ಸಾರಾಂಶ
ಕೃಷಿ ಇಲಾಖೆಯ ಆತ್ಮ ಯೋಜನಡಿಯಲ್ಲಿ ಕೈಗೊಳ್ಳುತ್ತಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ರೈತರಿಗೆ ಸಂಪೂರ್ಣ ಮಾಹಿತಿ ನೀಡಿದಾಗ ಮಾತ್ರ ಈ ಯೋಜನೆ ಸಾರ್ಥಕ ಪಡೆಯುತ್ತದ ಎಂದು ಉಪ ಕೃಷಿ ನಿರ್ದೇಶಕ ರೇವಣ್ಣಸಿದ್ದನಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಕೃಷಿ ಇಲಾಖೆಯ ಆತ್ಮ ಯೋಜನಡಿಯಲ್ಲಿ ಕೈಗೊಳ್ಳುತ್ತಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ರೈತರಿಗೆ ಸಂಪೂರ್ಣ ಮಾಹಿತಿ ನೀಡಿದಾಗ ಮಾತ್ರ ಈ ಯೋಜನೆ ಸಾರ್ಥಕ ಪಡೆಯುತ್ತದ ಎಂದು ಉಪ ಕೃಷಿ ನಿರ್ದೇಶಕ ರೇವಣ್ಣಸಿದ್ದನಗೌಡ ಹೇಳಿದರು.ಇಲ್ಲಿ ಮಂಗಳವಾರ 2025-26 ನೇ ಸಾಲಿನ ಆತ್ಮ ಯೋಜನೆಯಡಿ ತಾಲೂಕು ರೈತ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಅರಣ್ಯ ಇಲಾಖೆಯಲ್ಲಿ ರೈತರಿಗೆ ಸಸಿಗಳ ವಿತರಣೆ,ಮಣ್ಣಿನ ಸವಕಳಿ ಡೆಯಲು ಗಿಡಗಳನ್ನು ಬೆಳೆಸುವುದು, ತೋಟಗಾರಿಕೆಯಲ್ಲಿ ಹನಿ ನೀರಾವರಿ, ಘಟಕ, ಕೃಷಿ ಯಾಂತ್ರೀಕರಣ, ಬದುವಿನ ಸುತ್ತ ತೆಂಗಿನ ಇತರ ಸಸಿಗಳನ್ನು ನಡೆವುದು ಸೇರಿದಂತೆ ಅನೇಕ ಕೃಷಿ ಚಟುವಟಿಕೆಗಳನ್ನು ಮಾಡಬಹುದು. ಈ ಬಗ್ಗೆ ರೈತರಿಗೆ ಸಕಲ ಮಾಹಿತಿಯನ್ನು ನೀಡುವುದು ಹಾಗೂ ಪಿಎಂ ಕಿಸ್ಸಾನ್ ಯೋಜನೆ ಸೇರಿದಂತೆ ಅನೇಕ ಕೃಷಿ ಯೋಜನೆಗಳು ರೈತರಿಗೆ ತಲುಪಿಸುವ ಕೆಲಸ ನಮ್ಮ ಇಲಾಖೆಗೆ ಸೇರಿದ್ದು ಎಂದರು.ತಾಲೂಕು ಸಹಾಯಕ ಕೃಷಿ ನಿರ್ದೇಶಕ ವಿಶ್ವನಾಥ್ ಮಾತನಾಡಿ, ಕೃಷಿ ಇಲಾಖೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಬರುವ ಎಲ್ಲಾ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಾ ಕೃಷಿಯಲ್ಲಿ ಅಮೋಘ ಸಾಧನೆಯನ್ನು ಮಾಡಿದ ರೈತರನ್ನು ಈ ಯೋಜನೆಯಡಿ ಸಲಹಾ ಸಮೀತಿಯ ಸದಸ್ಯನ್ನಾಗಿಸಿಕೊಂಡು ನೂತನ ತಾಂತ್ರೀಕತೆಗಳನ್ನು ರೈತರ ಕ್ಷೇತ್ರದಲ್ಲಿ ಅಳವಡಿಕೆ ಮತ್ತು ಅನುಷ್ಠಾನಗೋಳಿಸುವಿಕೆಯೊಂದಿಗೆ ಇತರ ರೈತರ ಮಾರ್ಗದರ್ಶಿಯಾಗುವಿಕೆಗೆ ಸಹಕಾರಿಯಾಗಲಿದೆ ಎಂದರು.
ಉಪ ಯೋಜನಾ ನಿರ್ದೆಶಕ ಚಂದ್ರಶೇಖರ್ ಮಾತನಾಡಿ, ತಾಲೂಕು ಮಟ್ಟದಲ್ಲಿ ತಾಲೂಕು ಅನುಷ್ಠಾನ ಸಮಿತಿ ಮತ್ತು ತಾಲೂಕು ರೈತ ಸಲಹಾ ಸಮಿತಿ ಎಂಬ ಎರಡು ಸಮಿತಿಗಳು ರೈತರಿಗೆ ಅವಶ್ಯಕ ತಾಂತ್ರಿಕ ಮಾಹಿತಿ ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತವೆ, ಆತ್ಮ ಯೋಜನೆಯಡಿ ಮಾರ್ಗಸೂಚಿ ಅನ್ವಯ ಅನೇಕ ತರಬೇತಿ, ಪದ್ಧತಿ ಪ್ರಾತ್ಯಕ್ಷತೆಗಳು, ಇತರ ಕಾರ್ಯಕ್ರಮಗಳನ್ನು ಸಕಾಲದಲ್ಲಿ ಅನುಸ್ಠಾನ ಮಾಡುವ ಮೂಲಕ ಉಳಿದ ಕಾರ್ಯಕ್ರಮಗಳ ಆಯೋಜನೆ ಕೈಗೊಳ್ಳುವುದು ಎಂದು ತಿಳಿಸಿದರು.ತೋಟಗಾರಿಕ ಸಹಾಯಕ ನಿರ್ದೇಶಕಿ ರೇಖಾ, ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕಿ ಸುಮಾ,ಎಪಿಎಂಸಿ ಕಾರ್ಯದರ್ಶಿ ಮಂಜುನಾಥ್,ಆತ್ಮ ಯೋಜನೆಯ ಸಿಬ್ಬಂದಿಗಳಾದ ಸಚಿನ್, ಮಂಜುನಾಥ್, ಪ್ರದೀಪ್, ಮಾಲ, ರಿಹಾನ್ ಮತ್ತು ತಾಲೂಕು ರೈತ ಸಲಹಾ ಸಮಿತಿಯ ಸದಸ್ಯರು ಹಾಜರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))