ನಾಳೆಯಿಂದ ಕಡವಿನಕಟ್ಟೆಯಲ್ಲಿ ಅಹೋರಾತ್ರಿ ಭಜನೆ

| Published : Nov 29 2024, 01:04 AM IST

ಸಾರಾಂಶ

ಭಜನಾ ಕಾರ್ಯಕ್ರಮವು ನ. ೩೦ರಂದು ಬೆಳಗ್ಗೆ ೬.೪೧ಕ್ಕೆ ಆರಂಭವಾಗಿ ಡಿ. ೧ರಂದು ಬೆಳಗ್ಗೆ ದೇವರ ಪೂಜೆಯ ತನಕ ಅಹೋರಾತ್ರಿ ಭಜನಾ ಕಾರ್ಯಕ್ರಮ ನಡೆಯಲಿದೆ.

ಭಟ್ಕಳ: ಇಲ್ಲಿಯ ಕಡವಿನಕಟ್ಟೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನ. ೩೦ರಂದು ಅಹೋರಾತ್ರಿ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಜನಾ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಹಾಗೂ ಬೇರೆ ಬೇರೆ ತಾಲೂಕುಗಳಿಂದ ಭಜನಾ ತಂಡ ಆಗಮಿಸಲಿದೆ. ಭಜನಾ ಕಾರ್ಯಕ್ರಮವು ನ. ೩೦ರಂದು ಬೆಳಗ್ಗೆ ೬.೪೧ಕ್ಕೆ ಆರಂಭವಾಗಿ ಡಿ. ೧ರಂದು ಬೆಳಗ್ಗೆ ದೇವರ ಪೂಜೆಯ ತನಕ ಅಹೋರಾತ್ರಿ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ನಿಕಟಪೂರ್ವ ಆಡಳಿತ ಮಂಡಳಿ ಹಾಗೂ ದೇವರ ಅರ್ಚಕ ವೃಂದ ಹಾಗೂ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯವರು ತಿಳಿಸಿದ್ದಾರೆ.

ಡಿ. 30ರಂದು ಪ್ರತಿಬಿಂಬ ಕಾರ್ಯಕ್ರಮ

ಸಿದ್ದಾಪುರ: ಹವ್ಯಕ ಮಹಾಸಭಾ ವತಿಯಿಂದ ತಾಲೂಕಿನ ಹೇರೂರು ಪ್ರಾಂತ್ಯದ ಹವ್ಯಕ ಪ್ರತಿಭೆಗಳಿಗಾಗಿ ಪ್ರತಿಬಿಂಬ ಕಾರ್ಯಕ್ರಮದ ಪ್ರಯುಕ್ತ ಸಾಂಸ್ಕೃತಿಕ ಸ್ಪರ್ಧೆಗಳು, ಧಾರ್ಮಿಕ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಡಿ. ೩೦ರಂದು ಬೆಳಗ್ಗೆ ೯ರಿಂದ ಶ್ರೀಮನ್ನೆಲೆಮಾವಿನ ಮಠದಲ್ಲಿ ಜರುಗಲಿದೆ.

ಅಡಕೆ ಬೆಳೆಗಾರರನ್ನು ಕಾಡುತ್ತಿರುವ ಎಲೆಚುಕ್ಕಿ ರೋಗ ನಿವಾರಣೆಗಾಗಿ ಬೆಳಗ್ಗೆ ೭ರಿಂದ ಧನ್ವಂತರಿ ಹವನ ಮತ್ತು ಜಪ ನಡೆಯಲಿದೆ.ಶ್ರೀಮಠದ ಮಾಧವಾನಂದ ಭಾರತಿ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸುವರು. ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಅಧ್ಯಕ್ಷತೆ ವಹಿಸುವರು. ಡಾ. ಶಶಿಭೂಷಣ ಹೆಗಡೆ ದೊಡ್ಮನೆ, ಜಿ.ಎಂ. ಹೆಗಡೆ ಹೆಗ್ನೂರು, ಗಣಪತಿ ಈಶ್ವರ ಹೆಗಡೆ ಉಂಬಳಮನೆ, ರಾಜಾರಾಮ ಆರ್. ಹೆಗಡೆ ಬಿಳೇಕಲ್, ನರಸಿಂಹ ಮೂರ್ತಿ ಹೆಗಡೆ ತ್ಯಾರ್ಗಲ್ ಉಪಸ್ಥಿತರಿರುತ್ತಾರೆ.ವೇ. ವಿನಾಯಕ ಭಟ್ಟ ವಾಟೇಕೊಪ್ಪ ಅವರಿಂದ ಹವ್ಯಕರ ಹಿಂದಿನ ಇಂದಿನ ದಿನಚರಿ ಅವಲೋಕನ ಹಾಗೂ ವೇ.ಮೂ. ವಿಶ್ವನಾಥ ಭಟ್ಟ ನೀರಗಾನ ಅವರಿಂದ ಸನಾತನ ವೈದಿಕ ಧರ್ಮದ ಕುರಿತು ಹಾಗೂ ವಿ. ಅನಂತಮೂರ್ತಿ ಭಟ್ಟ ಯಲುಗಾರ ಅವರಿಂದ ಹವ್ಯಕರ ಸಂಸ್ಕೃತಿ ಕುರಿತು ಉಪನ್ಯಾಸ ನಡೆಯಲಿದೆ. ಸ್ಪರ್ಧಾ ಸೌರಭ ಹಾಗೂ ಭರತನಾಟ್ಯ ಮತ್ತು ಸಂಗೀತ ಕಾರ್ಯಕ್ರಮ ನಡೆಯಲಿದೆ.ಸಮಾರೋಪ: ಸಂಜೆ ೪.೩೦ರಿಂದ ಜರುಗುವ ಸಮಾರೋಪದಲ್ಲಿ ಶ್ರೀಮಠದ ಮಾಧವಾನಂದ ಭಾರತಿ ಸ್ವಾಮಿಗಳು ಭಾಗವಹಿಸುವರು. ಹವ್ಯಕ ಮಹಾಸಭಾದ ಉಪಾಧ್ಯಕ್ಷ ಶ್ರೀಧರ ಜೆ. ಭಟ್ಟ ಕೆಕ್ಕಾರ ಅಧ್ಯಕ್ಷತೆ ವಹಿಸುವರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಘವೇಂದ್ರ ಶಾಸ್ತ್ರಿ ಬಿಳಗಿ, ಮಂಜುನಾಥ ಎಲ್. ಭಟ್ಟ ಉಂಚಳ್ಳಿ, ಎಂವಿ. ಹೆಗಡೆ ಕಂಚಿಕೈ, ಸಿ.ಎನ್. ಹೆಗಡೆ ತಂಗಾರಮನೆ ಪಾಲ್ಗೊಳ್ಳುವರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಶ್ಯಾಮಸುಂದರ ಎಂ. ಭಟ್ಟ ಕಾಜಿನಮನೆ, ಶಾಂತಾರಾಮ ಎಂ. ಭಟ್ಟ ಹರಿಗಾರ, ನಾಗೇಶ ಸುಬ್ರಾಯ ಹೆಗಡೆ ಕೆರೆಗದ್ದೆ, ಗಣಪತಿ ರಾಮಕೃಷ್ಣ ಭಾಗ್ವತ್ ತ್ಯಾರ್ಗಲ್ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ಪ್ರತಿಬಿಂಬ ನಿರ್ದೇಶಕ ಜಿ.ಎಂ. ಭಟ್ಟ ಕಾಜಿನಮನೆ ತಿಳಿಸಿದ್ದಾರೆ.