ಸಾರಾಂಶ
ದಾಬಸ್‌ಪೇಟೆ: ಹಂಚಿಕೆಯಾಗಿದ್ದ ನಿವೇಶನದಲ್ಲಿ ಕಾರ್ಖಾನೆ ನಿರ್ಮಿಸಲು ಮಂಜೂರಾತಿ ನೀಡಲು ಕೈಗಾರಿಕೋದ್ಯಮಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ನಿವಾಸಿ ನಾರಾಯಣ ಸ್ವಾಮಿಯವರಿಂದ 1.2 ಲಕ್ಷ ಲಂಚ ಪಡೆಯುತ್ತಿದ್ದಾಗ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಸೋಂಪುರ ಕೈಗಾರಿಕಾ ಪ್ರದೇಶದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ನವೀನ್ ತೋಟಗಂಟಿ ಮತ್ತು ಸಹಾಯಕ ಎಂಜಿನಿಯರ್ (ಎಇ) ಜಿ.ಎಚ್ ಮಲ್ಲಾಪುರ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಕೈಗಾರಿಕಾ ಯೋಜನೆಗೆ ಅನುಮೋದನೆ ನೀಡಲು ಎಇಇ ನವೀನ್ ತೋಟಗಂಟಿ ಮತ್ತು ಎಇ ಮಲ್ಲಾಪುರ ಜಿಎಚ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಕುರಿತು ನಾರಾಯಣ ಸ್ವಾಮಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಬೆಂಗಳೂರಿನ ಕಚೇರಿಯಲ್ಲಿ 1.2 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಇಬ್ಬರನ್ನು ಬಂಧಿಸಲಾಗಿದೆ. ಲೋಕಾಯುಕ್ತ ಎಸ್.ಪಿ.ಶ್ರೀನಾಥ್ ಜೋಶಿ ರವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದರು.ಪೋಟೋ 6 : ಸಹಾಯಕ ಎಂಜಿನಿಯರ್ (ಎಇ) ಜಿ.ಎಚ್.ಮಲ್ಲಾಪುರ
ಪೋಟೋ 7 : ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನವೀನ್ ತೋಟಗಂಟಿ