ಸಾರಾಂಶ
ಅಗತ್ಯ ತಿಳಿವಳಿಕೆ ಹಾಗೂ ಮುಂಜಾಗ್ರತೆ ಕ್ರಮಗಳ ಪಾಲನೆಯಿಂದ ಏಡ್ಸ್ ಎಂಬ ಮಹಾಮಾರಿಯನ್ನು ಬುಡಸಮೇತ ಕಿತ್ತೊಗೆಯಲು ಜನರಲ್ಲಿ ಹೆಚ್ಚಿನ ಜಾಗೃತಿ ಅಗತ್ಯವಾಗಿದ್ದು, ಸರ್ಕಾರದ ಜತೆಗೆ ಪ್ರಜ್ಞಾವಂತ ನಾಗರಿಕರು ಕೈ ಜೋಡಿಸುವ ಮೂಲಕ ಏಡ್ಸ್ ನಿರ್ಮೂಲನೆಗೆ ಮುಂದಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಮಹಾಂತೇಶ್ ಮುನವಳ್ಳಿಮಠ್ ಸಲಹೆ ನೀಡಿದರು. ಏಡ್ಸ್ ರೋಗ ಬಾರದಂತೆ ಹೆಚ್ಚಿನ ಜಾಗ್ರತೆ ಹಾಗೂ ಮುಂಜಾಗ್ರತೆ ಕ್ರಮಗಳ ಪಾಲನೆ ಮಾಡುಬೇಕಿದೆ ಮತ್ತು ಸ್ವಾಸ್ಥ ಸಮಾಜ ನಿರ್ಮಾಣದಲ್ಲಿ ಮುಂಜಾಗ್ರತೆ ಕ್ರಮಗಳು ಜತೆಗೆ ಕಾನೂನಿನ ಪಾಲನೆ ಅತ್ಯಗತ್ಯವಾಗಿದೆ ಎಂದರು.
ಹೊಳೆನರಸೀಪುರ: ಅಗತ್ಯ ತಿಳಿವಳಿಕೆ ಹಾಗೂ ಮುಂಜಾಗ್ರತೆ ಕ್ರಮಗಳ ಪಾಲನೆಯಿಂದ ಏಡ್ಸ್ ಎಂಬ ಮಹಾಮಾರಿಯನ್ನು ಬುಡಸಮೇತ ಕಿತ್ತೊಗೆಯಲು ಜನರಲ್ಲಿ ಹೆಚ್ಚಿನ ಜಾಗೃತಿ ಅಗತ್ಯವಾಗಿದ್ದು, ಸರ್ಕಾರದ ಜತೆಗೆ ಪ್ರಜ್ಞಾವಂತ ನಾಗರಿಕರು ಕೈ ಜೋಡಿಸುವ ಮೂಲಕ ಏಡ್ಸ್ ನಿರ್ಮೂಲನೆಗೆ ಮುಂದಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಮಹಾಂತೇಶ್ ಮುನವಳ್ಳಿಮಠ್ ಸಲಹೆ ನೀಡಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಇತ್ತೀಚೆಗೆ ನಡೆದ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಸಹಯೋಗದಲ್ಲಿ ಹಕ್ಕುಗಳು ಪಡೆಯಲು ಸರಿಯಾದ ಮಾರ್ಗ ಅನುಸರಿಸೋಣ ನನ್ನ ಆರೋಗ್ಯ ನನ್ನ ಹಕ್ಕು ಎಂಬ ಧ್ಯೇಯ ವಾಕ್ಯದೊಂದಿಗೆ ಆಯೋಜನೆ ಮಾಡಿದ್ದ ವಿಶ್ವ ಏಡ್ಸ್ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಏಡ್ಸ್ ರೋಗ ಬಾರದಂತೆ ಹೆಚ್ಚಿನ ಜಾಗ್ರತೆ ಹಾಗೂ ಮುಂಜಾಗ್ರತೆ ಕ್ರಮಗಳ ಪಾಲನೆ ಮಾಡುಬೇಕಿದೆ ಮತ್ತು ಸ್ವಾಸ್ಥ ಸಮಾಜ ನಿರ್ಮಾಣದಲ್ಲಿ ಮುಂಜಾಗ್ರತೆ ಕ್ರಮಗಳು ಜತೆಗೆ ಕಾನೂನಿನ ಪಾಲನೆ ಅತ್ಯಗತ್ಯವಾಗಿದೆ ಎಂದರು.
ತಾ. ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್, ಆಡಳಿತ ವೈದ್ಯಾಧಿಕಾರಿ ಡಾ. ಧನಶೇಖರ್, ಐಸಿಟಿಸಿ ವೈದ್ಯಾಧಿಕಾರಿ ಡಾ.ರೇಖಾ, ಆಪ್ತ ಸಮಾಲೋಚಕಿ ಭಾನುಶ್ರೀ, ಆರೋಗ್ಯ ನಿರೀಕ್ಷಕರಾದ ಸೋಮಶೇಖರ್ ಹಾಗೂ ಜೆ.ಟಿ.ಸ್ವಾಮಿ, ಇತರರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))