ಮನುಕುಲಕ್ಕಂಟಿದ ಮಾರಕ ರೋಗ ಏಡ್ಸ್: ಪ್ರಾಚಾರ್ಯ ಡಾ.ಪ್ರಭಾಕರ

| Published : Dec 04 2024, 12:30 AM IST

ಮನುಕುಲಕ್ಕಂಟಿದ ಮಾರಕ ರೋಗ ಏಡ್ಸ್: ಪ್ರಾಚಾರ್ಯ ಡಾ.ಪ್ರಭಾಕರ
Share this Article
  • FB
  • TW
  • Linkdin
  • Email

ಸಾರಾಂಶ

ಏಡ್ಸ್ ಭಯಾನಕ ರೋಗ ಮನುಕುಲಕ್ಕಂಟಿದ ಮಾರಕ ರೋಗವಾಗಿದ್ದು, ಏಡ್ಸ್ ರೋಗದಿಂದ ದೂರವಿರಲು ಸಂಯಮಯುತ ಮತ್ತು ಕೌಟುಂಬಿಕ ಜೀವನವೊಂದೇ ಸುರಕ್ಷಿತ ವಿಧಾನವಾಗಿದೆ ಎಂದು ದಾನಿಗೊಂಡ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಪ್ರಾಚಾರ್ಯ ಡಾ.ಪ್ರಭಾಕರ ಅಪರಾಜ ಹೇಳಿದರು.

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)

ಏಡ್ಸ್ ಭಯಾನಕ ರೋಗ ಮನುಕುಲಕ್ಕಂಟಿದ ಮಾರಕ ರೋಗವಾಗಿದ್ದು, ಏಡ್ಸ್ ರೋಗದಿಂದ ದೂರವಿರಲು ಸಂಯಮಯುತ ಮತ್ತು ಕೌಟುಂಬಿಕ ಜೀವನವೊಂದೇ ಸುರಕ್ಷಿತ ವಿಧಾನವಾಗಿದೆ ಎಂದು ದಾನಿಗೊಂಡ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಪ್ರಾಚಾರ್ಯ ಡಾ.ಪ್ರಭಾಕರ ಅಪರಾಜ ಹೇಳಿದರು.

ದಾನಿಗೊಂಡ ನರ್ಸಿಂಗ್ ಕಾಲೇಜ್‌ನಲ್ಲಿ ಅಂತಾರಾಷ್ಟ್ರೀಯ ಏಡ್ಸ ದಿನಾಚರಣೆಯ ಅಂಗವಾಗಿ ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಚಾರ್ಟ ಪ್ರದರ್ಶನ ಸ್ಪರ್ಧೆ ಹಾಗೂ ಕಿರು ನಾಟಕವನ್ನು ಏರ್ಪಡಿಸಿದ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ದಂಪತಿಗಳ ನಿಷ್ಠೆಯುತ ದೈಹಿಕ ಸಂಬಂಧ ಹಾಗೂ ಪರಸ್ತ್ರೀ, ಪರಪುರುಷರ ಅನೈತಿಕ ಸಂಬಂಧಗಳಿಗೆ ಸ್ವಯಂ ಕಡಿವಾಣ ಹಾಕಿಕೊಂಡು ಒಂದೇ ಸಂಗಾತಿಯೊಡನೆ ಲೈಂಗಿಕ ಜೀವನ ನಡೆಸುವುದೊಂದೇ ಏಡ್ಸ್ ತಡೆಗಟ್ಟು ಏಕೈಕ ಮಾರ್ಗವಾಗಿದೆ. ಏಡ್ಸ್ ರೋಗದ ಭಯಾನಿಕತೆ, ತಡೆಗಟ್ಟುವ ವಿಧಾನ ಹಾಗೂ ಚಿಕಿತ್ಸಾ ಕ್ರಮಗಳ ಕುರಿತು ವಿವರಿಸಿದರು. ಡಾ.ಅನ್ನಪೂರ್ಣ ಎಸ್.ಪ್ರಾಚಾರ್ಯರು, ದಾನಿಗೊಂಡ ನರ್ಸಿಂಗ್ ಕಾಲೇಜ್‌ನ ಪ್ರಾಚಾರ್ಯೆ ಡಾ.ಅನ್ನಪೂರ್ಣ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮದ ಕುರಿತಾಗಿ ವಿದ್ಯಾರ್ಥಿಗಳು ಆರೋಗ್ಯ ರಕ್ಷಣೆ ನೀಡುವುದರ ಬಗ್ಗೆ ಹೇಗೆ ಜಾಗೃಕರಾಗಬೇಕು ಮತ್ತು ಅವರ ಪಾತ್ರವನ್ನು ಹೇಗೆ ನಿಭಾಯಿಸಬೇಕು ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಡಾ.ಆನಂದಕುಮಾರ ಕಡಿ ಮತ್ತು ಸೌಮ್ಯಾ ಎನ್.ನಿರ್ಣಾಯಕರಾಗಿದ್ದರು. ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಥಮ ವರ್ಷದ ವಿದ್ಯಾರ್ಥಿಗಳು ಚಾರ್ಟ ಪ್ರದರ್ಶನ ಸ್ಪರ್ಧೆ ಹಾಗೂ ಕಿರು ನಾಟಕವನ್ನು ಪ್ರದರ್ಶಿಸಿದರು. ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನರ್ಸಿಂಗ್ ಕಾಲೇಜು ಹಾಗೂ ದಾನಿಗೊಂಡ ಆಯುರ್ವೇದ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು ಜಂಟಿಯಾಗಿ ಏಡ್ಸ್ ಜಾಗೃತಿ ರ‍್ಯಾಲಿ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.