ಸಾರಾಂಶ
ಕುಲಾಂತರಿ ಬಿಟಿ ಬೀಜಗಳನ್ನು ದೇಶದಿಂದ ಹೊರ ಹಾಕದಿದ್ದರೇ ಕೃಷಿ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಮೂಲಕ ಶಕ್ತಿಯುತ ಆಹಾರವನ್ನು ಜನರಿಗೆ ನೀಡಬೇಕಾಗಿದೆ ಎಂದು ರೈತ ಮುಖಂಡ ಗಂಗಣ್ಣ ಎಲಿ ಆಗ್ರಹಿಸಿದರು.
ಬ್ಯಾಡಗಿ: ಕುಲಾಂತರಿ (gentrification) ಬಿಟಿ ಬೀಜಗಳನ್ನು ದೇಶದಿಂದ ಹೊರ ಹಾಕದಿದ್ದರೇ ಕೃಷಿ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಮೂಲಕ ಶಕ್ತಿಯುತ ಆಹಾರವನ್ನು ಜನರಿಗೆ ನೀಡಬೇಕಾಗಿದೆ ಎಂದು ರೈತ ಮುಖಂಡ ಗಂಗಣ್ಣ ಎಲಿ ಆಗ್ರಹಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಹೈಬ್ರೀಡ್ ಬೀಜ ಹಾಗೂ ರಾಸಾಯನಿಕ ಗೊಬ್ಬರ ಬಳಕೆಯಿಂದ ಶೇ.30ರಷ್ಟು ಕೃಷಿ ನಾಶವಾಗಿದ್ದು ಅವುಗಳಿಲ್ಲದೇ ಕೃಷಿಭೂಮಿಗಳು ಬೆಳೆಯದಂತಾಗಿವೆ. ಅದರ ಮುಂದುವರಿದ ಭಾಗವಾಗಿರುವ ಕುಲಾಂತರಿ ಬೀಜಗಳು ಜೈವಿಕ ತಂತ್ರಜ್ಞಾನದ ಬಳಕೆಯಿಂದ ತಯಾರಿಸಲಾಗುತ್ತಿದ್ದು, ಇದರಿಂದ ಮಾನವನ ಆರೋಗ್ಯ ಸಂರಕ್ಷಣೆ, ಪರಿಸರದ ಮೇಲಾಗಬಹುದಾದ ದುಷ್ಪರಿಣಾಮ, ಆಹಾರ ಪದಾರ್ಥಗಳಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸದೇ ತರಾತುರಿಯಲ್ಲಿ ಕೇಂದ್ರ ಸರ್ಕಾರ ಕುಲಾಂತರಿ ತಳಿಯನ್ನು ಪರಿಚಯಿಸುತ್ತಿರುವುದು ರೈತ ಪರ ಸಂಘಟನೆಗಳು ಅಕ್ಷೇಪಿಸುತ್ತಿವೆ ಎಂದರು.ಕೃಷಿ ವ್ಯವಸ್ಥೆಯನ್ನು ತನ್ನ ಕಪಿಮುಷ್ಟಿಗೆ: ಕೃಷಿಗೆ ತಂತಜ್ಞಾನ ಕುಲಾಂತರಿ ಅನಗತ್ಯ, ಆಧುನಿಕ ಜೈವಿಕ ತಂತ್ರಜ್ಞಾನ ಅಸುರಕ್ಷಿತ, ಇದು ಬೇಸಾಯ ಕ್ಷೇತ್ರಕ್ಕೆ ಕೇವಲ ಹುಸಿ ಭರವಸೆ ಕೊಡುತ್ತಿದೆ. ಇಡೀ ಕೃಷಿ ವ್ಯವಸ್ಥೆಯನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುವ ಸಂಚು ಇದರಲ್ಲಡಗಿದೆ. ಈ ತಂತ್ರಜ್ಞಾನ ಹೊಂದಿರುವವರ ಉದ್ದೇಶವಾಗಿದೆ. ವಿವಿಧ ಸಂಗತಿಗಳ ಕುರಿತು ಚರ್ಚೆ ನಡೆಸಿದ್ದು, ನಮ್ಮ ಆಹಾರ ಹಾಗೂ ಕೃಷಿ ವ್ಯವಸ್ಥೆಯಲ್ಲಿ ಜೀನ್ ವರ್ಗಾವಣೆ ತಂತ್ರಜ್ಞಾನ ಅಷ್ಟೊಂದು ಸುರಕ್ಷಿತವಲ್ಲ ಕೂಡಲೇ ಸದರಿ ಕಾನೂನು ಕೈಬಿಡುವಂತೆ ಆಗ್ರಹಿಸಿದರು.
ಜೀನ್ಸ್ ಎಡಿಟಿಂಗ್ : ಲಂಗುಲಗಾಮು ಇಲ್ಲದೇ ರೂಪಿಸಲಾದ ಹಾಗೂ ಅನಿಯಂತ್ರಿತ ''ಜೀನ್ ಎಡಿಟಿಂಗ್'' ತಂತ್ರಗಳ ಮೂಲಕ ಜಾರಿಗೆ ತಂದಂತಹ ಕುಲಾಂತರಿ ತಂತ್ರಜ್ಞಾನವು ಭಾರತದಲ್ಲಿ ಈಗಾಗಲೇ ಅಡ್ಡ ಪರಿಣಾಮಗಳನ್ನುಂಟು ಮಾಡಿವೆ ಎಂದು ವೈಜ್ಞಾನಿಕ ಸಂಶೋಧನಾ ಅಧ್ಯಯನ ಪ್ರಬಂಧಗಳು ತೋರಿಸಿವೆ. ಭಾರತದಲ್ಲಿ ಸರ್ಕಾರಿ ಸಂಶೋಧನಾ ಸಂಸ್ಥೆಗಳು ಹಾಗೂ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಕುಲಾಂತರಿ ತಳಿಗಳು ಸುರಕ್ಷಿತವಲ್ಲ ಎಂಬುದನ್ನು ಗಟ್ಟಿಯಾಗಿ ಪ್ರತಿಪಾದಿಸುತ್ತವೆ. ಕೂಡಲೇ ಸರ್ಕಾರ ಇಂತಹ ವಿಚಾರಗಳಿಂದ ದೂರವಿರುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಕಿರಣ ಗಡಿಗೋಳ, ಶಂಕರ ಮರಗಾಲ, ಡಾ.ಕೆ.ವಿ.ದೊಡ್ಡಗೌಡ್ರ, ಚಿಕ್ಕಪ್ಪ ಛತ್ರದ, ಅಶೋಕ ಮಾಳೇನಹಳ್ಳಿ, ಜಾನ್ ಪುನೀತ, ಸುಭಾಸ್ ಬನ್ನಿಹಟ್ಟಿ ಸೇರಿದಂತೆ ಇನ್ನಿತರರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))