ಸಾರಾಂಶ
ಜಗತ್ತಿನ ಅತ್ಯಂತ ಭಯಾನಕ ರೋಗ ಏಡ್ಸ್. ಕೆಲವು ರೋಗಗಳು ಸಾಂದರ್ಭಿಕವಾಗಿ ಋತುಮಾನಕ್ಕೆ ಅನುಗುಣವಾಗಿ ಬರುತ್ತವೆ ಎಂದು ಬೆಳಗಾವಿಯ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕ ಎಂ.ಎಂ. ಸನದಿ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಜಗತ್ತಿನ ಅತ್ಯಂತ ಭಯಾನಕ ರೋಗ ಏಡ್ಸ್. ಕೆಲವು ರೋಗಗಳು ಸಾಂದರ್ಭಿಕವಾಗಿ ಋತುಮಾನಕ್ಕೆ ಅನುಗುಣವಾಗಿ ಬರುತ್ತವೆ ಎಂದು ಬೆಳಗಾವಿಯ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕ ಎಂ.ಎಂ. ಸನದಿ ಹೇಳಿದರು.ತಾಲೂಕಿನ ಕೇರೂರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದಡಿ ಹಮ್ಮಿಕೊಂಡ ಏಡ್ಸ್‌ರೋಗದ ಕುರಿತು ಜಾಗೃತಿ ಮತ್ತು ಆಪ್ತ ಸಮಾಲೋಚನೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಏಡ್ಸ್ ಎನ್ನುವ ರೋಗ ಹಾಗೆ ಅಲ್ಲ. ಇದು ಸರ್ವಾಂತರಯಾಮಿ. ಇದಕ್ಕೆ ಯಾವುದೆ ಧರ್ಮ, ಜಾತಿ, ಪಂಗಡ, ಲಿಂಗ, ಬಡವ, ಶ್ರೀಮಂತ ಎಂಬ ಬೇಧ ಭಾವವಿಲ್ಲ ಎಂದರು.
ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಶ್ರೀಶೈಲ ಕೋಲಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾರ್ಚಾರ್ಯ ಎಂ. ಆರ್. ಭಾಗಾಯಿ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಸ್‌ಎಸ್ ಸ್ವಯಂ ಸೇವಕ ಗಾಯತ್ರಿ ಪರಗೌಡ ನಿರೂಪಿಸಿದರು. ಈ ವೇಳೆ ಉಪನ್ಯಾಸಕರಾದ ಶಂಕರ ತೇಲಿ, ಎಸ್.ಎಂ.ಕುಲಕರ್ಣಿ, ಅನಿಲ ಬಾನೆ, ಎಸ್.ಡಿ.ಮಾನೆ, ಗಣಪತಿ ಪಾಟೀಲ, ಕವಿತಾ ಮಾಲಬನ್ನವರ, ಪ್ರತಿಭಾ ವಟ್ನಾಳ, ಆರ್.ಎ.ಪಾಟೀಲ ಉಪಸ್ಥಿತರಿದ್ದರು.