‌ಸೈಟ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಅಕೌಂಟ್‌ಗಳನ್ನು ಗುರುವಾರ ಅನಾವರಣಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು900 ವರ್ಷಗಳ ಇತಿಹಾಸ ಇರುವ, ಮುಜರಾಯಿ ಇಲಾಖೆಯ ಎ ಗ್ರೇಡ್‌ ದೇವಾಲಯವಾಗಿರುವ ಅದ್ಯಪಾಡಿಯ ಶ್ರೀ ಆದಿನಾಥೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಮಾರ್ಚ್‌ 16ರಂದು ಬ್ರಹ್ಮಕಲಶಾಭಿಷೇಕ ಸಂಪನ್ನವಾಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ಕ್ಷೇತ್ರದ ವೆಬ್‌ಸೈಟ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಅಕೌಂಟ್‌ಗಳನ್ನು ಗುರುವಾರ ಅನಾವರಣಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ, ಕ್ಷೇತ್ರದ ಸಾವಿರಾರು ವರ್ಷಗಳ ಇತಿಹಾಸ, ಕಾರಣಿಕ, ವ್ಯವಸ್ಥೆ, ಪೂಜೆ ಮತ್ತು ಅದರ ಸಮಯವನ್ನು ಭಕ್ತರಿಗೆ ತಿಳಿಸುವ ನಿಟ್ಟಿನಲ್ಲಿ ವೆಬ್ ಸೈಟ್ ಅನಾವರಣ ಮಾಡಿರುವುದು ಶ್ಲಾಘನೀಯ. ಇಂದಿನ ಕಾಲಘಟ್ಟದಲ್ಲಿ ಇದು ಅತ್ಯವಶ್ಯವೂ ಆಗಿದೆ ಎಂದು ಹೇಳಿದರು.ದೇವಳದ ಪ್ರಧಾನ ಅರ್ಚಕ ಸದಾಶಿವ ಭಟ್ ಮಾತನಾಡಿ, ಕ್ಷೇತ್ರದಲ್ಲಿ ಭಗವದ್ಭಕ್ತರ ಸಹಕಾರದಿಂದ ಸಾಂಗವಾಗಿ ಜೀರ್ಣೋದ್ಧಾರ ಕಾರ್ಯ ನೆರವೇರಲಿ. ಈಗಾಗಲೇ ಸಹಸ್ರಾರು ಮಂದಿ ದೇವರಲ್ಲಿ ಹರಕೆ ಹೊತ್ತು ರೋಗಮುಕ್ತರಾಗಿದ್ದಾರೆ. ಇಂತಹ ಕಾರಣಿಕ ಕ್ಷೇತ್ರ ಅಭಿವೃದ್ಧಿಯಾಗುತ್ತಿರುವುದು ಸಂತಸ ತಂದಿದೆ ಎಂದರು.

ರಮೇಶ್ ಉಡುಪ ಪವಿತ್ರಪಾಣಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಏತಮೊಗರು ದೊಡ್ಡಮನೆ ಹರೀಶ್ ಶೆಟ್ಟಿ, ನವೀನ್ ಶೆಟ್ಟಿ ಎಡ್ಮೆಮಾರ್, ಸತೀಶ್ ಆಳ್ವ ಬೈಲು ಮೂಡುಕರೆ, ಲೀಲಾಕ್ಷ ಕರ್ಕೇರ, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಜಿತ್ ಆಳ್ವ ಏತಮೊಗರು ಗುತ್ತು, ಬೈಲುಬೀಡು ಅಶ್ವಿನ್ ಬಳ್ಳಾಲ್, ಭುಜಂಗ ಕುಲಾಲ್ ಅದ್ಯಪಾಡಿ, ಶ್ರೀಧರ ಆಳ್ವ ಕಂದಾವರ ಬಾಳಿಕೆ, ರಮಾನಾಥ್ ಅತ್ತಾರ್, ರಾಜೀವ ಆಳ್ವ ಅದ್ಯಪಾಡಿ ಗುತ್ತು, ಶೆಡ್ಡೆ ಮಂಜುನಾಥ ಭಂಡಾರಿ ಮತ್ತಿತರರು ಇದ್ದರು.