ಕೇರಳಕ್ಕೆ ಸಾಗಿಸಲು ಸಂಗ್ರಹಿಸಿದ್ದ 459 ಚೀಲ ಬಿತ್ತನೆ ಬೀಜ ವಶಕ್ಕೆ

| Published : Feb 22 2024, 01:45 AM IST

ಸಾರಾಂಶ

ನಿಖರ ಮಾಹಿತಿ ಮೇರೆಗೆ ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಗೋದಾಮು ಮತ್ತು ಸಿಂಧುವಳ್ಳಿ ಗ್ರಾಮದ ಕೆ.ಎ. ಆಗ್ರೋ ಬಿತ್ತನೆ ಬೀಜ ಮಾರಾಟ ಕೇಂದ್ರದ ಮೇಲೆ ದಾಳಿ ನಡೆಸಲಾಗಿದ್ದು, ಅಲ್ಲಿ ಸುಮಾರು ಪರವಾನಗಿಯಲ್ಲಿ ನಮೂದಿಸದೆ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 230 ಚೀಲ ಮತ್ತು ಯಾವುದೇ ಸಂಸ್ಥೆಯ ಲೇಬಲ್ ಇಲ್ಲದ 110 ಚೀಲ ಬಿತ್ತನೆ ಬೀಜ ಹಾಗೂ ವಾರಂಗಲ್ ಸಂಸ್ಥೆಯ ಸುಮಂಜಲಿ ಸೀಡ್ಸ್ ಹಾಗೂ ಫಾರ್ಮ್ ಕಂಪನಿಗೆ ಸೇರಿದ 83 ಚೀಲ, ವೆಂಕಟೇಶವರ ಸೀಡ್ಸ್ ದಾಸಪುರಂಗೆ ಸೇರಿದ 36 ಚೀಲ ಸೇರಿದಂತೆ ಒಟ್ಟು 459 ಚೀಲ ಬಿತ್ತನೆ ಬೀಜಗಳನ್ನು ವಶಕ್ಕೆ ಪಡೆಯಲಾಗಿದೆ

ಕೇರಳಕ್ಕೆ ಸಾಗಿಸಲು ಸಂಗ್ರಹಿಸಿದ್ದ ಬಿತ್ತನೆ ಬೀಜದ ಅಕ್ರಮ ದಾಸ್ತಾನು ಕೇಂದ್ರಗಳ ಮೇಲೆ ಕೃಷಿ ಅಧಿಕಾರಿಗಳು ದಾಳಿ ನಡೆಸಿ ಸುಮಾರು 459 ಚೀಲ ಬಿತ್ತನೆ ಬೀಜಗಳನ್ನು ವಶಪಡಿಸಿಕೊಂಡಿದ್ದಾರೆ.

ಕೃಷಿ ಜಾಗೃತ ಕೋಶದ ಅಧಿಕಾರಿಗಳು ಮತ್ತು ಸಹಾಯಕ ಕೃಷಿ ನಿರ್ದೇಶಕ ಎಸ್.ಕೆ. ರವಿ ನೇತೃತ್ವದಲ್ಲಿ ಕೃಷಿ ಅಧಿಕಾರಿಗಳು ತಾಲೂಕಿನ ಸಿಂಧುವಳ್ಳಿ ಗ್ರಾಮದಲ್ಲಿರುವ ಕೆ.ಎ. ಆಗ್ರೋ ಸೀಡ್ಸ್ ಭಿತ್ತನೆ ಬೀಜ ಮಾರಾಟ ಕೇಂದ್ರದಲ್ಲಿ ಹಾಗೂ ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಗೋದಾಮು ಕೇಂದ್ರದ ಮೇಲೆ ಏಕ ಕಾಲದಲ್ಲಿ ದಾಳಿ ನಡೆಸಿದ ಕೃಷಿ ಅಧಿಕಾರಿಗಳು ಪರವಾನಗಿಯಲ್ಲಿ ನಮೂದಿಸದೆ ಇರುವ 30 ಕೆಜಿ ತೂಕದ 230 ಚೀಲ ಜ್ಯೋತಿ ತಳಿಯ ಭತ್ತದ ಬಿತ್ತನೆ ಬೀಜ ಮತ್ತು ಯಾವುದೇ ಅಧಿಕೃತ ಲೇಬಲ್ ಇಲ್ಲದ 30 ಕೆ.ಜಿ ತೂಕದ 110 ಜ್ಯೋತಿ ಭತ್ತದ ಬಿತ್ತನೆ ಬೀಜ ಸೇರಿದಂತೆ 340 ಚೀಲ ಬಿತ್ತನೆ ಬೀಜಗಳನ್ನು ಮತ್ತು ಸುಮಂಜಲಿ ಸೀಡ್ಸ್ ಹಾಗೂ ಫಾರ್ಮ್ ವಾರಂಗಲ್ ಸಂಸ್ಥೆಯ 83 ಚೀಲ, ಶ್ರೀ ವೆಂಕಟೇಶ್ವರ ಸೀಡ್ಸ್ ದಾಸಪುರಂ ಸಂಸ್ಥೆಯ 36 ಚೀಲ ಸೇರಿದಂತೆ 119 ಚೀಲ ಜ್ಯೋತಿ ತಳಿಯ ಬಿತ್ತನೆ ಬೀಜಗಳು ಸೇರಿದಂತೆ ಒಟ್ಟು 459 ಚೀಲ ಅಕ್ರಮ ದಾಸ್ತಾನನ್ನು ಜಪ್ತಿ ಮಾಡಿ ವಶಕ್ಕೆ ಪಡೆದಿದ್ದಾರೆ.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಕೆ. ರವಿ ಮಾತನಾಡಿ, ನಿಖರ ಮಾಹಿತಿ ಮೇರೆಗೆ ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಗೋದಾಮು ಮತ್ತು ಸಿಂಧುವಳ್ಳಿ ಗ್ರಾಮದ ಕೆ.ಎ. ಆಗ್ರೋ ಬಿತ್ತನೆ ಬೀಜ ಮಾರಾಟ ಕೇಂದ್ರದ ಮೇಲೆ ದಾಳಿ ನಡೆಸಲಾಗಿದ್ದು, ಅಲ್ಲಿ ಸುಮಾರು ಪರವಾನಗಿಯಲ್ಲಿ ನಮೂದಿಸದೆ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 230 ಚೀಲ ಮತ್ತು ಯಾವುದೇ ಸಂಸ್ಥೆಯ ಲೇಬಲ್ ಇಲ್ಲದ 110 ಚೀಲ ಬಿತ್ತನೆ ಬೀಜ ಹಾಗೂ ವಾರಂಗಲ್ ಸಂಸ್ಥೆಯ ಸುಮಂಜಲಿ ಸೀಡ್ಸ್ ಹಾಗೂ ಫಾರ್ಮ್ ಕಂಪನಿಗೆ ಸೇರಿದ 83 ಚೀಲ, ವೆಂಕಟೇಶವರ ಸೀಡ್ಸ್ ದಾಸಪುರಂಗೆ ಸೇರಿದ 36 ಚೀಲ ಸೇರಿದಂತೆ ಒಟ್ಟು 459 ಚೀಲ ಬಿತ್ತನೆ ಬೀಜಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳನ್ನು ಮೇಲ್ನೋಟಕ್ಕೆ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಸಾಗಾಟ ನಡೆಸಲು ಈ ಕೇಂದ್ರದಲ್ಲಿ ಜ್ಯೋತಿ ತಳಿಯ ಬಿತ್ತನೆ ಬೀಜಗಳನ್ನು ಸಂಗ್ರಹಿಸಿ ಇಡಲಾಗಿತ್ತು ಎಂಬುದು ಕಂಡುಬಂದಿದ್ದು, ಇವುಗಳನ್ನು ವಶಕ್ಕೆ ಪಡೆಯಲಾಗಿದೆ. ಹಿರಿಯ ಕೃಷಿ ಅಧಿಕಾರಿಗಳ ಗಮನಕ್ಕೆ ತಂದು ಅಕ್ರಮ ದಾಸ್ತಾನುದಾರರ ಮೇಲೆ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.

ದಾಳಿಯಲ್ಲಿ ಮೈಸೂರು ಕೃಷಿ ಜಾಗೃತ ದಳದ ಉಪ ನಿರ್ದೇಶಕರಾದ ಭಾನು ಪ್ರಕಾಶ್, ವೆಂಕಟೇಶ್, ಎಚ್.ಬಿ. ದಿವಾಕರ, ಸಹಾಯಕ ಕೃಷಿ ನಿರ್ದೇಶಕ ಎಸ್.ಕೆ. ರವಿ, ಕೃಷಿ ಅಧಿಕಾರಿಗಳಾದ ಮಧುರಾ ಮತ್ತು ತಂಡ ಭಾಗವಹಿಸಿದ್ದರು.