ನ್ಯಾಮತಿಯಲ್ಲಿ ಸ್ಮಶಾನ ಜಾಗದಲ್ಲಿ ಕೃಷಿ ಚಟುವಟಿಕೆ: ಗ್ರಾಮಸ್ಥರ ಆಕ್ರೋಶ

| Published : Jul 07 2025, 12:17 AM IST

ಸಾರಾಂಶ

ತಾಲೂಕಿನ ಬೆಳಗುತ್ತಿ ಗ್ರಾಮ ಠಾಣೆಯ ವ್ಯಾಪ್ತಿಯ ಪ್ರದೇಶದಲ್ಲಿ ಗ್ರಾಮಸ್ಥರು ಅಂತ್ಯಕ್ರಿಯೆ ನಡೆಸುತ್ತಿದ್ದ ಜಾಗದಲ್ಲಿ ಏಕಾಏಕಿ ಒಂದು ಕುಟುಂಬವು ಕೃಷಿ ಚಟುವಟಿಕೆ ನಡೆಸಿರುವ ಹಿನ್ನೆಲೆಯಲ್ಲಿ ಸ್ಮಶಾನ ಜಾಗಕ್ಕಾಗಿ ಗ್ರಾಮಸ್ಥರು ಹೋರಾಟ ಮಾಡುವುದಾಗಿ ಎಚ್ಚರಿಸಿ, ಪ್ರತಿಭಟನೆ ಮಾಡಿರುವ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ನ್ಯಾಮತಿ

ತಾಲೂಕಿನ ಬೆಳಗುತ್ತಿ ಗ್ರಾಮ ಠಾಣೆಯ ವ್ಯಾಪ್ತಿಯ ಪ್ರದೇಶದಲ್ಲಿ ಗ್ರಾಮಸ್ಥರು ಅಂತ್ಯಕ್ರಿಯೆ ನಡೆಸುತ್ತಿದ್ದ ಜಾಗದಲ್ಲಿ ಏಕಾಏಕಿ ಒಂದು ಕುಟುಂಬವು ಕೃಷಿ ಚಟುವಟಿಕೆ ನಡೆಸಿರುವ ಹಿನ್ನೆಲೆಯಲ್ಲಿ ಸ್ಮಶಾನ ಜಾಗಕ್ಕಾಗಿ ಗ್ರಾಮಸ್ಥರು ಹೋರಾಟ ಮಾಡುವುದಾಗಿ ಎಚ್ಚರಿಸಿ, ಪ್ರತಿಭಟನೆ ಮಾಡಿರುವ ಘಟನೆ ನಡೆದಿದೆ.

ಬೆಳಗುತ್ತಿ ಗ್ರಾಮ ಠಾಣೆಯ ವ್ಯಾಪ್ತಿಯಲ್ಲಿ ಸರ್ವೆ ನಂ 1ರಲ್ಲಿ ಬರುವ 5ಎಕರೆ 20ಗುಂಟೆ ಜಮೀನಿನಲ್ಲಿ 1 ಎಕರೆ 20 ಗುಂಟೆ ಕರಾಬು ಜಮೀನು ಇದ್ದು ಇಲ್ಲಿ ಕ್ಷತ್ರಿಯ, ಅರಸು ಹಾಗೂ ವಾಲ್ಮೀಕಿ ಸಮಾಜದವರು ಮೃತರ ಅಂತ್ಯಕ್ರಿಯೆಗೆ ಮೀಸಲಿದ್ದ ಸ್ಮಶಾನ ಇದಾಗಿದೆ.

ವಿಜಯನಗರ ಸಾಮ್ರಾಜ್ಯದ ಆಡಳಿತ ಅವಧಿಯಿಂದಲೂ ಮೃತರ ಅಂತ್ಯಕ್ರಿಯೆಗೆ ಮೀಸಲಿಟ್ಟಿದ್ದ ಸ್ಮಶಾನ ಜಮೀನು ಇದ್ದಾಗಿದೆ. ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿ ಮೃತಪಟ್ಟ ಸೈನಿಕರೊಬ್ಬರ ವೀರಗಲ್ಲು ಸಹ ಇದ್ದು ಕಳೆದ ತಿಂಗಳ ಹಿಂದೆ ಸ್ಮಶಾನದಲ್ಲಿದ್ದ ಬ್ರಿಟಿಷರ ಕಾಲದ ಮರಣೋತ್ತರ ಪರೀಕ್ಷೆ ಕೊಠಡಿ ಕೆಡವಿದ ನಂತರ ಈ ಸಮಸ್ಯೆ ಉಲ್ಬಣವಾಗಿದ್ದು ನಂತರ ಪ್ರಾಥಮಿಕ ಆರೋಗ್ಯ ಕೆಂದ್ರದ ಕಾಂಪೌಂಡ್‌ನ್ನು ಸಹ ತೆರವು ಮಾಡಿ ಉಳುಮೆ ಮಾಡಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಹಿಂದೆ ಗ್ರಾಮಸ್ಥರು ಹಾಗೂ ಸ್ಮಶಾನ ಜಾಗವನ್ನು ಉಳಿಮೆ ಮಾಡುತ್ತಿದ್ದ ಕುಟುಂಬದ ವ್ಯಕ್ತಿಯ ನಡುವೆ ಸಬೆ ನಡೆದು ಸ್ಮಶಾನ ಜಾಗ ಬಿಟ್ಟು ಉಳೆಮೆ ಮಾಡುವುದಾಗಿಪೊಪ್ಪಿಕೊಂಡಿದ್ದು ಕಳೆದೆರಡು ದಿನಗಳಿಂದ ಸ್ಮಶಾನ ಸುತ್ತ ಇದ್ದ ತಂತಿ ಬೇಲಿಯನ್ನು ತೆರವುಗೊಳಿಸಿ ಉಳಿಮೆ ಮಾಡಿದ್ದಾರೆ ಕೂಡಲೇ ಸಂಬಂಧ ಪಟ್ಟ ಇಲಾಖೆಯವರು ಮಧ್ಯೆ ಪ್ರವೇಶಿಸಿ ಮೂರು ಸಮುದಾಯಗಳಿಗೆ ಮೀಸಲಿಟ್ಟ ಸ್ಮಶಾನ ಜಾಗ ಬಿಟ್ಟು ಉಳಿಮೆ ಮಾಡುವುಂತೆ ಕ್ರಮವಹಿಸುವಂತೆ. ಇಲ್ಲವಾದಲ್ಲಿ ಹೋರಾಟದ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ. ಈ ಹಿಂದೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಈ ಬಗ್ಗೆ ಮನವಿಯನ್ನು ನೀಡಿದ್ದು ಜಾಗವನ್ನು ಸ್ಮಶಾನಕ್ಕೆ ಮಾಡಿಕೊಡದ ಹಿನ್ನೆಲೆಯಲ್ಲಿ ಈ ಸ್ಥಿತಿ ಬಂದಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಿಪಡಿಸಿದ್ದಾರೆ.

ರೈತ ಸಂಘದ ಮುಖಂಡ ಬಿ.ಎಚ್‌.ಉಮೇಶ್‌, ಡಿಎಸ್‌ಎಸ್‌ ಮುಖಂಡ ಎ.ಕೆ.ನಾಗರಾಜ್‌, ಬಿ.ಟಿ.ಕುಭೇರಪ್ಪ, ಎಂ.ಎಸ್‌.ಪ್ರಕಾಶ್‌ ಒಡೆಯರ್‌, ಪಿಠಾರಿ ರಮೇಶ್‌, ವಾಲ್ಮೀಕಿ ಸಮಾಜದ ಅಧ್ಯಕ್ಷ ಸುರೇಶ್‌, ನಾಗಪ್ಪ ರಾಜ ಅರಸು, ರಂಗಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.