ರಾಜ್ಯದಲ್ಲಿ ಲವ್‌ ಜಿಹಾದ್‌ ಬಳಿಕ ಲ್ಯಾಂಡ್‌ ಜಿಹಾದ್‌ ಶುರು

| Published : Nov 04 2024, 12:33 AM IST

ರಾಜ್ಯದಲ್ಲಿ ಲವ್‌ ಜಿಹಾದ್‌ ಬಳಿಕ ಲ್ಯಾಂಡ್‌ ಜಿಹಾದ್‌ ಶುರು
Share this Article
  • FB
  • TW
  • Linkdin
  • Email

ಸಾರಾಂಶ

ಕೈಲಾಗದ ಕಾಂಗ್ರೆಸ್ ಸರ್ಕಾರ ಕೃತ್ಯಕ್ಕೆ ಶಕ್ತಿ ನೀಡಿದೆ: ಶಾಸಕ ಚನ್ನಬಸಪ್ಪ ಕಿಡಿ ಕಾರಿದರು

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸರ್ಕಾರಿ ಜಮೀನು, ರೈತರ ಆಸ್ತಿಗಳನ್ನು ವಕ್ಫ್ ಬೋರ್ಡ್‌ಗೆ ಸೇರಿಸಿ ಕೊಳ್ಳಲಾಗುತ್ತಿದೆ. ಲವ್ ಜಿಹಾದ್ ನಂತರ ಲ್ಯಾಂಡ್ ಜಿಹಾದ್ ಶುರುವಾಗಿದೆ. ಕೈಲಾಗದ ಕಾಂಗ್ರೆಸ್ ಸರ್ಕಾರ ಈ ಕೃತ್ಯಕ್ಕೆ ಹೆಚ್ಚು ಶಕ್ತಿ ನೀಡಿದೆ ಎಂದು ಶಾಸಕ ಎಸ್‌.ಎನ್‌.ಚನ್ನಬಸಪ್ಪ ಕಿಡಕಾರಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಬೋರ್ಡ್ ಲ್ಯಾಂಡ್ ಜಿಹಾದ್ ಕಾರ್ಯ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ವಕ್ಫ್‌ಗೆ ಶಕ್ತಿ ಕೊಡುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಷಡ್ಯಂತ್ರದ ಮೂಲಕ ಲ್ಯಾಂಡ್ ಜಿಹಾದ್ ಗೆ ವಕ್ಫ್ ಮಂಡಳಿ ಕೈ ಹಾಕಿದೆ. ವಕ್ಫ್ ಬೋರ್ಡ್ ಗೆ ಕೇಂದ್ರ ಸರ್ಕಾರ ಕಾನೂನು ತಿದ್ದುಪಡಿ ತರುವ ಹಿನ್ನೆಲೆಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ಕೈಹಾಕಿದ್ದಾರೆ. ತಲಾಕ್ ತಲಾಕ್ ತಲಾಕ್ ಎಂದು ಮದುವೆಯಾದ ಹೆಣ್ಣನ್ನು ಕೈ ಬಿಡುತ್ತಿದ್ದರು. ಈಗ ವಕ್ಫ್ ಎಂದು ಆಸ್ತಿಯನ್ನು ಕಬಳಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಭಾರತ ಬಿಟ್ಟಿ ಬಿದ್ದಿಲ್ಲ. 1850 ರಿಂದ ಈ ರೀತಿ ನಡೆಯುತ್ತಿದೆ. ಲ್ಯಾಂಡ್ ಜಿಹಾದ್ ಗೆ ಹಿಂದೂ ಸಮಾಜ ಬ್ರೇಕ್ ಹಾಕಲಿದೆ

ದೇವಸ್ಥಾನಗಳೇ ಇಂದು ವಕ್ಫ್ ಆಸ್ತಿಯಾಗಿದೆ. ಅಲ್ಲಾನ ಬಗ್ಗೆ ನಿನಗೆ ಪ್ರೀತಿ ಇದ್ದರೆ ನಿನ್ನ ಬಂಗಲೆಯನ್ನು ಬರೆದುಕೊಡು ಎಂದು ಸಚಿವ ಜಮೀರ್‌ಗೆ ಹೇಳಿದ್ದಾರೆ. ಜಮೀರ್ ಅಂಥವರನ್ನು ಹುಡುಕಿ ಹೊಡೆಯುವ ಕೆಲಸ ಪ್ರಾರಂಭ ಆಗುತ್ತದೆ. ಓಡಾಡಿ ಹೊಡಿಯೋ ಕೆಲಸ ಪ್ರಾರಂಭ ಆಗುತ್ತೆ ಎಂಬ ಎಚ್ಚರಿಕೆ ನೀಡಿದರು.

ಬಡವನ ಆಸ್ತಿಯನ್ನು ವಕ್ಫ್ ಗೆ ತೆಗೆದುಕೊಳ್ಳುವ ಕೆಲಸ ನಡೆಯುತ್ತಿದೆ. ಇದೇ ರೀತಿ ನೀವು ಮುಂದುವರೆದರೆ ಬಡವನ ಸಿಟ್ಟು ರಟ್ಟೆಗೆ ಬರುತ್ತದೆ. ಶಿವಮೊಗ್ಗ ಜಿಲ್ಲೆಯ 44 ಎಕರೆ 20 ಗುಂಟೆ ಜಮೀನು ಸೇರಿದೆ ಎನ್ನಲಾಗಿದೆ. ಶಿವಮೊಗ್ಗದ ಡಿಸಿ ಕಚೇರಿಯ ಎದುರು ಈದ್ಗಾ ಮೈದಾನವಿದೆ, ಅದು ನಗರಸಭೆ ಆಸ್ತಿ. ಆದರೆ ವಕ್ಫ್ ಬೋರ್ಡ್ ನಮ್ಮದು ಎಂದು ಹೊರಟಿದ್ದರು. ಮಂಡ್ಲಿಯಲ್ಲಿ ಶಿವಪ್ಪ ನಾಯಕ ವಂಶಸ್ಥರ ಸಮಾಧಿ ಇದೆ ಅದು ಕೂಡ ನಮ್ಮದೆಂದು ಹೇಳಿದರು. ಆಯಕಟ್ಟಿನ ಪ್ರದೇಶದ ಎಕರೆಗಟ್ಟಲೆ ಜಾಗವನ್ನು ವಶಪಡಿಸಿಕೊಳ್ಳುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

ವಿನಾಯಕ ಚಿತ್ರಮಂದಿರ ಪಕ್ಕದ ಜಾಗ ನಗರಸಭೆ ಆಸ್ತಿ ಎಂದು ಇವತ್ತಿಗೂ ನಮಗೆ ವಾಣಿಜ್ಯ ಸಂಕೀರ್ಣ ಕಟ್ಟಲು ಆಗಲಿಲ್ಲ.

ಇದೇ ರೀತಿ ಮನಸ್ಥಿತಿ ಮುಂದುವರೆಸಿಕೊಂಡು ಹೋಗುವುದಾದರೆ ಜಮೀರ್ ಅಹ್ಮದ್ ನೀವು ಶಿವಮೊಗ್ಗಕ್ಕೆ ಬರುವ ಧೈರ್ಯ ಮಾಡಬೇಡಿ. ನೀವು ಬಂದರೆ ಶಿವಮೊಗ್ಗದ ಆಸ್ತಿಗಳನ್ನು ವಕ್ಫ್ ಬೋರ್ಡ್‌ಗೆ ಸೇರಿದ್ದು ಎಂದು ಬರೆದು ಹೋಗುತ್ತೀರಾ. ಕಾಂಗ್ರೆಸ್ ನವರನ್ನು ಭಗವಂತ ಕ್ಷಮಿಸುವುದಿಲ್ಲ ಎಂದು ಕುಟುಕಿದರು.

ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ದೇಗುಲಗಳಿಗೆ ಕೊಡಲು ಹಣ ಇಲ್ಲ ಎನ್ನುತ್ತಾರೆ. ವಕ್ಫ್ ಆಸ್ತಿಗಳಿಗೆ ಬೇಲಿ ಹಾಕಲು 31 ಕೋಟಿ 84 ಲಕ್ಷ 56 ಸಾವಿರ ರು. ಹಣ ಬಿಡುಗಡೆ ಮಾಡಿದ್ದೀರಾ. ಹಿಂದೂಗಳು ಎಂದರೆ ಏನು ಬೇಕಾದರೂ ಮಾಡಿಕೊಂಡು ಹೋಗಬಹುದು ಅಂತನಾ? ಈ ರಾಜ್ಯಕ್ಕೆ ಬೆಂಕಿ ಹೆಚ್ಚು ಕೆಲಸವನ್ನು ಜಮೀರ್ ಮಾಡುತ್ತಿದ್ದಾರೆ. ಹಿಂದೂ ಮುಸ್ಲಿಮರನ್ನು ಹೊಡೆದಾಡುವ ನೀತಿ ಅನುಸರಿಸಿದ್ದಾರೆ. ಹಿಂದೂ ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುವ ಜಮೀರ್‌ಗೆ ಯಾರಾದರೂ ಬೆಂಕಿ ಹಚ್ಚುತ್ತಾರೆ ಎಂದು ಎಚ್ಚರಿಕೆ ನೀಡಬೇಕಲ್ಲವೇ ಎಂದು ಕಿಡಿಕಾರಿದರು.