ಸಾರಾಂಶ
ಎಐಸಿಸಿ ಸದಸ್ಯ ತಾಲೂಕಿನ ಕಾಂಗ್ರೆಸ್ ಮುಖಂಡ ಸುಬ್ರಮಣಿ ಶ್ರೀಕಂಠೇಗೌಡರು ತಮ್ಮ 47ನೇ ವರ್ಷದ ಹುಟ್ಟುಹಬ್ಬವನ್ನು ತಮ್ಮ ಅಭಿಮಾನಿಗೊಳೊಂದಿಗೆ ಆಚರಿಸಿಕೊಂಡರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಎಐಸಿಸಿ ಸದಸ್ಯ ತಾಲೂಕಿನ ಕಾಂಗ್ರೆಸ್ ಮುಖಂಡ ಸುಬ್ರಮಣಿ ಶ್ರೀಕಂಠೇಗೌಡರು ತಮ್ಮ 47ನೇ ವರ್ಷದ ಹುಟ್ಟುಹಬ್ಬವನ್ನು ತಮ್ಮ ಅಭಿಮಾನಿಗೊಳೊಂದಿಗೆ ಆಚರಿಸಿಕೊಂಡರು.ಹಲವಾರು ಅಭಿಮಾನಿಗಳು ಬೃಹತ್ ಗಾತ್ರದ ಕೇಕ್ ನ್ನು ಸುಬ್ರಹ್ಮಣಿ ಶ್ರೀಕಂಠೇಗೌಡರಿಂದ ಕತ್ತರಿಸಿ ಸಂಭ್ರಮಿಸಿದರು. ನೂರಾರು ಅಭಿಮಾನಿಗಳು ಸುಬ್ರಮಣಿ ಶ್ರೀಕಂಠೇಗೌಡರಿಗೆ ಶುಭ ಕೋರಿದರು. ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ತಾನು ಚುನಾವಣೆಗೆ ಮೊದಲೇ ನೀಡಿದ್ದ 5 ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಇದರಿಂದಾಗಿ ರಾಜ್ಯದ ಕೋಟ್ಯಾಂತರ ಫಲಾನುಭವಿಗಳು ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ. ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಯಿಂದ ಬಡವರು, ದೀನ ದಲಿತರು ಸೇರಿದಂತೆ ಲಕ್ಷಾಂತರ ಮಂದಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದರು.
ಮುಂಬರುವ ದಿನಗಳಲ್ಲಿ ಬರುವ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಮುಂದಿನ 5 ವರ್ಷದಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರವೇರವುದು ಶತಸಿದ್ಧ. ಕೇಂದ್ರ ಸರ್ಕಾರದ ಜನ ವಿರೋಧಿ ಧೋರಣೆಗಳಿಂದ ಜನರು ಹೈರಾಣಾಗಿದ್ದಾರೆ. ಮುಂದೆ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿ ಕಾಂಗ್ರೆಸ್ ನ್ನು ಮತದಾರ ಪ್ರಭು ಅಧಿಕಾರಕ್ಕೆ ತರುವನು ಎಂದು ಭವಿಷ್ಯ ನುಡಿದರು. ಈ ವೇಳೆ ಪಟ್ಟಣ ಪಂಚಾಯಿತಿ ಸದಸ್ಯ ಯಜಮಾನ್ ಮಹೇಶ್, ಮುಖಂಡರಾದ ಹಟ್ಟಿಹಳ್ಳಿ ಪುಟ್ಟಣ್ಣ, ಸುನಿಲ್, ನಾಗಲಾಪುರ ಜಗದೀಶ್, ಕೊಂಡಜ್ಜಿ ಶಿವಕುಮಾರ್, ಜವರಪ್ಪ ಸೇರಿದಂತೆ ಹಲವಾರು ಮಂದಿ ಶುಭ ಹಾರೈಸಿದರು.