ಸಾರಾಂಶ
ಕನ್ನಡ್ರಭ ವಾರ್ತೆ ಬೇಲೂರುಕಳಪೆ ಬಿತ್ತನೆ ಬೀಜ ವಿತರಣೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ರೈತರಿಗೆ ಆದ ನಷ್ಟಕ್ಕೆ ಪರಿಹಾರ ನೀಡುವಂತೆ ರೈತ ಸಂಘ ನಡೆಸುತ್ತಿದ್ದ ಅಹೋರಾತ್ರಿ ಮುಷ್ಕರವನ್ನು ಕೈಬಿಡುವಂತೆ ಅಧಿಕಾರಿಗಳು ಮನವೊಲಿಸಿದರು.ಕಳಪೆ ಬಿತ್ತನೆ ಬೀಜ ಹಾಗೂ ಮೆಕ್ಕೆಜೋಳಕ್ಕೆ ಬಿಳಿಸುಳಿರೋಗ ಬಂದಿರುವ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ನೀಡುವಂತೆ ತಾಲೂಕು ಕಚೇರಿ ಮಂಭಾಗ ಕಳೆದ 3 ದಿನಗಳಿಂದ ಅನಿರ್ದಿಷ್ಟಾವಧಿ ಕಾಲ ರೈತ ಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಅಹೋರಾತ್ರಿ ನಡೆಸುತ್ತಿದ್ದ ಪ್ರತಿಭಟನೆ ನಿಲ್ಲಿಸುವಂತೆ ಅಧಿಕಾರಿಗಳು ಮನವೊಲಿಸಿದರೂ ಬಗ್ಗದ ಹಿನ್ನೆಲೆಯಲ್ಲಿ ಸರ್ಕಾರದ ಕೃಷಿ ಪ್ರಧಾನ ಕಾರ್ಯದರ್ಶಿ ದೂರವಾಣಿ ಮೂಲಕ ರೈತ ಸಂಘದ ಪಧಾದಿಕಾರಿಗಳೊಂದಿಗೆ ಮಾತನಾಡಿ, ಪ್ರತಿಭಟನೆ ಕೈಬಿಡಿಸುವಲ್ಲಿ ಮನವೊಲಿಸುವಲ್ಲಿ ಯಶಸ್ವಿಯಾದರು.ರೈತ ಸಂಘದ ಭೋಗಮಲ್ಲೇಶ್ ಹಾಗೂ ಬಳ್ಳೂರಿ ಸ್ವಾಮಿಗೌಡ ಮಾತನಾಡಿ ನಮಗೆ ಸರ್ಕಾರದ ಸುಳ್ಳು ಭರವಸೆ ಬೇಕಿಲ್ಲ. ಪರಿಹಾರದ ಜೊತೆ ೨೨ ಅಂಗಡಿಗಳಿಂದ ನೀಡಿರುವ ಕಳಪೆ ಬೀಜಗಳ ವಿರುದ್ಧ ಕ್ರಮ ಕೈಗೊಂಡು ಅವರ ಪರವಾನಗಿ ರದ್ದುಗೊಳಿಸಿ ಪ್ರಕರಣ ದಾಖಲಿಸಬೇಕು. ಅಲ್ಲದೆ ಒಂದು ವಾರದಲ್ಲಿ ಕೃಷಿ ಇಲಾಖೆ ವತಿಯಿಂದ ಬೆಳೆ ಪರಿಹಾರದ ಬಗ್ಗೆ ಅರ್ಜಿಯನ್ನು ಸ್ವೀಕರಿಸಲು ಎಲ್ಲಾ ಕೃಷಿ ಇಲಾಖೆಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ವಾಪಸ್ಸು ಪಡೆಯುತ್ತಿದ್ದು ಇದು ಈಡೇರದಿದ್ದರೆ ಮುಂದಿನ ದಿನದಲ್ಲಿ ಉಗ್ರರೀತಿಯಲ್ಲಿ ಪ್ರತಭಟಿಸಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬಸವರಾಜ, ಧರ್ಮೇಗೌಡ ಮನು, ನಂಜುಂಡಿ, ಶ್ರೀನಿವಾಸ್ ಹಾಗು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ. ಕೃಷಿ ಅಧಿಕಾರಿಗಳಾದ ರಮೇಶ್, ಕೋಕಿಲಾ, ಕಾವ್ಯಶ್ರೀ ಹಾಗು ಇತರರು ಹಾಜರಿದ್ದರು.