ಸಾರಾಂಶ
ಐಕಳ ಪೊಂಪೈ ಕಾಲೇಜಿನಲ್ಲಿ ಕಾಲೇಜಿನ ಐ.ಕ್ಯೂ.ಎ.ಸಿ, ವಾಣಿಜ್ಯ ವಿಭಾಗ ಮತ್ತು ಮಾನವಿಕ ವಿಭಾಗದ ಸಹಯೋಗದೊಂದಿಗೆ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾದ ಯುವ ಚೈತನ್ಯ ನೀಡುವ ‘ಯಂಗ್ ಸ್ಪಿಂಗ್-24’ ಕಾರ್ಯಕ್ರಮ ಪ್ರಯುಕ್ತ ವಾಲಿಬಾಲ್ ಪಂದ್ಯಾವಳಿ ನೆರವೇರಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಯುವ ಸಮುದಾಯ ಮೊಬೈಲ್, ಸಾಮಾಜಿಕ ಜಾಲತಾಣದಿಂದ ದೂರವಿದ್ದು ಶಿಕ್ಷಣ, ಕ್ರೀಡೆ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಾಧಕರಾಗಬೇಕೆಂದು ವಾಲಿಬಾಲ್ ಕಮೆಂಟೇಟರ್ ಶ್ರೀಶ ಶರಾಫ್ ಹೇಳಿದದ್ದಾರೆ.ಕಿನ್ನಿಗೋಳಿ ಸಮೀಪದ ಐಕಳ ಪೊಂಪೈ ಕಾಲೇಜಿನಲ್ಲಿ ಕಾಲೇಜಿನ ಐ.ಕ್ಯೂ.ಎ.ಸಿ, ವಾಣಿಜ್ಯ ವಿಭಾಗ ಮತ್ತು ಮಾನವಿಕ ವಿಭಾಗದ ಸಹಯೋಗದೊಂದಿಗೆ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾದ ಯುವ ಚೈತನ್ಯ ನೀಡುವ ‘ಯಂಗ್ ಸ್ಪಿಂಗ್-24’ ಕಾರ್ಯಕ್ರಮ ಪ್ರಯುಕ್ತ ನಡೆದ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಪುರುಷೋತ್ತಮ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಯೋಗಿಂದ್ರ ಬಿ. ಮತ್ತಿತರರು ಇದ್ದರು. ಸಮಾರೋಪ ಸಮಾರಂಭದಲ್ಲಿ ಕಿರೆಮ್ ಚರ್ಚ್ ಉಪಾಧ್ಯಕ್ಷ ರೋಹನ್ ಡಿ ಕೊಸ್ಟ, ಪೆಟ್ರಿಕ್ ಮೆನೆಜಸ್ ,ಉಪನ್ಯಾಸಕಿ ಪ್ರೀತಿ ವೀರ ಡಿಸೋಜಾ, ಆಶಿತಾ ಮತ್ತಿತರರು ಇದ್ದರು.ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪೊಂಪೈ ಪ. ಪೂ.ಕಾಲೇಜು (ಪ್ರಥಮ), ಸೈಂಟ್ ಜೋಸೆಫ್ ಪ.ಪೂ.ಕಾಲೇಜು ಬಜಪೆ (ದ್ವಿ), ಬೆಳ್ಮಣ್ ಸ.ಪ.ಪೂ. ಕಾಲೇಜು(ತೃ), ರಸಪ್ರಶ್ನೆ ಸ್ಪರ್ಧೆಯಲ್ಲಿ ಮುಲ್ಕಿ ಸ ಪ ಪೂ. ಕಾಲೇಜು (ಪ್ರ), ಫಲಿಮಾರು ಸ.ಪ.ಪೂ. ಕಾಲೇಜು(ದ್ವಿ).ಬೆಳ್ಮಣ್ ಸಪ ಪೂ ಕಾಲೇಜು(ತೃ) ಪುರುಷರ ವಿಭಾಗದ ವಾಲಿಬಾಲ್ ಪಂದ್ಯಾವಳಿಯ ಸ್ಪರ್ಧೆ- ಕಟೀಲು ಪ ಪೂ.ಕಾಲೇಜು(ಪ್ರ). ಸುಂಕದಕಟ್ಟೆ ಪ ಪೂ ಕಾಲೇಜು(ದ್ವಿ) ಬಜಪೆ ಸೈಂಟ್ ಪ ಪೂ ಕಾಲೇಜು(ತೃ), ಸಮಾಧಾನಕರ ಬಹುಮಾನ ಐಕಳ ಪೊಂಪೈ ಪದವಿ ಪೂರ್ವ ಕಾಲೇಜು ಪಡೆದುಕೊಂಡಿತು.
ವಿದ್ಯಾರ್ಥಿನಿ ಶ್ರೇಯಾ ಶೆಟ್ಟಿ ಸ್ವಾಗತಿಸಿದರು. ನಿಷಾದ್ ನಿರೂಪಿಸಿದರು. ಸನ್ನಿಧಿ ವಂದಿಸಿದರು. ಸ್ಪರ್ಧೆಯಲ್ಲಿ ನಾನಾ ಕಾಲೇಜುಗಳಿಂದ 200ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು.