ದಾಬಸ್‍ಪೇಟೆ: ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಎಂ.ಕೆ.ನಾಗರಾಜು ಅವರಿಂದ ತೆರವಾದ ಸ್ಥಾನಕ್ಕೆ ನೂತನ ಅಧ್ಯಕ್ಷರಾಗಿ ಸೋಂಪುರ ಹೋಬಳಿಯ ಅಗಳಕುಪ್ಪೆ ಗೋವಿಂದರಾಜು ನೇಮಕ ಮಾಡಿ ನಗರಾಭಿವೃದ್ದಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರಾಜೇಶ್ ಎಸ್ ಸೂಳಿಕೇರಿ ಆದೇಶಿಸಿದ್ದಾರೆ

ದಾಬಸ್‍ಪೇಟೆ: ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಎಂ.ಕೆ.ನಾಗರಾಜು ಅವರಿಂದ ತೆರವಾದ ಸ್ಥಾನಕ್ಕೆ ನೂತನ ಅಧ್ಯಕ್ಷರಾಗಿ ಸೋಂಪುರ ಹೋಬಳಿಯ ಅಗಳಕುಪ್ಪೆ ಗೋವಿಂದರಾಜು ನೇಮಕ ಮಾಡಿ ನಗರಾಭಿವೃದ್ದಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರಾಜೇಶ್ ಎಸ್ ಸೂಳಿಕೇರಿ ಆದೇಶಿಸಿದ್ದಾರೆ.

ನೂತನ ಸದಸ್ಯರಾಗಿ ಭೂಸಂದ್ರ ಗ್ರಾಮದ ಚಿಕ್ಕಣ್ಣ ಸ್ವಾಮಿ, ತ್ಯಾಮಗೊಂಡ್ಲು ಹೋಬಳಿಯ ತಾಳೆಕೆರೆ ಗ್ರಾಮದ ಗಂಗರಾಜು, ಸೋಲೂರು ಹೋಬಳಿಯ ಕೋರಮಂಗಲ ಗ್ರಾಮದ ಹನುಮಂತರಾಜು ನೇಮಕವಾಗಿದ್ದಾರೆ.

ನೂತನ ಅಧ್ಯಕ್ಷ ಅಗಳಕುಪ್ಪೆ ಗೋವಿಂದರಾಜು ಮಾತನಾಡಿ, ನನ್ನನ್ನು ನೇಮಕ ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಶಾಸಕ ಶ್ರೀನಿವಾಸ್‌, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಮಾಜಿ ಸಿಎಂ ವೀರಪ್ಪಮೊಯ್ಲಿ ಅವರಿಗೆ ಧನ್ಯವಾದ ತಿಳಿಸುತ್ತೇನೆ. 40 ವರ್ಷಕ್ಕೂ ಹೆಚ್ಚು ವರ್ಷಗಳ ಕಾಲ ಸೋಂಪುರ ಹೋಬಳಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿದ್ದು, ಪಕ್ಷ ಹಾಗೂ ಮುಖಂಡರು ಗುರುತಿಸಿ ನನಗೆ ಅಧ್ಯಕ್ಷ ಸ್ಥಾನ ನೀಡಿದ್ದು ಎಲ್ಲರಿಗೂ ಚಿರರುಣಿಯಾಗಿರುತ್ತೇನೆ ಎಂದರು.

ನೂತನ ಅಧ್ಯಕ್ಷ ಹಾಗೂ ಸದಸ್ಯರನ್ನು ಶಾಸಕ ಶ್ರೀನಿವಾಸ್, ಮಾಜಿ ಎಂಎಲ್ಸಿ ಕಾಂತರಾಜು, ಎನ್‌ಪಿಎ ಮಾಜಿ ಅಧ್ಯಕ್ಷರಾದ ಎಂ.ಕೆ.ನಾಗರಾಜು, ನಾರಾಯಣಗೌಡ, ಹೇಮಂತ್ ಕುಮಾರ್, ಮಾಜಿ ಸದಸ್ಯರಾದ ಅಂಚೆಮನೆ ಪ್ರಕಾಶ್, ನಗರಸಭೆ ಅಧ್ಯಕ್ಷ ಗಣೇಶ್, ಗ್ರಾಪಂ ಮಾಜಿ ಅಧ್ಯಕ್ಷ ಶಿವಕುಮಾರ್, ಜಗದೀಶ್ ಇತರರು ಅಭಿನಂದಿಸಿದ್ದಾರೆ.

ಪೋಟೋ 5 : ಎನ್ ಪಿಎ ನೂತನ ಅಧ್ಯಕ್ಷ ಅಗಳಕುಪ್ಪೆ ಗೋವಿಂದರಾಜು

ಪೋಟೋ 6 : ಎನ್ ಪಿಎ ನೂತನ ಸದಸ್ಯ ಚಿಕ್ಕಣ್ಣಸ್ವಾಮಿ

ಪೋಟೋ 7 : ಎನ್ ಪಿಎ ನೂತನ ಸದಸ್ಯ ಗಂಗರಾಜು

ಪೋಟೋ 8 : ಎನ್ ಪಿಎ ನೂತನ ಸದಸ್ಯ ಹನುಮಂತರಾಜು