ಪೌತಿ ಖಾತೆ ಆಂದೋಲನಕ್ಕೆ ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಬಹಳ ಮುಖ್ಯ

| Published : Feb 08 2024, 01:32 AM IST

ಸಾರಾಂಶ

ಖಾತೆ ಸಮಸ್ಯೆಯಿಂದಾಗಲಿ ಸರ್ಕಾರದಿಂದ ಸಿಗುವ ಸೌಲಭ್ಯಗಳು ಸರಿಯಾದ ರೀತಿಯಲ್ಲಿ ರೈತರಿಗೆ ದೊರೆಯದ ಹಿನ್ನೆಲೆ ರೈತರ ಹಿತ ದೃಷ್ಟಿಯಿಂದ ಪೌತಿ ಖಾತೆ ಆಂದೋಲನವನ್ನು ಆರಂಭಿಸಿದ್ದು, ಇದಕ್ಕೆ ಸ್ಥಳೀಯ ಗ್ರಾಪಂ ಸದಸ್ಯರ ಸಹಕಾರ ಬಹಳ ಮುಖ್ಯವಾದದ್ದು, ಆದ್ದರಿಂದ ತಮ್ಮ ಗ್ರಾಮಗಳಲ್ಲಿ ಯಾವ ಯಾವ ಹೆಸರಿನಲ್ಲಿ ಪೌತಿಖಾತೆ ಇದೆ ಎಂದು ಪಟ್ಟಿಯನ್ನು ನೀಡಲಾಗಿದ್ದು, ಆ ಪಟ್ಟಿಯ ಆಧಾರದ ಮೇಲೆ ಆ ಖಾತೆಗೆ ಸಂಬಂಧಿಸಿದವರ ಹೆಸರನ್ನು ತಿಳಿಸಿದರೆ ನಮಗೆ ಪೌತಿಖಾತೆಗೆ ತುಂಬಾ ಸಹಕಾರ ವಾಗಲಿದೆ

- ಉಪ ತಹಸೀಲ್ದಾರ್ ಕೆ. ಶುಭಾ

-------

ಕನ್ನಡಪ್ರಭ ವಾರ್ತೆ ರಾವಂದೂರು

ಪೌತಿ ಖಾತೆ ಆಂದೋಲನಕ್ಕೆ ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಬಹಳ ಮುಖ್ಯ ಎಂದು ಉಪ ತಹಸೀಲ್ದಾರ್ ಕೆ. ಶುಭಾ ಹೇಳಿದರು.

ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಪಂ ಆವರಣದಲ್ಲಿ ಪೌತಿ ಖಾತೆಯ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಖಾತೆ ಸಮಸ್ಯೆಯಿಂದಾಗಲಿ ಸರ್ಕಾರದಿಂದ ಸಿಗುವ ಸೌಲಭ್ಯಗಳು ಸರಿಯಾದ ರೀತಿಯಲ್ಲಿ ರೈತರಿಗೆ ದೊರೆಯದ ಹಿನ್ನೆಲೆ ರೈತರ ಹಿತ ದೃಷ್ಟಿಯಿಂದ ಪೌತಿ ಖಾತೆ ಆಂದೋಲನವನ್ನು ಆರಂಭಿಸಿದ್ದು, ಇದಕ್ಕೆ ಸ್ಥಳೀಯ ಗ್ರಾಪಂ ಸದಸ್ಯರ ಸಹಕಾರ ಬಹಳ ಮುಖ್ಯವಾದದ್ದು, ಆದ್ದರಿಂದ ತಮ್ಮ ಗ್ರಾಮಗಳಲ್ಲಿ ಯಾವ ಯಾವ ಹೆಸರಿನಲ್ಲಿ ಪೌತಿಖಾತೆ ಇದೆ ಎಂದು ಪಟ್ಟಿಯನ್ನು ನೀಡಲಾಗಿದ್ದು, ಆ ಪಟ್ಟಿಯ ಆಧಾರದ ಮೇಲೆ ಆ ಖಾತೆಗೆ ಸಂಬಂಧಿಸಿದವರ ಹೆಸರನ್ನು ತಿಳಿಸಿದರೆ ನಮಗೆ ಪೌತಿಖಾತೆಗೆ ತುಂಬಾ ಸಹಕಾರ ವಾಗಲಿದೆ ಎಂದು ತಿಳಿಸಿದರು.

ಆರ್. ಶ್ರೀಧರ್ ಮಾತನಾಡಿ, ರಾವಂದೂರು ಹೋಬಳಿಯಲ್ಲಿ ಸಾವಿರಕ್ಕೂ ಹೆಚ್ಚು ಪೌತಿ ಖಾತೆಗಳಿದ್ದು, ಇದಕ್ಕೆ ಸಂಬಂಧಪಟ್ಟವರು ಇನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿರುವುದಿಲ್ಲ, ಅಂಥವರು ಯಾವುದೇ ಶುಲ್ಕವಿಲ್ಲದೆ ಈ ಪೌತಿಖಾತೆ ಆಂದೋಲನವನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಮೊ. 9008617488,

7022080439 ಸಂಪರ್ಕಿಸಿ. ಗ್ರಾಪಂ ಅಧ್ಯಕ್ಷ ಸುಜಾತ ವಾಸು, ಸದಸ್ಯರಾದ ಭಾರತಿ, ಹರ್ಷಿಯ, ಕುಮಾರ್, ಶಶಿ, ಮುಖಂಡರಾದ ಆರ್.ಟಿ. ಸತೀಶ್, ಆರ್.ಆರ್. ಶಿವರಾಂ ಇದ್ದರು.