ಸಾರಾಂಶ
ಅಮೀನಗಡ: ಮಾ.16 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಐಹೊಳೆ ಶ್ರೀ ರಾಮಲಿಂಗೇಶ್ವರ ಜಾತ್ರೆ ಭರದ ಸಿದ್ದತೆ ನಡೆದಿದೆ. ಈ ಬಾರಿ ಶ್ರೀ ರಾಮಲಿಂಗೇಶ್ವರ ರಥಕ್ಕೆ ₹ 1.25 ಲಕ್ಷ ವೆಚ್ಚದಲ್ಲಿ ನೂತನ ಗೋಪುರ ನಿರ್ಮಿಸಲಾಗುತ್ತಿದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ, ತಾಪಂ ಮಾಜಿ ಅಧ್ಯಕ್ಷ ಯುವರಾಜ ದೇಸಾಯಿ ಹೇಳಿದರು.
ಕನ್ನಡಪ್ರಭವಾರ್ತೆ ಅಮೀನಗಡ
ಮಾ.16 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಐಹೊಳೆ ಶ್ರೀ ರಾಮಲಿಂಗೇಶ್ವರ ಜಾತ್ರೆ ಭರದ ಸಿದ್ದತೆ ನಡೆದಿದೆ. ಈ ಬಾರಿ ಶ್ರೀ ರಾಮಲಿಂಗೇಶ್ವರ ರಥಕ್ಕೆ ₹ 1.25 ಲಕ್ಷ ವೆಚ್ಚದಲ್ಲಿ ನೂತನ ಗೋಪುರ ನಿರ್ಮಿಸಲಾಗುತ್ತಿದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ, ತಾಪಂ ಮಾಜಿ ಅಧ್ಯಕ್ಷ ಯುವರಾಜ ದೇಸಾಯಿ ಹೇಳಿದರು.ಐತಿಹಾಸಿಕ ಐಹೊಳೆ ಗ್ರಾಮದ ಮಲಪ್ರಭ ನದಿತೀರದ ಪೌರಾಣಿಕ ಹಿನ್ನೆಲೆಯುಳ್ಳ ಶ್ರೀ ರಾಮಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವದ ಪೂರ್ವ ಸಿದ್ಧತೆ ಕುರಿತು ಮಾಹಿತಿ ನೀಡಿದ ಅವರು, ಸಾವಿರಾರು ವರ್ಷಗಳ ಇತಿಹಾಸ ಇರುವ ಐಹೊಳೆಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನಕ್ಕೆ ನಮ್ಮ ಹಿರಿಯರು 91 ವರ್ಷಗಳ ಹಿಂದೆ ರಥ ನಿರ್ಮಿಸಿ ಶ್ರೀ ರಾಮಲಿಂಗೇಶ್ವರ ರಥೋತ್ಸವ ಆಚರಿಸುತ್ತ ಬಂದಿದ್ದಾರೆ. ರಥೋತ್ಸವದಂದು ಸಾವಿರಾರು ಭಕ್ತರು ಆಗಮಿಸಲಿದ್ದಾರೆ. ಈ ಬಾರಿ ಮಲಪ್ರಭ ನದಿಯಲ್ಲಿ ನೀರಿಲ್ಲದ ಕಾರಣ, ಸ್ಥಳೀಯ ಗ್ರಾಪಂ ಸಹಕಾರದಿಂದ ಭಕ್ತರಿಗೆ ಕುಡಿಯುವ ನೀರು, ವಿದ್ಯುತ್, ಸುಗಮ ಸಾರಿಗೆ ವ್ಯವಸ್ಥೆ, ವ್ಯಾಪಾರಿಗಳಿಗೆ ಮಳಿಗೆ ಹಾಕಲು ಅನುಕೂಲ ಮಾಡಿಕೊಡಲಾಗುತ್ತಿದೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಬಿ.ಸಿ. ಅಂಟರತಾನಿ ಮಾತನಾಡಿ, ಜಾತ್ರೆಗೆ ಬರುವ ಭಕ್ತರಿಗೆ ಉತ್ತಮ ಮೂಲಸೌಲಭ್ಯ ಕಲ್ಪಿಸಲು ಪ್ರಾಚ್ಯವಸ್ತು ಇಲಾಖೆಯವರ ಕಿರಿಕಿರಿಯಿಂದ ಸಾಧ್ಯವಾಗುತ್ತಿಲ್ಲ ಎಂದರು.ಗ್ರಾಪಂ ಅಧ್ಯಕ್ಷ ಹನುಮಂತ ಆಡಿನ, ಪಿಡಿಒ ಮಹಾಂತೇಶ ಗೋಡಿ, ಸದಸ್ಯರಾದ ಶರಣಪ್ಪ ಮಾಲಗಿತ್ತಿ, ಪ್ರವಾಸಿ ಮಾರ್ಗದರ್ಶಿ ಪರಶುರಾಮ ಗೋಡಿ, ಚಿದಾನಂದ ಗೌಡರ, ವಿಶ್ವನಾಥ ಹಂಡಿ, ಎಸ್‌ಡಿಎಂಸಿ ಅಧ್ಯಕ್ಷ ಶರಣಪ್ಪ ಗೋಡಿ, ರಾಮಪ್ಪ ಮಡಿಕಾರ ಇತರರು ಇದ್ದರು.