ಕೃಷಿ ಸಂಘದ ಚುನಾವಣೆ: ರೈತ ಸಂಘ- ಕಾಂಗ್ರೆಸ್ ಬೆಂಬಲಿತರಿಗೆ ಮೇಲುಗೈ

| Published : Apr 14 2025, 01:21 AM IST

ಕೃಷಿ ಸಂಘದ ಚುನಾವಣೆ: ರೈತ ಸಂಘ- ಕಾಂಗ್ರೆಸ್ ಬೆಂಬಲಿತರಿಗೆ ಮೇಲುಗೈ
Share this Article
  • FB
  • TW
  • Linkdin
  • Email

ಸಾರಾಂಶ

ರೈತಸಂಘ- ಕಾಂಗ್ರೆಸ್ ಬೆಂಬಲಿತ ಬಸ್ತಿಹಳ್ಳಿ ಮಹದೇವಪ್ಪ, ಕೆ.ಪಿ.ಚಂದ್ರಶೇಖರ್‌ ಹೊಸಕನ್ನಂಬಾಡಿ, ಹಾಗನಹಳ್ಳಿ ಸಿದ್ದಪ್ಪ ಕೆಂಪಣ್ಣ, ಇಂದ್ರಮ್ಮ, ರಜಿನಿಕಾಂತ್ ಚಿಕ್ಕಾಯರಹಳ್ಳಿ, ಎನ್.ಎಚ್.ರಮೇಶ್ ನಾರ್ತ್‌ ಬ್ಯಾಂಕ್ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಚಿಕ್ಕಾಯರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ 11 ನಿರ್ದೇಶಕ ಸ್ಥಾನಗಳ ಪೈಕಿ ರೈತಸಂಘ- ಕಾಂಗ್ರೆಸ್ ಬೆಂಬಲಿತ 6 ಹಾಗೂ ಜೆಡಿಎಸ್ ಬೆಂಬಲಿತ 5 ಆಯ್ಕೆಯಾಗಿದ್ದಾರೆ.

ಚುನಾವಣೆಯಲ್ಲಿ ರೈತಸಂಘ- ಕಾಂಗ್ರೆಸ್ ಬೆಂಬಲಿತ ಬಸ್ತಿಹಳ್ಳಿ ಮಹದೇವಪ್ಪ, ಕೆ.ಪಿ.ಚಂದ್ರಶೇಖರ್‌ ಹೊಸಕನ್ನಂಬಾಡಿ, ಹಾಗನಹಳ್ಳಿ ಸಿದ್ದಪ್ಪ, ಕೆಂಪಣ್ಣ, ಇಂದ್ರಮ್ಮ, ರಜಿನಿಕಾಂತ್ ಚಿಕ್ಕಾಯರಹಳ್ಳಿ, ಎನ್.ಎಚ್.ರಮೇಶ್ ನಾರ್ತ್‌ ಬ್ಯಾಂಕ್ ಆಯ್ಕೆಯಾಗಿದ್ದಾರೆ.

ಜೆಡಿಎಸ್ ಬೆಂಬಲಿತ ಎಚ್.ಎಸ್.ಚಂದ್ರಶೇಖರ್ ಹಾಗನಹಳ್ಳಿ, ವಿ.ಎಸ್.ವಿರೂಪಾಕ್ಷ ಚಿಕ್ಕಾಯರಹಳ್ಳಿ, ಹೊಸಕನ್ನಂಬಾಡಿ ಭಾಗ್ಯಮ್ಮ, ಎಂ.ರಮೇಶ್, ನಾರ್ತ್ ಬ್ಯಾಂಕ್ ಮಹೇಶ್ ಗೆಲುವು ಸಾಧಿಸಿದ್ದಾರೆ. ಚುನಾವಣಾಧಿಕಾರಿಯಾಗಿ ವಸೀಂಪಾಷ ಕರ್ತವ್ಯ ನಿರ್ವಹಿಸಿದರು.

ಚುನಾವಣೆಯಲ್ಲಿ ಗೆಲುವು ಸಾಧಿಸಿದ ರೈತಸಂಘ ಕಾಂಗ್ರೆಸ್ ಬೆಂಬಲಿತರನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ತಾಯಿ ಸುನೀತ ಪುಟ್ಟಣ್ಣಯ್ಯ ಅವರು ಕ್ಯಾತನಹಳ್ಳಿಯ ತಮ್ಮ ನಿವಾಸದಲ್ಲಿ ಅಭಿನಂದಿಸಿದರು.

ಬಳಿಕ ಮಾತನಾಡಿ, ಚುನಾವಣೆಯಲ್ಲಿ ರೈತಸಂಘ-ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿ ಸಂಘದ ಅಧಿಕಾರಿಗಳನ್ನು ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರು ಒಗ್ಗಟ್ಟಿನಿಂದ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಇದೇ ವೇಳೆ ಹಾಗನಹಳ್ಳಿ ಶಿವಣ್ಣ ರ ಪುತ್ರ ಬಸವರಾಜು ಅವರು ರೈತಸಂಘ ಸೇರ್ಪಡೆಗೊಂಡರು. ಗ್ರಾಪಂ ಮಾಜಿ ಅಧ್ಯಕ್ಷ ಕಟ್ಟೇರಿದೇವರಾಜು, ಸದಸ್ಯ ಶಿವಕುಮಾರ್, ಹಾಗನಹಳ್ಳಿ ಗೋಪಾಲ್, ನಾಗೇಶ್, ಲೋಕೇಶ್, ಸೋಮಶೇಖರ್ ಹಾಗೂ ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ದಯಾನಂದ ಹಾಜರಿದ್ದರು.

ಇಂದು ಅಲೆಯನ್ಸ್ ಸಂಸ್ಥೆ ನೂತನ ಸಂಪುಟ ಸದಸ್ಯರ ದಾಯತ್ವ ಸ್ವೀಕಾರ ಸಮಾರಂಭ

ಮದ್ದೂರು:

ಅಂತಾರಾಷ್ಟ್ರೀಯ ಅಲೆಯನ್ಸ್ ಸಂಸ್ಥೆಯ ಜಿಲ್ಲೆ 268 ಎಸ್ ರಾ ನೂತನ ಸಂಪುಟ ಸದಸ್ಯರ ದಾಯತ್ವ ಸ್ವೀಕಾರ ಸಮಾರಂಭ ಏ.14ರಂದು ಪಟ್ಟಣದ ಶಿವಪುರದ ಶ್ರೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆ ಜಿಲ್ಲಾ ರಾಜ್ಯಪಾಲ ಎಚ್.ಮಾದೇಗೌಡ ಹೇಳಿದರು.

ಬೆಳಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಖ್ಯಾತ ಹೃದಯ ರೋಗ ತಜ್ಞ ಹಾಗೂ ಸಂಸದ ಡಾ.ಸಿ.ಎನ್. ಮಂಜುನಾಥ್ ಉದ್ಘಾಟಿಸುವರು. ಸಂಸ್ಥೆ ಅಂತಾರಾಷ್ಟ್ರೀಯ ಅಧ್ಯಕ್ಷ ರಾಜಕುಮಾರ್ ಸಕ್ಸೆನಾ ನೂತನ ಸಂಪುಟ ಸದಸ್ಯರ ದಾಯಿತ್ವ ನೆರವೇರಿಸುವವರು. ಅತಿಥಿಗಳಾಗಿ ಚಲನಚಿತ್ರ ಸಂಗೀತ ನಿರ್ದೇಶಕ ವಿ.ಮನೋಹರ್, ಅಲೈಯನ್ಸ್ ಸಂಸ್ಥೆ ಅಂತಾರಾಷ್ಟ್ರೀಯ ನಿರ್ದೇಶಕ ಡಾಕ್ಟರ್ ನಾಗರಾಜ ಬೈರಿ ಭಾಗವಹಿಸುವರು ಎಂದರು.

ವಿಶೇಷ ಆಹ್ವಾನಿತರಾಗಿ ನಿಕಟಪೂರ್ವ ಅಂತಾರಾಷ್ಟ್ರೀಯ ನಿರ್ದೇಶಕ ಜಿ.ಪಿ.ದಿವಾಕರ್, ಜಂಟಿ ಖಜಾಂಚಿ ಅಜಂತ ರಂಗಸ್ವಾಮಿ, ಸಮಿತಿ ಅಧ್ಯಕ್ಷ ಕೆ.ಎಂ.ಮುನಿಯಪ್ಪ ಪಾಲ್ಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿವಿ. ಎಸ್. ನಾಗರಾಜು, ಅತಿಥೇಯ ಸಮಿತಿ ಎಂ.ಎನ್.ಶಿವಣ್ಣ, ಎಂ.ಮಹೇಶ್, ಡಿ.ಕೆ.ಪ್ರಭಾಕರ್ ಇದ್ದರು.