ಸ್ವಾವಲಂಬಿ ಬದುಕಿಗೆ ಕೃಷಿ ಪೂರಕ

| Published : Feb 17 2025, 12:31 AM IST

ಸಾರಾಂಶ

ದಾಬಸ್‍ಪೇಟೆ: ಸ್ವಾವಲಂಬಿ ಬದುಕಿಗೆ ಕೃಷಿ ಚಟುವಟಿಕೆ ಪೂರಕ. ಇತ್ತೀಚಿನ ದಿನಗಳಲ್ಲಿ ಕೃಷಿಕರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದಕರ ಎಂದು ಶಾಸಕ ಎನ್. ಶ್ರೀನಿವಾಸ್ ತಿಳಿಸಿದರು.

ದಾಬಸ್‍ಪೇಟೆ: ಸ್ವಾವಲಂಬಿ ಬದುಕಿಗೆ ಕೃಷಿ ಚಟುವಟಿಕೆ ಪೂರಕ. ಇತ್ತೀಚಿನ ದಿನಗಳಲ್ಲಿ ಕೃಷಿಕರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದಕರ ಎಂದು ಶಾಸಕ ಎನ್. ಶ್ರೀನಿವಾಸ್ ತಿಳಿಸಿದರು.

ತ್ಯಾಮಗೊಂಡ್ಲು ಹೋಬಳಿಯ ಮಹಿಮಾಪುರದ ಮಹಿಮರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ಪಶುಸಂಗೋಪನಾ ಇಲಾಖೆ ಏರ್ಪಡಿಸಿದ್ದ ದನಗಳ ಜಾತ್ರೆಯಲ್ಲಿ ಆಯ್ಕೆಯಾದ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಕೃಷಿಯಿಂದ ನಿರುದ್ಯೋಗ ಸಮಸ್ಯೆ ನಿವಾರಿಸಿ ಆರ್ಥಿಕ ಮಟ್ಟ ವೃದ್ಧಿಸಿಕೊಳ್ಳಬಹುದು. ರೈತರು ಕೃಷಿ ಜತೆಗೆ ಪಶು ಸಂಗೋಪನೆ ಬಗ್ಗೆಯೂ ಗಮನಹರಿಸಬೇಕೆಂದರು.

ಇದೇ ಸಂದರ್ಭದಲ್ಲಿ ಒಟ್ಟು 32 ರೈತರಿಗೆ 6 ರೈತರಿಗೆ ಪ್ರಥಮ ಬಹುಮಾನ, 4 ರೈತರಿಗೆ ದ್ವಿತೀಯ ಹಾಗೂ 3 ರೈತರಿಗೆ ತೃತೀಯ ಬಹುಮಾನ, 19 ರೈತರಿಗೆ ಸಮಾಧಾನಕರ ಬಹುಮಾನ ವಿತರಿಸಿದರು.

ಧಾರ್ಮಿಕ ದತ್ತಿ ಇಲಾಖೆ ಇಒ ಬೃಂದಾ, ಗ್ರಾಪಂ ಅಧ್ಯಕ್ಷೆ ಸುನಂದಮ್ಮ, ಪಿಡಿಒ ಮೋಹನ್, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮೊಹಮ್ಮದ್ ಮಸೂದ್ ಖಾನ್ ದುರಾನಿ, ಪಶು ವೈದ್ಯರಾದ ಡಾ.ಬಾಲಸುಬ್ರಹ್ಮಣ್ಯ. ಡಾ.ಪೃಥ್ವಿರಾಜ್, ಡಾ.ನಯನ್ ಕುಮಾರ್, ಡಾ.ರಾಜಣ್ಣ, ಡಾ.ರೂಪೇಶ್, ಮುಖಂಡರಾದ ಶೈಲೇಂದ್ರ, ಬಿ.ಟಿ.ರಾಮಚಂದ್ರಪ್ಪ, ಗಂಗರಾಜು, ನಾರಾಯಣಗೌಡ, ಜಗದೀಶ್, ಗೋವಿಂದರಾಜು, ಪ್ರಕಾಶ್‍ಬಾಬು, ಶ್ರೀನಿವಾಸ್, ಗ್ರಾಪಂ ಸದಸ್ಯರಾದ ಕೆ.ಕೃಷ್ಣಮೂರ್ತಿ, ಚಂದ್ರಶೇಖರಯ್ಯ ರತ್ನ, ಸೌಭಾಗ್ಯಮ್ಮ ಇತರರಿದ್ದರು.

(ಪೋಟೋ ಕ್ಯಾಪ್ಷನ್‌) ತ್ಯಾಮಗೊಂಡ್ಲು ಹೋಬಳಿಯ ಮಹಿಮಾಪುರದ ಮಹಿಮರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ದನಗಳ ಜಾತ್ರೆಯಲ್ಲಿ ಆಯ್ಕೆಯಾದ ಉತ್ತಮ ರಾಸುಗಳಿಗೆ ಶಾಸಕ ಶ್ರೀನಿವಾಸ್ ಬಹುಮಾನ ವಿತರಿಸಿದರು. ಧಾರ್ಮಿಕ ದತ್ತಿ ಇಲಾಖೆ ಇಒ ಬೃಂದಾ, ಗ್ರಾಪಂ ಅಧ್ಯಕ್ಷೆ ಸುನಂದಮ್ಮ, ಪಿಡಿಒ ಮೋಹನ್ ಇತರರಿದ್ದರು.