ಸಾರಾಂಶ
ಕನಕಪುರ: ನಗರದ ಶಕ್ತಿ ದೇವತೆಗಳಲ್ಲಿ ಒಂದಾದ ಕೋಟೆ ಒಳಕೋಟಮ್ಮ ದೇವಿಯ ಅಗ್ನಿ ಕೊಂಡೋತ್ಸವ ಸಹಸ್ರಾರು ಭಕ್ತರ ಜಯಘೋಷದ ನಡುವೆ ನಿರ್ವಿಘ್ನವಾಗಿ ನೇರವೇರಿತು.
ಕನಕಪುರ: ನಗರದ ಶಕ್ತಿ ದೇವತೆಗಳಲ್ಲಿ ಒಂದಾದ ಕೋಟೆ ಒಳಕೋಟಮ್ಮ ದೇವಿಯ ಅಗ್ನಿ ಕೊಂಡೋತ್ಸವ ಸಹಸ್ರಾರು ಭಕ್ತರ ಜಯಘೋಷದ ನಡುವೆ ನಿರ್ವಿಘ್ನವಾಗಿ ನೇರವೇರಿತು.
ನಗರದ ಕೋಟೆಯಲ್ಲಿರುವ ಒಳಕೋಟಮ್ಮ ದೇವಾಲಯದಲ್ಲಿ ಅಗ್ನಿ ಕೊಂಡೋತ್ಸವದ ಅಂಗವಾಗಿ ಮಂಗಳವಾರ ಎಳವಾರ ಕಾರ್ಯಕ್ರಮ ನಡೆಯಿತು. ದೇವಾಲಯದಲ್ಲಿ ಹೋಮ, ಹವನ ಸೇರಿದಂತೆ ಹಲವು ಧಾರ್ಮಿಕ ಕೈಂಕರ್ಯಗಳು ನೆರವೇರಿಸಲಾಯಿತು. ಬುಧವಾರ ಬೆಳಗ್ಗೆ 5 ಗಂಟೆಗೆ ದೇಗುಲ ಮಠದ ಬಳಿಯಿಂದ ಗಂಗೆಪೂಜೆ ನೆರವೇರಿಸಿ ಮೆರವಣಿಗೆಯಲ್ಲಿ ದೇವರನ್ನು ಕರೆತರಲಾಯಿತು.ಈ ವೇಳೆ ಮುತ್ತೈದೆ ಮಹಿಳೆಯರು ತಂಬಿಟ್ಟಿನ ಆರತಿ ತಂದು ದೇವರಿಗೆ ಪೂಜೆ ಸಲ್ಲಿಸಿದರು. ದೇವಾಲಯದ ಪ್ರಧಾನ ಅರ್ಚಕ ಬೆಳಿಗ್ಗೆ 6 ಗಂಟೆಗೆ ಅಗ್ನಿಕೊಂಡ ಹಾಯ್ದು ಯಶಸ್ವಿಯಾಗಿ ನೆರವೇರಿಸಿದರು, ನಗರದ ಸಾವಿರಾರು ಭಕ್ತರು ಅಗ್ನಿಕೊಂಡೋತ್ಸವವನ್ನು ಕಣ್ತುಂಬಿಕೊಂಡರು.ಕೆ ಕೆ ಪಿ ಸುದ್ದಿ 02: ಕನಕಪುರ ನಗರದ ಶಕ್ತಿ ದೇವತೆ ಒಳಕೋಟಮ್ಮ ದೇವಿಯ ಅಗ್ನಿಕೊಂಡೋತ್ಸವ ನಿರ್ವಿಘ್ನವಾಗಿ ನೆರವೇರಿಸಲಾಯಿತು.