ಸಾರಾಂಶ
ಸ್ವಾತಂತ್ರ್ಯ ಬಳಿಕ ಭಾರತ ನಿರೀಕ್ಷೆಗೂ ಮೀರಿದ ಸಾಧನೆ ಮಾಡುತ್ತಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ
ಸ್ವಾತಂತ್ರ್ಯ ಬಳಿಕ ಭಾರತ ನಿರೀಕ್ಷೆಗೂ ಮೀರಿದ ಸಾಧನೆ ಮಾಡುತ್ತಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ೭೯ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದರು. ಪ್ರತಿಯೊಬ್ಬರು ದೇಶದ ಅಭಿವೃದ್ಧಿ ಹಾಗೂ ರಕ್ಷಣೆ ವಿಷಯದಲ್ಲಿ ಬೆಂಬಲಿಸಿದರೆ ಉಜ್ವಲ ಭಾರತವಾಗಿ ಪ್ರಜ್ವಲಿಸಿದೆ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಗಳಿಸಲು ಶ್ರಮಿಸಿದ ಮಹಾತ್ಮ ಗಾಂಧಿ ಸೇರಿದಂತೆ ಅನೇಕ ನಾಯಕರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದವರ ನಾಯಕರ ಸ್ಮರಿಸಬೇಕು. ಅವರ ಆದರ್ಶ ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ಬಂತು. ಈ ನೆಲದ ಕಾನೂನು ಇತರೆ ಯಾವ ರಾಷ್ಟ್ರದಲ್ಲಿ ಎಲ್ಲೂ ಇಲ್ಲ. ಯುವಕರು ಸಮಾಜಕ್ಕೆ ಮಾದರಿಯಾಗಿರಬೇಕು ಎಂದರು.ಮಳೆ ಬಂದ ಹಿನ್ನೆಲೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿಲ್ಲ:ಪಟ್ಟಣದಲ್ಲಿ ಮಳೆ ಬಂದ ಹಿನ್ನೆಲೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿಲ್ಲ. ಸ್ವಾತಂತ್ರ್ಯೋತ್ಸವ ಆರಂಭಕ್ಕೂ ಮುನ್ನ ತುಂತುರು ಮಳೆ ಬಂದಿತಾದರೂ ಕೆಲ ಕ್ಷಣದ ಬಳಿಕ ಮಾಯವಾದ ಮಳೆ ಸ್ವಾತಂತ್ರೋತ್ಸವದ ಸಂದೇಶ ಮುಗಿದ ತಕ್ಷಣ ಮತ್ತೆ ಬೀಳಲು ಶುರುವಾಯಿತು. ತಹಸೀಲ್ದಾರ್ ತನ್ಮಯ್ ಎಂ.ಎಸ್ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣದ ಬಳಿಕ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ತಾಲೂಕಿನ ಅಣ್ಣೂರು ಕೇರಿ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕ ಕೆ.ರಂಗೇಗೌಡ ಪ್ರಧಾನ ಭಾಷಣದಲ್ಲಿ ಸ್ವಾತಂತ್ರ್ಯೋತ್ಸವ ಕುರಿತು ಮಾತನಾಡಿದರು.
ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಮಧು,ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ, ಎಪಿಎಂಸಿ ಅಧ್ಯಕ್ಷ ಆರ್.ಎಸ್.ನಾಗರಾಜು,ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್,ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು,ಪುರಸಭೆ ಸದಸ್ಯರಾದ ಕಿರಣ್ ಗೌಡ,ಮಹಮದ್ ಇಲಿಯಾಸ್, ಶಶಿಧರ್ ಪಿ ದೀಪು, ಎನ್.ಕುಮಾರ್, ಶ್ರೀನಿವಾಸ್(ಕಣ್ಣಪ್ಪ), ಎಲ್.ನಿರ್ಮಲ, ಮಹದೇವಮ್ಮ,ರಾಜಗೋಪಾಲ್,ಪುರಸಭೆ ಮಾಜಿ ಉಪಾಧ್ಯಕ್ಷರಾದ ಎಸ್‌ಆರ್‌ಎಸ್ ರಾಜು,ಹೀನಾ ಕೌಸರ್,ತಾಪಂ ಕಾರ್ಯ ನಿರ್ವಾಹಕ ಷಣ್ಮುಗಂ,ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ,ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ,ಕಾರ್ಗಳ್ಳಿ ಸುರೇಶ್,ಮಾಜಿ ಸದಸ್ಯ ಬಸವರಾಜು ಸೇರಿದಂತೆ ಸಂಘ,ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳಿದ್ದರು.