ಚನ್ನಕೇಶವಸ್ವಾಮಿ ದಾಸೋಹ ಭವನದಲ್ಲಿ ಛಾಯಾಚಿತ್ರಗ್ರಾಹಕರ ಸಂಘದ ತಾಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆ ಹಾಗೂ ನಿಕಾನ್ ಕ್ಯಾಮರಾ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ ಛಾಯಾಚಿತ್ರಗ್ರಾಹಕರ ವೃತ್ತಿ ಜೀವನ ಕಷ್ಟಕರವಾಗುತ್ತಿದ್ದು, ನಮ್ಮ ಅಸ್ತಿತ್ವಕ್ಕಾಗಿ ರಾಜ್ಯದ್ಯಂತ ಹೋರಾಟ ನಡೆಸುವ ಅನಿವಾರ್ಯತೆ ಬಂದಿದ್ದು, ಸಂಘಟನೆ ಬಲಪಡಬೇಕಿದ್ದು, ಪ್ರತಿ ಛಾಯಾಚಿತ್ರಗ್ರಾಹಕ ಸಂಘದ ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಎ.ಐ. ತಂತ್ರಜ್ಞಾನ ಹಾಗೂ ಇವೆಂಟ್ ಮ್ಯಾನೆಜ್‌ಮೆಂಟ್‌ಗಳು ಛಾಯಾಚಿತ್ರಗ್ರಾಹಕರ ವೃತ್ತಿಯನ್ನು ಕಸಿಯುತ್ತಿವೆ ಎಂದು ಛಾಯಾಚಿತ್ರಗ್ರಾಹಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಿಂಗರಾಜು (ಸ್ವಾಮಿ) ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಚನ್ನಕೇಶವಸ್ವಾಮಿ ದಾಸೋಹ ಭವನದಲ್ಲಿ ಛಾಯಾಚಿತ್ರಗ್ರಾಹಕರ ಸಂಘದ ತಾಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆ ಹಾಗೂ ನಿಕಾನ್ ಕ್ಯಾಮರಾ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ ಛಾಯಾಚಿತ್ರಗ್ರಾಹಕರ ವೃತ್ತಿ ಜೀವನ ಕಷ್ಟಕರವಾಗುತ್ತಿದ್ದು, ನಮ್ಮ ಅಸ್ತಿತ್ವಕ್ಕಾಗಿ ರಾಜ್ಯದ್ಯಂತ ಹೋರಾಟ ನಡೆಸುವ ಅನಿವಾರ್ಯತೆ ಬಂದಿದ್ದು, ಸಂಘಟನೆ ಬಲಪಡಬೇಕಿದ್ದು, ಪ್ರತಿ ಛಾಯಾಚಿತ್ರಗ್ರಾಹಕ ಸಂಘದ ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.ರಾಜ್ಯ ಸಂಘದ ನಿರ್ದೇಶಕ ಕೋನೆರಿ ಸೂರಿ ಆಸರೆ ಯೋಜನೆ ಬಾಂಡ್ ವಿತರಿಸಿ ಮಾತನಾಡಿದರು, ಛಾಯಾಚಿತ್ರಗ್ರಾಹಕರು ಮರಣಹೊಂದಿದ್ದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಲು ರಾಜ್ಯ ಸಂಘವು ಆಸರೆ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಬಾಂಡ್ ಗಳನ್ನು ರಾಜ್ಯದಲ್ಲೇ ಬೇಲೂರಿನಲ್ಲಿ ಪ್ರಥಮವಾಗಿ ವಿತರಿಸಲಾಗುತ್ತಿದೆ ಎಂದರು. ತಾಲೂಕು ಘಟಕದ ಅಧ್ಯಕ್ಷ ಪಿ.ಡಿ.ಚಂದ್ರಶೇಖರ್ ಮಾತನಾಡಿ, ಸದಸ್ಯರ ಸಹಕಾರದಿಂದ ಮುಂದಿನ ದಿನಗಳಲ್ಲಿ, ಛಾಯಾಚಿತ್ರಗ್ರಾಹಕರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು ಪ್ರತಿಯೋಬ್ಬರು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು . ಹಿಂದಿನ ಛಾಯಾಗ್ರಾಹಣಕ್ಕೂ ಈಗಿನ ಛಾಯಾಗ್ರಾಹಣಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದು, ತಾಂತ್ರಿಕತೆ ಬದಲಾದಂತೆ ನಾವುಗಳು ಸಹ ಅದಕ್ಕೆ ಹೊಂದಿಕೊಳ್ಳಬೇಕಿದೆ ಎಂದರು.ತಾಲೂಕು ಘಟಕದ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಸಂಘದ ಸಹಕಾರ್ಯದರ್ಶಿ ಮಲ್ಲೇಶ್ ಮಾತನಾಡಿ, ಛಾಯಾಗ್ರಹಣ ಕ್ಷೇತ್ರಕ್ಕೆ ಡಿಜಿಟಲ್ ಕ್ಯಾಮರಾಗಳು ಬಂದ ನಂತರ ಸಾಕಷ್ಟು ಬದಲಾವಣೆಗಳು ಪ್ರಾರಂಭವಾದವು. ಅ್ಯಂಡ್ರಾಯ್ಡ್ ಮೊಬೈಲ್ ಗಳು ಬಂದ ನಂತರ ಛಾಯಾಚಿತ್ರಗ್ರಾಹಕರಿಗೆ ಸಂಕಷ್ಟ ಪ್ರಾರಂಭವಾದವು. ಈ ನಡುವೆಯೂ ಛಾಯಾಚಿತ್ರಗ್ರಾಹಕ ತನ್ನ ನೈಪುಣ್ಯತೆ ಹಾಗೂ ಗುಣಮಟ್ಟದ ಛಾಯಾಗ್ರಾಹಣದಿಂದ ತನ್ನ ಅಸ್ತಿತ್ವ ಕಾಪಾಡಿಕೊಳ್ಳುತ್ತಿದ್ದಾನೆ ಎಂದರು. ಗೌರವಾಧ್ಯಕ್ಷ ಡಾ.ಶ್ರೀವತ್ಸ ಎಸ್. ವಟಿ ಮಾತನಾಡಿದರು.ನಿಕಾನ್ ಕ್ಯಾಮರ ಮಾರಾಟ ವ್ಯವಸ್ಥಾಪಕ ಮಹೇಶ್ ಹಾಗೂ ಕಾರ್ಯಗಾರ ವ್ಯವಸ್ಥಾಪಕ ಸಿ.ಟಿ.ಸ್ಟೇರಿನ ಅವರ ತಂಡದವರು ತರಬೇತಿ ಕಾರ್ಯಗಾರವನ್ನು ನಡೆಸಿಕೊಟ್ಟರು.ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಎ.ಬಿ.ಪ್ರಕಾಶ್, ಉಪಾಧ್ಯಕ್ಷ ಸೋಮಶೇಖರ್, ಪ್ರಧಾನಕಾರ್ಯದರ್ಶಿ ಎಚ್.ಜೆ.ಸಂದೀಪ್, ಸಹಕಾರ್ಯದರ್ಶಿ ಅಶ್ವತ್, ಖಜಾಂಚಿ ನವೀನ್, ಸಂಘಟನಾಕಾರ್ಯದರ್ಶಿ ಪ್ರಭುರಾವ್ ನಿರ್ದೇಶಕರಾದ ಸತೀಶ್, ಸುನೀಲ್, ಎನ್. ಎಂ. ರವಿಕುಮಾರ್, ಬಸವರಾಜು, ಬಿ.ಪಿ.ಮಧು, ಸಿ.ಎ.ಮೂರ್ತಿ ಸದಸ್ಯರು ಭಾಗವಹಿಸಿದ್ದರು.