ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಜಪಾನಂದ ಸ್ವಾಮೀಜಿ ಅವರು ಭೇಟಿ ನೀಡಿ ಒಂದು ತಿಂಗಳ ಆಹಾರ ಸಾಮಗ್ರಿ ಹಾಗೂ ಹೊದಿಕೆ ಹಾಗೂ ಕುಟುಂಬಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ವಿತರಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ತಾಲೂಕಿನ ದವಡಬೆಟ್ಟ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಗುಡಿಸಲು ಸುಟ್ಟು ಸರ್ವಸ್ವ ಕಳೆದುಕೊಂಡಿದ್ದ 80 ವರ್ಷದ ಚಿಕ್ಕಣ್ಣ ಅವರ ಮನೆಗೆ ಮಂಗಳವಾರ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಜಪಾನಂದ ಸ್ವಾಮೀಜಿ ಅವರು ಭೇಟಿ ನೀಡಿ ಒಂದು ತಿಂಗಳ ಆಹಾರ ಸಾಮಗ್ರಿ ಹಾಗೂ ಹೊದಿಕೆ ಹಾಗೂ ಕುಟುಂಬಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ವಿತರಿಸಿದರು.

ಸೋಮವಾರ ಮಧ್ಯಾಹ್ನ ಸಂಭವಿಸಿದ ಅಗ್ನಿ ಅವಘಡದಲ್ಲಿ ಚಿಕ್ಕಣ್ಣ ಅವರ ಗುಡಿಸಲು, ದವಸ ಧಾನ್ಯ, ದಾಖಲೆ ಪತ್ರಗಳು ಹಾಗೂ ಎರಡು ಮೇಕೆಗಳು ಸುಟ್ಟು ಕರಕಲಾಗಿತ್ತು. ಒಂಟಿಯಾಗಿ ವಾಸವಾಗಿರುವ ವೃದ್ಧರಿಗೆ ಜೀವನ ನಡೆಸುವುದೇ ಕಷ್ಟಕರವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ಭೇಟಿ ನೀಡಿ ಅಗತ್ಯ ನೆರವು‌ ಕಲ್ಪಿಸಿದರು ಸ್ವಾಮೀಜಿ ಅವರ ಮಾನವೀಯ ಕಾರ್ಯಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ, ಇತರೆ ಮುಖಂಡರು ಹಾಗೂ ಗ್ರಾಮದ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಆಶ್ರಮದ ಪದಾಧಿಕಾರಿಗಳು ಗ್ರಾಮದ ಮುಖಂಡರಾದ ರಾಧಾಕೃಷ್ಣನಾಯ್ಕ, ಹನುಮಂತರಾಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.