ಹಿಂದೂ ಮೇಲಿನ ಆಕ್ರಮಣ ವಿರುದ್ಧ ಶೌರ್ಯ ಅಗತ್ಯ: ಸೂಲಿಬೆಲೆ

| Published : Oct 10 2023, 01:01 AM IST

ಹಿಂದೂ ಮೇಲಿನ ಆಕ್ರಮಣ ವಿರುದ್ಧ ಶೌರ್ಯ ಅಗತ್ಯ: ಸೂಲಿಬೆಲೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವ ಹಿಂದೂ ಪರಿಷತ್ತಿನ 60ನೇ ಷಷ್ಟ್ಯಬ್ದಿಯ ಹಿನ್ನೆಲೆಯಲ್ಲಿ ನಗರದ ಕದ್ರಿ ಮೈದಾನದಲ್ಲಿ ಸೋಮವಾರ ‘ಬಜರಂಗದಳ ಶೌರ್ಯ ಜಾಗರಣ ರಥಯಾತ್ರೆ’ಯ ಬೃಹತ್ ಸಮಾವೇಶ.
ಕನ್ನಡಪ್ರಭ ವಾರ್ತೆ ಮಂಗಳೂರು ಕ್ರಿಶ್ಚಿಯನ್ನರು, ಮುಸ್ಲಿಮರು, ಮಾವೋವಾದಿಗಳು ಹೀಗೆ ಮೂರು ಕಡೆಗಳಿಂದ ಭಾರತದ ಮೇಲೆ, ಹಿಂದೂ ಸಂಸ್ಕೃತಿ ಮೇಲೆ ಆಕ್ರಮಣ ನಡೆಯುತ್ತಿದೆ. ದೇಶ, ನಮ್ಮ ಸಂಸ್ಕೃತಿ ಉಳಿಸಬೇಕಾದರೆ ಶೌರ್ಯ ತೋರಿಸುವ ಅಗತ್ಯವಿದೆ ಎಂದು ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ವಿಶ್ವ ಹಿಂದೂ ಪರಿಷತ್ತಿನ 60ನೇ ಷಷ್ಟ್ಯಬ್ದಿಯ ಹಿನ್ನೆಲೆಯಲ್ಲಿ ನಗರದ ಕದ್ರಿ ಮೈದಾನದಲ್ಲಿ ಸೋಮವಾರ ‘ಬಜರಂಗದಳ ಶೌರ್ಯ ಜಾಗರಣ ರಥಯಾತ್ರೆ’ಯ ಬೃಹತ್ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಬ್ರಿಟಿಷರ ಮೂಲಕ ಕ್ರಿಶ್ಚಿಯನ್ನರು ಭಾರತವನ್ನು ಜಾತಿ, ಪ್ರದೇಶ, ಭಾಷೆ, ಸಂಸ್ಕೃತಿ ನೆಲೆಗಟ್ಟಿನಲ್ಲಿ ಒಡೆದರು. ಇದೀಗ ಅನೇಕ ಕಡೆಗಳಲ್ಲಿ ನಮ್ಮ ಮಂದಿರವನ್ನು ನಕಲು ಮಾಡ್ತಾರೆ, ಅನೇಕ ಕಡೆ ಚರ್ಚ್‌ಗೆ ರಥಯಾತ್ರೆ, ಉರುಳುಸೇವೆ ಇದೆ. ಇದನ್ನೇ ಬಳಸಿ ಮತಾಂತರ ಯತ್ನ ನಡೆಯುತ್ತಿದೆ. ಮುಸ್ಲಿಮರು ಲವ್ ಜಿಹಾದ್ ಮಾಡುವ ಮೂಲಕ, ನಮ್ಮ ಯುವಕರಿಗೆ ಡ್ರಗ್ಸ್‌ ನೀಡಿ ತಲೆ ಕೆಡಿಸುತ್ತಿದ್ದಾರೆ. ಇನ್ನು ಮಾವೋವಾದಿಗಳು ಮುಸ್ಲಿಮರು ಏನೇ ಮಾಡಿದರೂ ಅವರ ರಕ್ಷಣೆಗೆ ನಿಲ್ತಾರೆ. ಇದೀಗ ಕೆಲವರು ಮಹಿಷ ದಸರಾಕ್ಕೆ ಹೊರಟಿದ್ದಾರೆ. ಇವೆಲ್ಲವನ್ನು ತಡೆಯಬೇಕಾದರೆ ವಿಶ್ವ ಹಿಂದೂ ಪರಿಷತ್‌, ಬಜರಂಗದಳದ ಅಗತ್ಯವಿದೆ. ಖಡ್ಗ ಎತ್ತಬೇಕಾದ ಅನಿವಾರ್ಯತೆ ಬಂದರೆ ಅಂಜುವ ಜನ ನಾವಲ್ಲ ಎನ್ನುವ ಸಂದೇಶ ನೀಡಬೇಕಾಗಿದೆ ಎಂದು ಹೇಳಿದರು. ಶೌರ್ಯದಿಂದ ಸನಾತನ ಹಿಂದೂ ಧರ್ಮ ಉಳಿದಿದೆ. ಹಿಂದೂ ಮತ್ತು ಶೌರ್ಯ ಒಂದೇ ನಾಣ್ಯದ ಒಂದೇ ಮುಖ. ಶೌರ್ಯವಿಲ್ಲದೆ ಹಿಂದೂ‌ ಇಲ್ಲ. ಧರ್ಮಕ್ಕಾಗಿ ಶೌರ್ಯ ತೋರಿಸಿ ಎಂದೂ ಹೇಳಿಕೊಟ್ಟದ್ದೂ ಇದೇ ದೇಶ. ಅದನ್ನು ಮರೆಯಬಾರದು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು. ದೇಶದ ಹೊರಗಿನವರು ತಂಟೆಗೆ ಬಂದಾಗ ಸರ್ಜಿಕಲ್‌ ಸ್ಟ್ರೈಕ್‌ ಮಾಡಿ ತಕ್ಕ ಉತ್ತರ ನೀಡಿದ್ದೇವೆ. ದೇಶದ ಒಳಗಡೆ ತಂಟೆ ಮಾಡಲು ಬಂದರೆ ಬುಲ್ಡೋಸ್ ಮಾಡ್ತೇವೆ ಅಂತ ಇನ್ನೊಬ್ಬರು ಮಹನೀಯರು ಎಚ್ಚರಿಕೆ ನೀಡುತ್ತಿದ್ದಾರೆ. ಸಂತರುಗಳು ಧರ್ಮವನ್ನು ಕಟ್ಟಲು ಪ್ರೇರಣೆ ನೀಡುತ್ತಿದ್ದಾರೆ. ಇದು ನಿಜವಾದ ಶೌರ್ಯ ಎಂದು ಸೂಲಿಬೆಲೆ ಪ್ರತಿಪಾದಿಸಿದರು. ರಾಜ್ಯದ ಕೆಲವೆಡೆ ಮುಸ್ಲಿಮರು ತಲ್ವಾರ್ ಹಿಡಿದು ತಿರುಗುತ್ತಿದ್ದಾರೆ. ಸರ್ಕಾರ ಅವರ ಪರವಾಗಿದೆ. ಮುಸ್ಲಿಮರ ಅನುದಾನವನ್ನು 10 ಸಾವಿರ ಕೋಟಿ ರು.ಗೆ ಏರಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಹಿಂದೂಗಳು ಮೆರವಣಿಗೆಯಲ್ಲಿ ತ್ರಿಶೂಲ ಹಿಡಿತಾರೆ, ಹೀಗಾಗಿ ಮುಸ್ಲಿಮರು ತಲ್ವಾರ್ ಹಿಡಿತಾರೆ ಎಂದು ಸಚಿವರೊಬ್ಬರು ಹೇಳಿಕೆ ನೀಡುತ್ತಾರೆ. ಮೇಲಾಗಿ ಇಬ್ಬರು ಸಚಿವರು- ಸ್ಟಾಲಿನ್ ಹೇಳಿಕೆ ತಪ್ಪೇನು ಎಂಬರ್ಥದಲ್ಲಿ ಮಾತಾಡಿದ್ದಾರೆ. ಇದಕ್ಕಾಗಿ ಇಂಥ ಸರ್ಕಾರವನ್ನು ಆಯ್ಕೆ ಮಾಡಬೇಕಿತ್ತಾ ಎಂದು ಸೂಲಿಬೆಲೆ ಪ್ರಶ್ನಿಸಿದರು. ಪುನರುತ್ಥಾನದ ದಿನ: ರಾಮಮಂದಿರ ಉದ್ಘಾಟನೆ ಆಗುವ ದಿನ ಹಿಂದೂ ಪುನರುತ್ಥಾನದ ದಿನ. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಕಾಶಿ ಕಾರಿಡಾರ್ ನಿರ್ಮಾಣ ಆಗಿದೆ. ಮುಂದಿನ ಎಲೆಕ್ಷನ್ ಮುಗಿದ ಮೇಲೆ‌ ಕಾಶಿ ಮಂದಿರ ಆಗಬೇಕು. ಪ್ರವಾಹದ ಬಳಿಕ ಈಗ ಅದ್ಭುತವಾಗಿ ಕೇದಾರನಾಥ ನಿರ್ಮಾಣ ಮಾಡಿದ್ದಾರೆ. ಕೈಲಾಸಕ್ಕೆ ನೇರವಾಗಿ ಹೋಗಬಹುದಾದ ಕೆಲಸ ನಡೆಯುತ್ತಿದೆ. ಒಂದು ಕಾಲದಲ್ಲಿ ಹಿಂದೂ ಅಂತ ಹೇಳಲು ನಾಚಿಕೆ ಇತ್ತು. ಆ ಪರಿಸ್ಥಿತಿ ಈಗಿಲ್ಲ ಎಂದು ಹೇಳಿದರು. ಶ್ರೀಕ್ಷೇತ್ರ ಕರಿಂಜದ ಓಂ ಶ್ರೀ ಶಕ್ತಿ ಗುರುಮಠದ ಶ್ರೀ ಮುಕ್ತಾನಂದ ಸ್ವಾಮೀಜಿ, ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಡಾ.ಎಂಬಿ ಪುರಾಣಿಕ್, ವಿಹಿಂಪ ಕ್ಷೇತ್ರೀಯ ಸತ್ಸಂಗ ಪ್ರಮುಖ್ ಮಹಾಬಲೇಶ್ವರ ಹೆಗಡೆ, ಆರೆಸ್ಸೆಸ್ ಸಹಸಂಘಚಾಲಕ ಸುನಿಲ್ ಆಚಾರ್, ವಿಹಿಂಪ ಮಂಗಳೂರು ಅಧ್ಯಕ್ಷ ಎಚ್.ಕೆ. ಪುರುಷೋತ್ತಮ, ಬಜರಂಗದಳ ವಿಭಾಗ ಸಂಯೋಜಕ ಭುಜಂಗ ಕುಲಾಲ್, ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್, ಶೌರ್ಯ ಜಾಗರಣ ರಥಯಾತ್ರೆ ಸ್ವಾಗತ ಸಮಿತಿ ಅಧ್ಯಕ್ಷ ಗಿರಿಧರ್ ಶೆಟ್ಟಿ, ಬಜರಂಗದಳ ಜಿಲ್ಲಾ ಸಂಯೋಜಕ ನವೀನ್ ಮೂಡುಶೆಡ್ಡೆ ವೇದಿಕೆಯಲ್ಲಿದ್ದರು. ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಪ್ರಮುಖರಾದ ಪ್ರಕಾಶ್ ಪಿ.ಎಸ್, ಹರಿಕೃಷ್ಣ, ಗೋಪಾಲ ಕುತ್ತಾರ್, ಮುರಳಿಕೃಷ್ಣ ಹಸಂತಡ್ಕ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಸೇರಿದಂತೆ ಬಿಜೆಪಿ, ಸಂಘಪರಿವಾರದ ಪ್ರಮುಖರು ಇದ್ದರು. ರಾಷ್ಟ್ರೀಯ ಸ್ವಾಭಿಮಾನ ದಿನವಾಗಿ ಆಚರಿಸಲು ಶರಣ್‌ ಪಂಪ್‌ವೆಲ್‌ ಮನವಿ ಅಯೋಧ್ಯೆಯಲ್ಲಿ ನೂತನ ಶ್ರೀರಾಮ ಮಂದಿರ ಲೋಕಾರ್ಪಣೆ ಮಾಡುವ ದಿನವನ್ನು ರಾಷ್ಟ್ರೀಯ ಸ್ವಾಭಿಮಾನ ದಿನವಾಗಿ ಘೋಷಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಮನವಿ ಮಾಡಿದರು. ಸನಾತನ ಧರ್ಮ ಅವಹೇಳನ, ಲವ್ ಜಿಹಾದ್, ಮತಾಂತರ ಇತ್ಯಾದಿ ನಡೆಯುತ್ತಿರುವುದಕ್ಕೆ ತಕ್ಕ ಉತ್ತರ ನೀಡಬೇಕಿದೆ. ಅದಕ್ಕಾಗಿ ಬಜರಂಗದಳ ಶೌರ್ಯ ಜಾಗರಣ ಯಾತ್ರೆಯನ್ನು ದೇಶಾದ್ಯಂತ ಮಾಡಲಾಗುತ್ತಿದೆ. ಬಜರಂಗದಳ ಎಂದರೆ ಶೌರ್ಯ, ಹೋರಾಟ, ಧೈರ್ಯ, ಸನ್ಯಾಸ. ಬಜರಂಗದಳ ಇಂದು ದೇಶದಲ್ಲಿ ಯುವ ಶಕ್ತಿಯನ್ನು ನಿರ್ಮಾಣ ಮಾಡುತ್ತಿದೆ ಎಂದು ಪಂಪ್‌ವೆಲ್‌ ತಿಳಿಸಿದರು. ಮುಂದಿನ ಒಂದು ವರ್ಷದಲ್ಲಿ ಗ್ರಾಮ ಗ್ರಾಮಗಳಲ್ಲಿ ವಿಹಿಂಪ, ಬಜರಂಗದಳ ಘಟಕ ಆಗಬೇಕು. ಮಂಗಳೂರಲ್ಲಿ ೫೦೦ ಘಟಕ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಶರಣ್‌ ಪಂಪ್‌ವೆಲ್ ಹೇಳಿದರು. ಗೋವು ರಾಷ್ಟ್ರೀಯ ಪ್ರಾಣಿ ಘೋಷಣೆ ಅಗತ್ಯ: ಸ್ವಾಮೀಜಿ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿದರೆ ಮಾತ್ರ ದೇಶದಲ್ಲಿ ಗೋರಕ್ಷಣೆ ಸಾಧ್ಯ ಎಂದು ಶ್ರೀಕ್ಷೇತ್ರ ಕರಿಂಜದ ಓಂ ಶ್ರೀ ಶಕ್ತಿ ಗುರುಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದ್ದಾರೆ. ಈಗ ಹುಲಿ ರಾಷ್ಟ್ರೀಯ ಪ್ರಾಣಿ ಇದೆ. ಇದರಿಂದ ಗೋವು ರಕ್ಷಣೆ ಆಗುತ್ತಿಲ್ಲ. ಹಾಗಾಗಿ ಗೋವನ್ನೇ ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು ಎಂದರು. ಪರಶುರಾಮನ ಆದರ್ಶ ಪಾಲಿಸಿದರೆ ಹಿಂದೂ ಸಂಸ್ಕೃತಿಯನ್ನು ಉಳಿಸಲು ಸಾಧ್ಯ ಎಂದು ಹೇಳಿದರು. ಶಿವಮೊಗ್ಗದಲ್ಲಿ ಔರಂಗಜೇಬನ ಫ್ಲೆಕ್ಸ್ ಹಾಕಲು ಇಂಥ ವ್ಯವಸ್ಥ ಕಲ್ಪಿಸಿದ್ದು ಯಾರು? ಬಹುಸಂಖ್ಯಾತರನ್ನು ರಕ್ಷಣೆ ಮಾಡುವ ವ್ಯವಸ್ಥೆ ಬರದಿದ್ದರೆ ಇಂಥ ಪ್ರಕರಣಗಳು ಉಳಿದ ಕಡೆಯೂ ನಡೆಯುತ್ತವೆ ಎಂದು ಸ್ವಾಮೀಜಿ ಎಚ್ಚರಿಸಿದರು. ಗಾಂಧಿ, ನೆಹರೂ, ಅಟಲ್‌ರಿಂದಲೂ ಮುಸ್ಲಿಂ ತುಷ್ಟೀಕರಣ ಗಾಂಧಿ ಅವರು ಶಾಂತಿಯ ಮಾತನಾಡಿ ಮುಸಲ್ಮಾನರನ್ನು ತುಷ್ಟೀಕರಣ ಮಾಡಿದ್ದರಿಂದ ಮುಸಲ್ಮಾನರು ದೇಶವನ್ನು ಮೂರು ತುಂಡುಗಳನ್ನಾಗಿ ಮಾಡಿದರು. ನೆಹರೂ ಕಾಲದಲ್ಲಿ ಎಷ್ಟು ತುಷ್ಟೀಕರಣ ನಡೆಯಿತು ಎಂದರೆ ನೆಹರೂ ಕೈಯಿಂದಲೇ ಮುಸ್ಲಿಮರು ಕಾಶ್ಮೀರವನ್ನು ತೆಗೆದುಕೊಳ್ಳುವ ಪರಿಸ್ಥಿತಿ ಬಂತು. ಅಟಲ್ ಕೂಡ ಸ್ವಲ್ಪ ಮರೆತು ಪಾಕಿಸ್ತಾನದೊಂದಿಗೆ ಸ್ನೇಹ ಹಸ್ತ ಚಾಚಿದರು. ಅದಕ್ಕೆ ಅವರು ಕಾರ್ಗಿಲ್‌ ಒಳಗೇ ಬಂದರು. ಈಗಲೂ ಅದಕ್ಕೆ ಬೆಲೆ ತೆರುತ್ತಿದ್ದೇವೆ. ಆದರೆ ನಂತರ ಬಂದ ನರೇಂದ್ರ ಮೋದಿ ಅವರು ನಮ್ಮ ತಂಟೆಗೆ ಬಂದರೆ ನುಗ್ಗಿ ಬಡಿತೇವೆ ಅಂದರು, ಮಾತ್ರವಲ್ಲ ಏರ್ ಸ್ಟ್ರೈಕ್ ಮಾಡಿ ತೋರಿಸಿದರು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.