ಸಾರಾಂಶ
ಗ್ರಾಮ ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದೆ. ಚುನಾವಣೆಯಲ್ಲಿ ಪ್ರಬುದ್ಧ ಮತದಾರರು 10 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ .
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಚಿಕ್ಕಾಡೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ 11 ನಿರ್ದೇಶರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 10 ಮಂದಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದರು.ಸಂಘದ 12 ಮಂದಿ ನಿರ್ದೇಶಕರ ಸ್ಥಾನಗಳ ಪೈಕಿ ಶಂಕರನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 11 ಮಂದಿ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದು ಜೆಡಿಎಸ್ ಬೆಂಬಲಿತ ವಿಜಯೇಂದ್ರ- 424, ಸಿ.ಎಂ.ಕಿರಣ್ ಕುಮಾರ್ - 500, ಸಿ.ಆರ್. ರಾಮು- 503, ಸಿ.ಆರ್.ದೀಪಕ್- 539, ಸಿ.ಎಲ್.ಅಶ್ವಿನಿ- 513, ಡಿ.ಮಂಜುನಾಥ್- 401, ಸಿ.ಜಿ.ಗೌತಮ್- 519, ಸಿ.ಪಿ.ರವಿಕುಮಾರ್ - 364, ಡಿ.ಸಿ.ಲೋಹಿತ್- 252 , ಸಿ.ಬಿ.ಜಗದೀಶ್- 380 ಹಾಗೂ ರೈತಸಂಘ- ಕಾಂಗ್ರೆಸ್ ಬೆಂಬಲಿತ ಡಿ.ಶಶಿಕಲಾ- 410 ಮತಗಳನ್ನು ಪಡೆದು ಆಯ್ಕೆಯಾದರು.
ನೂತನ ನಿರ್ದೇಶಕರನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸಿ ಮಾತನಾಡಿ, ಗ್ರಾಮ ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದೆ. ಚುನಾವಣೆಯಲ್ಲಿ ಪ್ರಬುದ್ಧ ಮತದಾರರು 10 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.ಈ ವೇಳೆ ಮುಖಂಡರಾದ ಗಿರೀಗೌಡ, ರಾಮಕೃಷ್ಣೇಗೌಡ, ಚಂದ್ರಶೇಖರ್, ಪ್ರಸನ್ನಕುಮಾರ್, ಅನಿಲ್‌ಕುಮಾರ್, ಗಿರೀಶ್, ಸ್ವಾಮೀಗೌಡ, ಸಂಜೀವ್, ಸಿ.ಡಿ.ಲೋಕೇಶ್, ನಂಜೇಗೌಡ, ಚೇತನ್, ಅನಿಲ್, ಸೋಮು, ವಾಸುದೇವ್ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು ಹಾಜರಿದ್ದರು.