ಆಧ್ಯಾತ್ಮಿಕ, ಅತೇಂದ್ರಿಯ ಪಿತಾಮಹಾ ಅಗಸ್ತ್ಯಮುನಿ

| Published : Mar 05 2025, 12:35 AM IST

ಸಾರಾಂಶ

ಗುಂಡ್ಲುಪೇಟೆ ಜೆಎಸ್ಎಸ್‌ ಅನುಭವ ಮಂಪಟದಲ್ಲಿ ಅಗಸ್ತ್ಯ ಮುನಿಯವರ ಕೊಡುಗೆ ವಿಷಯ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಿರಿಯ ವಕೀಲ ಶಾಂ ಭಟ್‌ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಭಾರತೀಯ ವೈದ್ಯ ಪದ್ಧತಿ ಮೂಲಕ ಸಿದ್ಧ ಮತ್ತು ಆಧ್ಯಾತ್ಮಿಕ, ಅತೇಂದ್ರಿಯವಾದದ ಪಿತಾಮಹ ಅಗಸ್ತ್ಯಮುನಿ ಎಂದು ನವದೆಹಲಿಯ ಭಾರತೀಯ ಭಾಷಾ ಸಮಿತಿಯ ಮುಖ್ಯ ಸಂಯೋಜಕ ಪ್ರೊ.ಪವನ್ ಕುಮಾರ್ ಶರ್ಮ ಹೇಳಿದರು.ಪಟ್ಟಣದ ಜೆಎಸ್‌ಎಸ್‌ ಅನುಭವ ಮಂಟಪದಲ್ಲಿ ಚಾಮರಾಜನಗರ ವಿಶ್ವವಿದ್ಯಾನಿಲಯ, ಗುಂಡ್ಲುಪೇಟೆ ವಿವೇಕ ಸಿರಿ ಸೇವಾ ಸೌಹಾರ್ಧ ಸಹಕಾರ ಸಂಘ ಹಾಗೂ ಗುಂಡ್ಲುಪೇಟೆ ಜೆಎಸ್‌ಎಸ್‌ ಕಲಾ ಮತ್ತು ವಾಣಿಜ್ಯ ಕಾಲೇಜು ಸಹಯೋಗದೊಂದಿಗೆ ಭಾರತೀಯ ಭಾಷಾ ಸಮಿತಿ, ಕೇಂದ್ರ ಶಿಕ್ಷಣ ಸಚಿವಾಲಯದ ಪ್ರಾಯೋಜಕತ್ವದಲ್ಲಿ ಭಾರತೀಯ ಭಾಷೆಗಳ ಮೂಲಕ ಭಾರತೀಯ ಜ್ಞಾನ ಪರಂಪರೆ ಸಾಹಿತ್ಯ ಮತ್ತು ವೈದ್ಯ ಪದ್ದತಿಗೆ ಅಗಸ್ತ್ಯ ಮುನಿಯವರ ಕೊಡುಗೆ ವಿಷಯ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಸಮಾರಂಭದಲ್ಲಿ ಮಾತನಾಡಿದರು.

ಅಗಸ್ತ್ಯ ಮುನಿಯ ಜೀವನವೇ ದೊಡ್ಡ ಸಂದೇಶ. ದೇಹ ಮತ್ತು ಮನಸ್ಸಿನ ಏಕಾಗ್ರತೆಯ ಮೂಲಕ ಅಸಾಧ್ಯವಾದುದ್ದನ್ನು ಸಾಧ್ಯವಾಗಿಸಿದ್ದರು. ಅವರು ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಸಂಚಾರ ಮಾಡಿದ್ದಾರೆ ಎಂಬುದಕ್ಕೆ ಅಗಸ್ತ್ಯ ಮುನಿಯ ಹೆಸರಲ್ಲಿ ತಮಿಳುನಾಡು, ಕೇರಳ, ಉತ್ತರಾಕಾಂಡದಲ್ಲಿ ಮಂದಿರಗಳಿರುವುದೇ ಸಾಕ್ಷಿ ಎಂದರು. ವಿಚಾರ ಸಂಕಿರಣ ಸಂಯೋಜಕರೂ ಆದ ವಿವೇಕ ಸಿರಿ ಸೇವಾ ಸೌಹಾರ್ಧ ಸಹಕಾರ ಸಂಘದ ಅಧ್ಯಕ್ಷ ಸ್ವಾಮಿ ಮರಳಾಪುರ, ಚಾಮರಾಜನಗರ ವಿವಿ ರಿಜಿಸ್ಟ್ರಾರ್‌ ಲೋಕನಾಥ್‌, ವಿವಿ ರಿಜಿಸ್ಟ್ರರ್ (ಮೌಲ್ಯಮಾಪನ) ಪ್ರೊ.ವಿ.ಜಿ.ವೆಂಕಟರಮಣ, ವಿವಿ ಪಿಎಂಇಬಿ ನಿರ್ದೇಶಕ ಡಾ.ವಿ.ಜಿ.ಸಿದ್ದರಾಜು ಮಾತನಾಡಿದರು.

ಜೆಎಸ್‌ಎಸ್‌ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲೆ ಡಾ.ಪಿ.ಮಹದೇವಮ್ಮ, ರಿಸೋರ್ಚ್‌ ಪರ್ಸನ್‌ಗಳಾದ ಡಾ.ಬಿ.ವಿ.ವಸಂತಕುಮಾರ್‌, ಡಾ.ಹನುಮಂತಚಾರ್‌ ಜೋಶಿ, ಡಾ.ಎನ್.ಚಂದ್ರನಾಥ್‌ ಸಿಂಗ್‌, ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಶೈಲಕುಮಾರ್‌, ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ ಸೇರಿದಂತೆ ಉಪನ್ಯಾಸಕರು ಹಾಗೂ ನೂರಾರು ವಿದ್ಯಾರ್ಥಿಗಳಿದ್ದರು.ಗೋಪಾಲಸ್ವಾಮಿ ಬೆಟ್ಟ, ತಲಕಾಡು

ಅಗಸ್ತ್ಯಮುನಿ ಸಂಚಾರ ನಡೆಸಿದ ಸ್ಥಳ

ನಾಡಿನ ಪ್ರಸಿದ್ಧ ಗೋಪಾಲಸ್ವಾಮಿ ಬೆಟ್ಟ ಹಾಗೂ ತಲಕಾಡು ಅಗಸ್ತ್ಯಮುನಿ ಸಂಚಾರ ನಡೆಸಿದ ಸ್ಥಳವಾಗಿದೆ ಎಂದು ಮೈಸೂರಿನ ಹಿರಿಯ ವಕೀಲ ಶಾಂ ಭಟ್‌ ಹೇಳಿದರು. ಅಗಸ್ತ್ಯ ಮುನಿಯವರ ಕೊಡುಗೆ ವಿಷಯ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಅಗಸ್ತ್ಯ ಮುನಿಗಳು ತಮಿಳು ಭಾಷೆಯಲ್ಲಿ 2750 ಕೃತಿ ರಚಿಸಿರುವ ಬಗ್ಗೆ ಮಾಹಿತಿ ಇದೆ. ಅಗಸ್ತ್ಯ ಮುನಿಗಳ ಕೃತಿಗಳು ಕನ್ನಡಕ್ಕೆ ತರ್ಜುಮೆಯಾಗಬೇಕಿದೆ. ಅಗಸ್ತ್ಯ ಮುನಿಗಳ ಬಗ್ಗೆ ಪ್ರಸ್ತುತ ದಿನಗಳಲ್ಲಿ ಚರ್ಚೆಯಾಗುತ್ತಿರುವುದು ಸಂತಸ ತಂದಿದೆ ಎಂದರು.

ಕೇಂದ್ರ ಸರ್ಕಾರ ವಿಶೇಷ ಆಸಕ್ತಿ ವಹಿಸಿ ಭಾರತೀಯ ಭಾಷಾ ಸಮಿತಿ ಮೂಲಕ ಅಗಸ್ತ್ಯ ಮುನಿಯ ಬಗ್ಗೆ ಕೃತಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ತಿಳಿಸುವ ಕೆಲಸ ಮಾಡುತ್ತಿದೆ ಎಂದು ಪ್ರಧಾನಿಗಳನ್ನು ಪ್ರಶಂಸಿದರು. ತಮಿಳುನಾಡಿನಲ್ಲಿ ಅಗಸ್ತ್ಯ ಮುನಿಗಳ ಬಗ್ಗೆ ಅಪಾರ ಪ್ರೀತಿ ಇದ್ದರಿಂದಲೇ ತಮಿಳುನಾಡಿ ಜನರು ಸಾವಿರಾರು ವಿಶ್ವನಾಥನ ದೇವಸ್ಥಾನಗಳನ್ನು ಕಟ್ಟಿಸಿದ್ದಾರೆ ಎಂದರು. ಚಾಮರಾಜನಗರ ವಿವಿ ಉಪ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್‌ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.