ತರೀಕೆರೆ: ಅಪರಾಧಗಳಿಗೆ ಇಂದು ವಯಸ್ಸು ಮಾನದಂಡವಾಗುತ್ತಿಲ್ಲ ಎಂದು ಪುರಸಭೆ ಸದಸ್ಯ ಟಿ.ದಾದಾಪೀರ್ ಹೇಳಿದ್ದಾರೆ.ಪಟ್ಟಣದ ಸಾಹುಕಾರ್ ಶಾಫೀ ಮಸೀದಿಯಲ್ಲಿ ದಾರೂಲ್ ಉಲೂಂ ಅರೇಬಿಕ್ ಶಾಲೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಮಾದಕ ಪದಾರ್ಥ ದುಷ್ಪರಿಣಾಮ ಕುರಿತ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮದ್ರಸಾಗಳು ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣದ ಆಧಾರದಲ್ಲಿ ನೈತಿಕ ಮೌಲ್ಯ ಕಲಿಸುತ್ತಿವೆ. ಅಪ್ರಾಪ್ತರು ಕ್ರೈಂ ಗಳಲ್ಲಿ ತೊಡಗುತ್ತಿದ್ದಾರೆ. ಮದ್ರಸಾದಿಂದ ಹೊರಬಂದ ವಿದ್ಯಾರ್ಥಿಗಳು ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ , ತರೀಕೆರೆ
ಅಪರಾಧಗಳಿಗೆ ಇಂದು ವಯಸ್ಸು ಮಾನದಂಡವಾಗುತ್ತಿಲ್ಲ ಎಂದು ಪುರಸಭೆ ಸದಸ್ಯ ಟಿ.ದಾದಾಪೀರ್ ಹೇಳಿದ್ದಾರೆ.ಪಟ್ಟಣದ ಸಾಹುಕಾರ್ ಶಾಫೀ ಮಸೀದಿಯಲ್ಲಿ ದಾರೂಲ್ ಉಲೂಂ ಅರೇಬಿಕ್ ಶಾಲೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಮಾದಕ ಪದಾರ್ಥ ದುಷ್ಪರಿಣಾಮ ಕುರಿತ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮದ್ರಸಾಗಳು ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣದ ಆಧಾರದಲ್ಲಿ ನೈತಿಕ ಮೌಲ್ಯ ಕಲಿಸುತ್ತಿವೆ. ಅಪ್ರಾಪ್ತರು ಕ್ರೈಂ ಗಳಲ್ಲಿ ತೊಡಗುತ್ತಿದ್ದಾರೆ. ಮದ್ರಸಾದಿಂದ ಹೊರಬಂದ ವಿದ್ಯಾರ್ಥಿಗಳು ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.ಪೋಲಿಸ್ ಸಬ್ ಇನ್ಸ್ಪೆಕ್ಟರ್ ನಾಗೇಂದ್ರ ನಾಯ್ಕ ಮಾತನಾಡಿ ಪೋಲಿಸ್ ಇಲಾಖೆ ಸನ್ಮಿತ್ರ ಯೋಜನೆ ಜಾರಿಗೆ ತಂದಿದ್ದು ಮಾದಕ ವ್ಯಸನ ಹಾಗೂ ಅಪರಾಧ ಮುಕ್ತ ಸಮಾಜಕ್ಕೆ ಈ ಯೋಜನೆ ಸಹಕಾರಿ ಎಂದರು. ಸಮಾಜಕ್ಕೆ ಬೇಡವಾದ ಪ್ರಕರಣಗಳು ಪೋಲಿಸ್ ಇಲಾಖೆಯಲ್ಲಿ ದಾಖಲಾಗುತ್ತಿವೆ. ಪೋಕ್ಸೊ, ಗಾಂಜಾ, ಹಾಗೂ ಅಶಾಂತಿ ಉಂಟು ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ತಡೆಯಲು ಶಾಲಾ ಮಟ್ಟದಲ್ಲಿ ಕಾಯ೯ಕ್ರಮಗಳು ನಡೆಯಬೇಕು ಎಂದು ಹೇಳಿದರು ಉಸ್ತಾದ್ ಕಮಾಲುದ್ದೀನ್ ಮರ್ಜೂಕಿ ಮಾತನಾಡಿ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರು ನೈತಿಕ ಮೌಲ್ಯಗಳನ್ನು ಕಲಿಸಿದ್ದಾರೆ. ಇಸ್ಲಾಂ ಸೇರಿದಂತೆ ಹಲವು ಧರ್ಮಗಳು ಅಪರಾಧ ಕಡೆಗಣಿಸಿವೆ. ಕುಡಿತ ಎಲ್ಲಾ ಅಪರಾಧಗಳಿಗೂ ಮೂಲ ಇದರ ವಿರುದ್ಧ ಜಾಗೃತಿ ಆಗಬೇಕು ಎಂದು ಹೇಳಿದರು ಉಸ್ತಾದ್ ಅಬುಬಕ್ಕರ್ ಸಖಾಫಿ ಮಾತನಾಡಿ ಸಜ್ಜನರ ಸಹವಾಸ ಹಾಗು ದೇಶಾಭಿಮಾನವನ್ನು ಮಕ್ಕಳು ಬೆಳೆಸಿ ಕೊಳ್ಳಬೇಕು ಎಂದು ಹೇಳಿದರು. ಮಸೀದಿ ಕಾರ್ಯದರ್ಶಿ ಖಾದರ್ ಮಾತನಾಡಿ ನಮ್ಮ ಮನೆಗೆ ನಾವು ನಂದಾದೀಪ ವಾಗಬೇಕು. ಆರೋಗ್ಯ ಸಮಾಜದ ನಿರ್ಮಾಣಕ್ಕೆ ಕೈ ಜೋಡಿಸೋಣ ಎಂದರು. ಮಸೀದಿಯ ಮುಖಂಡರಾದ ದಾದಾಪೀರ್, ರಿಯಾಜ್ ಇದ್ದರು.
--5ಕೆಟಿಆರ್.ಕೆ.15ಃ
ತರೀಕೆರೆಯಲ್ಲಿ ಸಾಹುಕಾರ್ ಶಾಫೀ ಮಸೀದಿಯಲ್ಲಿ ದಾರೂಲ್ ಉಲೂಂ ಅರೇಬಿಕ್ ಶಾಲೆ ವಿದ್ಯಾರ್ಥಿಗಳಿಗೆ ನಡೆದ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಟಿ.ದಾದಾಪೀರ್, ಪೋಲಿಸ್ ಸಬ್ ಇನ್ಸ್ಪೆಕ್ಟರ್ ನಾಗೇಂದ್ರ ನಾಯ್ಕ ಮತ್ತಿತರರು ಭಾಗವಹಿಸಿದ್ದರು.