ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಶಕ್ತಿದೇವತೆ ಶ್ರೀಮದ್ದೂರಮ್ಮನವರ ಅಗ್ನಿಕೊಂಡ ಮಹೋತ್ಸವ ಬುಧವಾರ ಸಾವಿರಾರು ಭಕ್ತರ ಉದ್ಘೋಷಗಳ ನಡುವೆ ವಿಜೃಂಭಣೆಯಿಂದ ನೆರವೇರಿತು.ಕೊಂಡ ಮಹೋತ್ಸವಕ್ಕೆ ಮುನ್ನ ಭಕ್ತಾದಿಗಳು ಕುರಿ-ಮೇಕೆ ಮತ್ತು ಕೋಳಿಗಳನ್ನು ಬಲಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು. ಬೆಂಗಳೂರು- ಮೈಸೂರು ಹೆದ್ದಾರಿ ಸಮೀಪ ಇರುವ ಶ್ರೀಮದ್ದೂರಮ್ಮನವರ ಮೂಲ ದೇಗುಲದ ಮುಂಭಾಗ ಮುಂಜಾನೆ ಶುಭ ಬ್ರಾಹ್ಮಿ ಮುಹೂರ್ತದಲ್ಲಿ ಹಿರಿಯ ಅರ್ಚಕ ಗುರುಮೂರ್ತಿ ದೇವರ ಪಟದೊಂದಿಗೆ ಕೊಂಡ ಪ್ರವೇಶ ಮಾಡುವುದರೊಂದಿಗೆ ಅಗ್ನಿಕೊಂಡ ಮಹೋತ್ಸವ ನಿರ್ವಿಘ್ನವಾಗಿ ಸಂಪನ್ನಗೊಂಡಿತು.
ಮದ್ದೂರಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಏ.30ರಂದು ಬೆಳಗ್ಗೆ ದೇವಾಲಯದ ಆವರಣದಲ್ಲಿ ಹೋಮ ಹವನ ಸನ್ನಿಧಾನ ಸೇವೆ ಮಧ್ಯಾಹ್ನ ಶ್ರೀಎಲ್ಲಮ್ಮ ದೇವಿಗೆ ಚಂದ್ರ ಬಂಡಾರ ಸೇವೆ ಬಳಿಕ ಸಂಜೆ ನಾಲ್ಕು ಗಂಟೆಗೆ ಗ್ರಾಮಸ್ಥರಿಂದ ಪ್ರಮುಖ ಬೀದಿಗಳಲ್ಲಿಕೊಂಡ ಬಂಡಿ ಉತ್ಸವ ನೆರವೇರಿತು.ರಾತ್ರಿ 11.30 ಸುಮಾರಿಗೆ ಕೊಂಡಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು. ಬುಧವಾರ ಬೆಳಗ್ಗೆ ಮಠದ ಮನೆಯಿಂದ ಸಪ್ತ ಮಾತೃಕೆ, ಪುಷ್ಪಾಲಂಕೃತ ಮದ್ದೂರಮ್ಮನವರ ಉತ್ಸವ ಮೂರ್ತಿಯನ್ನು ಪಟ್ಟಣದ ಹೊಳೆ ಬೀದಿ, ಹಳೆ ಒಕ್ಕಲಿಗರ ಬೀದಿ ಪೇಟೆ ಬೀದಿ ಸೇರಿದಂತೆ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ನಡೆಸಲಾಯಿತು. ಮಾರ್ಗ ಮಧ್ಯೆ ಭಕ್ತಾದಿಗಳು ಕುರಿ, ಮೇಕೆ, ಕೋಳಿ ಗಳನ್ನು ಬಲಿಕೊಟ್ಟು ವಿಶೇಷ ಪೂಜೆ ನೆರವೇರಿಸಿದರು,
ನಂತರ ಮದ್ದೂರ್ ಅಮ್ಮನವರ ಮೂಲ ದೇಗುಲದ ಅಗ್ನಿಕೊಂಡ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಏ.2ರಂದು ಸಂಜೆ 4 ಗಂಟೆಗೆ ಭಕ್ತರಿಂದ ಬಾಯಿ ಬೀಗ ಸೇವೆ ಸಮೇತ ಶ್ರೀಸಿಡಿರಣ್ಣನವರ ಸಿಡಿ ಉತ್ಸವ ಜರುಗಲಿದೆ. ಶ್ರೀ ಮದ್ದೂರಮ್ಮನವರ ಅಗ್ನಿ ಕೊಂಡ ಮಹೋತ್ಸವದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ಅಂಬರಹಳ್ಳಿಯಲ್ಲಿ ಗ್ರಾಮದೇವತೆಗಳ ಉತ್ಸವ
ಭಾರತೀನಗರ:ಅಂಬರಹಳ್ಳಿಯಲ್ಲಿ ಶ್ರೀಕಾಲಭೈರವೇಶ್ವರ, ಶ್ರೀಮಾರಮ್ಮ, ಶ್ರೀಉರ್ದಮ್ಮ ಮತ್ತು ಶ್ರೀ ಕಾಳಮ್ಮ ದೇವರುಗಳ ಉತ್ಸವ ಜರುಗಿತು.ಏ.30 ರಂದು ಹೆಗ್ಗೂರು ಗ್ರಾಮದಿಂದ ಶ್ರೀಶಂಭುಲಿಂಗೇಶ್ವರ ಅಂಬರಹಳ್ಳಿ ಒಕ್ಕಲು ಕುಲಬಾಂಧವರಿಂದ ಗ್ರಾಮಕ್ಕೆ ಶ್ರೀಉರ್ದಮ್ಮ ಮತ್ತು ಶ್ರೀಕಾಳಮ್ಮ ದೇವಿಯನ್ನು ಗ್ರಾಮಕ್ಕೆ ಪಾದಾರ್ಪಣೆ ಮಾಡಿಸಿ ಹೂ-ಹೊಂಬಾಳೆಹೊಂದಿಗೆ ದೇವರುಗಳನ್ನು ಕರೆತದಂದು ಶ್ರೀಈಶ್ವರ ದೇವಸ್ಥಾನದಲ್ಲಿ ಹೋಮ- ಹವನದೊಂದಿಗೆ ತಂಬಿಟ್ಟಿನ ಆರತಿ, ಪೂಜಾ ಕುಣಿತ ಅದ್ಧೂರಿಯಾಗಿ ಜರುಗಿತು.ಮೇ 1ರಂದು ಬುಧವಾರ ಬೆಳಗ್ಗೆಯಿಂದಲೇ ಶ್ರೀಉರ್ದಮ್ಮ, ಶ್ರೀಕಾಳಮ್ಮ ದೇವಿಗೆ ಹರಕೆ ತೀರಿಸಲಾಯಿತು. ರಾತ್ರಿ 7.30 ಕ್ಕೆ ಸರಿಯಾಗಿ ಶ್ರೀಕಾಲಭೈರವೇಶ್ವರ ಕೃಪಾ ಪೋಷಿತ ನಾಟಕ ಮಂಡಳಿಯವರಿಂದ ಸತಿ ಸಂಸಾರದ ಜ್ಯೋತಿ ಎಂಬ ಸುಂದರ ಸಾಮಾಜಿಕ ನಾಟಕ ಜರುಗಿತು.