ಸಾರಾಂಶ
Agreement with Glamatter Technologies: Prof. Sally
ಕನ್ನಡಪ್ರಭ ವಾರ್ತೆ ಸುರಪುರ
ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ಕೌಶಲ್ಯ ಅಭಿವೃದ್ಧಿ ಕೇಂದ್ರವಾಗಿ ಆಯ್ಕೆಯಾದ ಹಿನ್ನೆಲೆ ಗ್ಲೇಮಟರ್ ಟೆಕ್ನಾಲಜೀಸ್ ಬೆಂಗಳೂರು ಜತೆ ಒಡಂಬಡಿಕೆ ಮಾಡಿಕೊಂಡಿದ್ದೇವೆ ಎಂದು ಜಂಟಿ ಕಾರ್ಯದರ್ಶಿ ದೊಡ್ಡಪ್ಪ ಎಸ್. ನಿಷ್ಠಿ ಹಾಗೂ ಪ್ರಾಚಾರ್ಯ ಡಾ. ಶರಣಬಸಪ್ಪ ಸಾಲಿ ತಿಳಿಸಿದ್ದಾರೆ.ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯಲದಲ್ಲಿ ಒಡಂಬಡಿಕೆ ಪತ್ರವನ್ನು ಸಿಬ್ಬಂದಿಯೊಂದಿಗೆ ಪ್ರದರ್ಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 15 ಮಹಾವಿದ್ಯಾಲಯಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಭಾರತದ ಕರ್ನಾಟಕದಲ್ಲಿರುವ ಸಾರ್ವಜನಿಕ ತಾಂತ್ರಿಕ ವಿಶ್ವವಿದ್ಯಾಲಯದ ಅಡಿಯಲ್ಲಿ ಗ್ಲೇಮೇಟರ್ ಟೆಕ್ನಾಲಿಜಿಸ್ ಬೆಂಗಳೂರು ತಿಳುವಳಿಕೆಯ ಸ್ಮರಣಿಕೆ ಮೂಲಕ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಯೋಜನೆಯಡಿ ಆಯ್ಕೆಯಾಗಿವೆ ಎಂದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷರು, ಡಾ. ಶರಣಬಸಪ್ಪ ಅಪ್ಪ, ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್ ಅಪ್ಪ ಸೇರಿದಂತೆ ಇತರರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು. ಗ್ಲೇಮಟರ್ ಟೆಕ್ನಾಲಜಿಸ್ ಬೆಂಗಳೂರಿನ ಸಿಇಒ ಭಾಸ್ಕರ್, ಒಡಂಬಡಿಕೆಯಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ಎಸ್‌ಎಸ್‌ಎಲ್‌ಸಿ, ಐಟಿಐ, ಪಿಯುಸಿ, ಪದವಿ ಮುಗಿಸಿದಂತ ವಿದ್ಯಾರ್ಥಿಗಳಿಗೆ ಈ ಕೇಂದ್ರವು ಬಹಳ ಉಪಯುಕ್ತವಾಗಲಿದೆ ಎಂದು ತಿಳಿಸಿದರು.ವಿಟಿಯು-ಕೌಶಲ್ಯ ಅಭಿವೃದ್ಧಿ ನಿಗಮದ ನಿರ್ದೇಶಕ ಡಾ. ಸಂಧ್ಯಾ ಅನ್ವೇಕರ್ ಅವರು ಕೌಶಲ್ಯ ಅಭಿವೃದ್ಧಿಗೆ ಸಂಬಂಧಪಟ್ಟ ವಿಷಗಳನ್ನು ಚರ್ಚಿಸಿ ಮತ್ತು ಕೇಂದ್ರವನ್ನು ವೀಕ್ಷಿಸಿ ಮುನ್ನಡೆಗೆ ಮಾರ್ಗದರ್ಶನ ನೀಡಿದರು.ಕಲಬುರಗಿ ವಿಭಾಗದಕೌಶಲ್ಯ ಅಭಿವೃದ್ಧಿ ಕೇಂದ್ರ ಸಹಾಯಕ ನಿರ್ದೇಶಕ ಪ್ರೊ. ಶೈಲಜಾ ಖೇಣಿ ಸೇರಿದಂತೆ ಇದ್ದರು.----
ಫೋಟೊ: 19ವೈಡಿಆರ್13: ಸುರಪುರ ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯಲದಲ್ಲಿ ಒಡಂಬಡಿಕೆ ಪತ್ರವನ್ನು ಜಂಟಿ ಕಾರ್ಯದರ್ಶಿ ದೊಡ್ಡಪ್ಪ ಎಸ್. ನಿಷ್ಠಿ ಹಾಗೂ ಪ್ರಾಚಾರ್ಯ ಡಾ. ಶರಣಬಸಪ್ಪ ಸಾಲಿ ಪ್ರದರ್ಶಿಸಿದರು.