ಸಾರಾಂಶ
ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ವಿಭಾಗ ಹಾಗೂ ಮಾಹಿತಿ ವಿಜ್ಞಾನ ವಿಭಾಗಗಳಿಂದ ಜಂಟಿಯಾಗಿ ಆಯೋಜನೆ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ವಿಭಾಗ ಹಾಗೂ ಮಾಹಿತಿ ವಿಜ್ಞಾನ ವಿಭಾಗಗಳಿಂದ ಜಂಟಿಯಾಗಿ ಆಯೋಜನೆ ಮನ ಎಐಸಿಟಿಇ ಪ್ರಾಯೋಜಿತ 6 ದಿನಗಳ ಪ್ರಾಧ್ಯಾಪಕರ ಪುನಶ್ಚೇತನ ಕಾರ್ಯಕ್ರಮ ಆಯೋಜಿಸಿತ್ತು.ಭಾರತ್ಕ್ಯಾನ್ಸರ್ಸಂಸ್ಥೆಯ ನಿರ್ದೇಶಕ ಡಾ.ಅಮರ್ಕುಮಾರ್, ಮೈಸೂರು ವಿಶ್ವವಿದ್ಯಾನಿಲಯದ ಕಂಪ್ಯೂರ್ಸೈನ್ಸ್ವಿಭಾಗದ ಪ್ರಾಧ್ಯಾಪಕ ಡಾ.ಡಿ.ಎಸ್. ಗುರು ಕಾರ್ಯಾಗಾರ ಉದ್ಘಾಟಿಸಿದರು.
ತಂತ್ರಜ್ಞಾನವು ವಿಕಸನಗೊಂಡಿದ್ದರೂ ಮತ್ತು ಪ್ರಪಂಚವು ಕೃತಕ ಬುದ್ಧಿಮತ್ತೆ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ ಅನ್ನು ಅನ್ವೇಷಿಸುತ್ತಿದೆಯಾದರೂ, ಆರೋಗ್ಯ ಮತ್ತು ಕ್ಷೇಮದ ಕ್ಷೇತ್ರದಲ್ಲಿ ಅವುಗಳ ಉಪಯುಕ್ತತೆ ಇನ್ನೂ ಬಹಳಷ್ಟು ವಿಸ್ತಾರವಾಗಬೇಕಿದೆ. ಈ ಅಂತರವನ್ನು ನಿವಾರಿಸಲು ಈ ಪುನಶ್ಚೇತನ ಕಾರ್ಯಕ್ರಮ ಆಯೋಜಿಸಿತ್ತು.ವಿವಿಧ ಸಂಸ್ಥೆಗಳ ಅಧ್ಯಾಪಕರು, ಸಂಶೋಧನಾ ವಿದ್ವಾಂಸರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಾಗಾರದ ತರಗತಿಗಳನ್ನು ಕೈಗಾರಿಕೆ, ಶಿಕ್ಷಣ ಸಂಸ್ಥೆ ಮತ್ತು ವೃತ್ತಿ ಪರ ಸಂಸ್ಥೆಗಳ ಸಂಪನ್ಮೂಲ ವ್ಯಕ್ತಿಗಳು ನಿರ್ವಹಿಸಿದ್ದರು. ಸಂಬಂಧಿತ ಉದ್ದಿಮೆಗಳ ಭೇಟಿಯನ್ನು ಸಹ ಪಠ್ಯಕ್ರಮವು ಒಳಗೊಂಡಿತ್ತು.
ಎಂಇಟಿ ಅಧ್ಯಕ್ಷ ಡಾ.ಎಸ್. ಮುರಳಿ, ಎಂಐಟಿ ಮೈಸೂರು ಪ್ರಾಂಶುಪಾಲ ಡಾ.ಬಿ.ಜಿ. ನರೇಶ್ಕುಮಾರ್, ಸಂಚಾಲಕಿ ಡಾ. ಆರ್.ವಿ. ಪರಿಮಳ, ಸಂಯೋಜಕ ಡಾ.ವೈ.ಎಚ್. ಶರತ್ಕುಮಾರ್ಸಹ ಸಂಯೋಜಕ ಡಾ.ಕೆ. ಬಾಲಕೃಷ್ಣ, ಆಡಳಿತಾಧಿಕಾರಿ ಎ.ಎಂ. ಅನಿರುದ್ಧ ಇದ್ದರು.----------