ಕನ್ನಡಪ್ರಭ ವಾರ್ತೆ ತರೀಕೆರೆ

ತರೀಕೆರೆ ತಾಲೂಕು ಭಾರತೀಯ ಜೀವವಿಮಾ ನಿಗಮ ಕ್ಷೇಮಾಭಿವೃದ್ಧಿ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯನ್ನು ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಂಘದ ಅಧ್ಯಕ್ಷ ಸಿ.ಎಂ. ಜಯಣ್ಣ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.

ಸಂಘದ ಅಧ್ಯಕ್ಷ ಸಿ.ಎಂ. ಜಯಣ್ಣ ಮಾತನಾಡಿ, ಸಂಘಗಳ ಹೋರಾಟದಲ್ಲಿ ಪಾಲಿಸಿಗಳ ಮೇಲಿನ ಜಿ.ಎಸ್.ಟಿ.ಯನ್ನು ತೆಗೆದುಹಾಕಲಾಯಿತು, ಗುಂಪು ವಿಮೆಗಳನ್ನು ಹೆಚ್ಚಿಸಲಾಯಿತು, 69 ರಿಂದ 73 ವರ್ಷಕ್ಕೆ ವಿಮೆಯನ್ನು ಮುಂದುವರಿಸಲಾಯಿತು. ಸಂಘದ ಅನೇಕ ಜನಪರ ಕಾರ್ಯಗಳಿಂದ ಸದಸ್ಯರಿಗೆ ನೆರವಾಗುತ್ತಾ ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಿದೆ ಎಂದು ಅವರು ತಿಳಿಸಿದರು.

ಎಲ್.ಐ,ಸಿ.ಎಂಬ ಸಂಸ್ಥೆಯು ಇಷ್ಟು ದೊಡ್ಡದಾಗಿ ಬೆಳೆಯಲು ಪ್ರತಿನಿಧಿಗಳೇ ಕಾರಣ ಎಂದು ಅವರು ಹೇಳಿದರು.

ಹಿರಿಯ ಪ್ರತಿನಿಧಿ ಪ್ರಭಾಕರ್ ಮಾತನಾಡಿ, ಸದಸ್ಯರ ಮಕ್ಕಳಿಗೆ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಓದಿದ ಮಕ್ಕಳನ್ನು ಗುರುತಿಸಿ ಸನ್ಮಾನ ಮಾಡುವುದರ ಮೂಲಕ ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು.


ಹೇಮ್ಲಾನಾಯಕ್ ಮಾತನಾಡಿ, ಸಂಘದ ನಿವೇಶನದಲ್ಲಿ ಕಟ್ಚಡವನ್ನು ನಿರ್ಮಿಸಬೇಕು ಎಂದು ಹೇಳಿದರು.

ಹಿರಿಯ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು, ಹಿರಿಯ ಪತ್ರಕರ್ತ ಅನಂತ ನಾಡಿಗ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಅಣ್ಣಪ್ಪ, ವಿಜಯಪ್ರಕಾಶ್, ಸುವರ್ಣಮ್ಮ, ರತ್ನಮ್ಮ ಮತ್ತು ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುವರ್ಣಮ್ಮ ವಾರ್ಷಿಕ ವರದಿ ಓದಿದರು. ಲೋಕೇಶ್ ಆಯವ್ಯಯ ಮಂಡಿಸಿದರು.

ಫೋಟೋ; 22ಕೆಟಿಆರ್.ಕೆ.6

ತರೀಕೆರೆಯಲ್ಲಿ ಭಾರತೀಯ ಜೀವವಿಮಾ ನಿಗಮ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯನ್ನು ಏರ್ಪಡಿಸಲಾಗಿತ್ತು. ಸಂಘದ ಅಧ್ಯಕ್ಷ ಸಿ.ಎಂ.ಜಯಣ್ಣ ಮತ್ತಿತರರು ಭಾಗವಹಿಸಿದ್ದರು.