ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ: ಕಾಗವಾಡ ತಾಲೂಕಿನ ಜುಗೂಳ ಕೆಎಸ್ಎಸ್ ಪ್ರೌಢಶಾಲೆಯಲ್ಲಿ 1997 ಹಾಗೂ 98 ರಲ್ಲಿ ಕಲಿತ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸುಮಾರು 25 ವರ್ಷಗಳ ಬಳಿಕ ಗುರು-ಶಿಷ್ಯರು ಹಾಗೂ ಗೆಳೆಯ, ಗೆಳತಿಯರು ಒಂದು ಕಡೆ ಸೇರಿ ಹಳೆಯ ದಿನಗಳನ್ನು ಮೆಲಕು ಹಾಕಿದರು. ಅಲ್ಲದೇ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಭ್ರಮಿಸಿದರು.
ಕನ್ನಡಪ್ರಭ ವಾರ್ತೆ ಕಾಗವಾಡ:
ಕಾಗವಾಡ ತಾಲೂಕಿನ ಜುಗೂಳ ಕೆಎಸ್ಎಸ್ ಪ್ರೌಢಶಾಲೆಯಲ್ಲಿ 1997 ಹಾಗೂ 98 ರಲ್ಲಿ ಕಲಿತ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸುಮಾರು 25 ವರ್ಷಗಳ ಬಳಿಕ ಗುರು-ಶಿಷ್ಯರು ಹಾಗೂ ಗೆಳೆಯ, ಗೆಳತಿಯರು ಒಂದು ಕಡೆ ಸೇರಿ ಹಳೆಯ ದಿನಗಳನ್ನು ಮೆಲಕು ಹಾಕಿದರು. ಅಲ್ಲದೇ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಭ್ರಮಿಸಿದರು.ಪ್ರಾಥಮಿಕ ಹಾಗೂ ಪ್ರೌಢ ಶಾಲಾ ದಿನಗಳನ್ನು ನೆನೆದು ಅನೇಕ ವಿದ್ಯಾರ್ಥಿಗಳು ಭಾವುಕರಾದರು. ಶಾಲೆಯ ಕುರಿತಾದ ವಿಡಿಯೋ ವೀಕ್ಷಿಸಿ, ಹಳೆಯ ನೆನಪುಗಳನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮೆಲಕು ಹಾಕಿದರು. ಭವಿಷ್ಯಕ್ಕೆ ಅಡಿಪಾಯ ಹಾಕಿದ ಶಿಕ್ಷಕರ ಕಾರ್ಯವನ್ನು ವಿದ್ಯಾರ್ಥಿಗಳು ಭಕ್ತಿಪೂರ್ವಕವಾಗಿ ನೆನೆದರು. ಬಳಿಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿ ಗ್ರಾಮೀಣ ಕ್ರೀಡೆಗಳನ್ನು ಆಡುವ ಮೂಲಕ ಎಲ್ಲರ ಗಮನ ಸೆಳೆದರು.
25 ವರ್ಷಗಳ ನಂತರ ಹಳೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಂದೇ ವೇದಿಕೆಯಲ್ಲಿ ಸಮಾಗಮವಾಗಿರುವುದು ಭಾವುಕತೆಗೆ ಸಾಕ್ಷಿಯಾಗಿತ್ತುಗುರುಗಳಾದ ಶಂಕರ ಬೆಳ್ಳಂಕಿ, ಶಿವಗೌಡ ಪಾಟೀಲ, ಅಣ್ಣಾಸಾಬ ವಾಂಟೆ, ಮಲ್ಲಪ್ಪ ಮರೇಗುದ್ದಿ, ಮಹಾವೀರ ಮೋಳೆ, ಮೃತ್ಯಂಜಯ ಹೂಗಾರ, ಭಾಸ್ಕರ ಭೋಸಲೆ, ಬಾಬು ಸಾವಳಜೆ, ಪಾರೀಸ ಹರೋಲಗೆ, ಗೋಪಾಲ ರಾಯಗೊಣ್ಣವರ, ಎಸ್.ಬಿ.ಸುಂಕೆ, ಶಿವಲಿಂಗ ಘಟಗೆ, ಬಾಳಪ್ಪ ಬಂಡಗರ,ಶಿವಗೌಡ ಪಾಟೀಲ, ಸಿದ್ದು ಐಹೊಳೆ, ಶಾಮಗೌಡ ಪಾಟೀಲ, ಛಾಯಾ ಲಕ್ಷ್ಮಣ ಜಾಧವ, ಮಾಲನಬಿ ಬಂಡು ಕಳಾವಂತ ಸೇರಿದಂತೆ ಅನೇಕ ಗುರುಗಳ ಹಾಗೂ ಗುರು ಮಾತೆಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಆರ್.ಬಿ.ಪಾಟೀಲ ವಹಿಸಿದ್ದರು. ಈ ವೇಳೆ ಎಸ್.ಆರ್.ಬೆಳ್ಳಂಕಿ ಹಾಗೂ ಮುಖ್ಯೋಪಾದ್ಯಾಯ ಎಂ.ಸಿ.ಹೂಗಾರ ಗುರುವಂದನೆ ಸ್ವೀಕರಿಸಿ ಮಾತನಾಡಿದರು. 1997-98 ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು ಭಾಗವಹಿಸಿದ್ದರು.