ಶಿಸ್ತುಬದ್ಧತೆ ಜತೆಗೆ ಉನ್ನತ ಗುರಿ ಹೊಂದಿ

| Published : Jan 29 2025, 01:33 AM IST

ಶಿಸ್ತುಬದ್ಧತೆ ಜತೆಗೆ ಉನ್ನತ ಗುರಿ ಹೊಂದಿ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳು ಶಿಸ್ತುಬದ್ಧತೆ ಜತೆಗೆ ಉನ್ನತ ಗುರಿಗಳನ್ನು ಹೊಂದಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮಕ್ಕಳು ಶಿಸ್ತುಬದ್ಧತೆ ಜತೆಗೆ ಉನ್ನತ ಗುರಿಗಳನ್ನು ಹೊಂದಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನವನಗರದ ಸೆಕ್ಟರ್‌ ನಂ.46 ರಲ್ಲಿರುವ ಡಿ.ದೇವರಾಜ ಅರಸು ಮೆಟ್ರಿಕ್ ನಂತರ ವೃತ್ತಿಪರ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಉತ್ತಮವಾದ ಜೀವನ ರೂಪಿಸಿಕೊಳ್ಳಲು ದಿನಿತ್ಯದ ಶ್ರಮ, ಶಿಸ್ತುಬದ್ಧತೆ ಮೂಲಕ ದೊರೆತ ಸಮಯವನ್ನು ಹೇಗೆ ಅರ್ಥಪೂರ್ಣವಾಗಿ ಬಳಕೆ ಮಾಡಿಕೊಳ್ಳಬೇಕೆಂಬುವುದು ಮುಖ್ಯವಾಗಿದೆ. ಇದರಿಂದ ಜೀವನದಲ್ಲಿ ಇಟ್ಟುಕೊಂಡ ಗುರಿ ಸಾಧನೆಗೆ ಅನುಕೂಲವಾಗಲಿದೆ ಎಂದರು.ಉನ್ನತ ಮಟ್ಟದ ಐ.ಎ.ಎಸ್ ಮತ್ತು ಕೆ.ಎ.ಎಸ್ ನಂತಹ ಐ.ಎ.ಎಸ್ ಮತ್ತು ಕೆ.ಎ.ಎಸ್ ನಂತಹ ಉನ್ನತ ಮಟ್ಟದ ಗುರಿಯನ್ನು ಇಟ್ಟುಕೊಂಡು ಇದಕ್ಕಾಗಿ ತಮ್ಮ ಮನಸ್ಥಿತಿಯನ್ನು ಗಟ್ಟಿಗೊಳಸಿಕೊಂಡು ದೊರೆತ ಸಮಯವನ್ನು ವ್ಯರ್ಥ ಮಾಡದೇ ಪರಿಣಾಮಕಾರಿಯಾಗಿ ಬಳಸಿಕೊಂಡು ನಮ್ಮ ಜೀವನದಲ್ಲಿ ಅನುಸರಿಸಬೇಕು. ಕೆಲಸದ ಪಟ್ಟಿಗಳನ್ನು ಸಿದ್ಧಪಡಿಸಿಕೊಂಡು ಕಾರ್ಯಗಳಿಗೆ ಆದ್ಯತೆ ನೀಡಬೇಕು. ಪ್ರತಿ ಭಾರಿ ವಿಭಿನ್ನ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ತಿಳಿಸಿದರು.ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರಮನಾಥ ರೆಡ್ಡಿ ಅವರೊಂದಿಗೆ ಮಕ್ಕಳ ಜೊತೆ ಸಂವಾದ ನಡೆಸಿದರು. ತಮ್ಮ ಐ.ಎ.ಎಸ್, ಐಪಿಎಸ್ ಹೊಂದಿದ ಬಗ್ಗೆ ಅನುಭವಗಳನ್ನು ಹಂಚಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಗೆ ತಯಾರ ಆಗಬೇಕೆಂಬುವುದರ ಬಗ್ಗೆ ತಿಳಿಸಿಕೊಡಲಾಯಿತು. ದಿನನಿತ್ಯದ ಕಾರ್ಯ, ಶ್ರಮ ಹಾಗೂ ಮನಸ್ಥಿತಿ ಹೇಗಿರಬೇಕೆಂಬುವುದನ್ನು ಸಂವಾದದಲ್ಲಿ ತಿಳಿಸಿಕೊಡಲಾಯಿತು. ಮಕ್ಕಳಲ್ಲಿ ಇರುವ ಸಮಸ್ಯೆ ಹಾಗೂ ಭಯಗಳನ್ನು ಹೋಗಲಾಡಿಸಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಮಾರ್ಗದರ್ಶನ ಮಾಡಿದರು.ಸಂವಾದ ಕಾರ್ಯಕ್ರಮ ಪೂರ್ವದಲ್ಲಿ ವಸತಿ ನಿಲಯ ವೀಕ್ಷಣೆ ಮಾಡಿದ ಜಿಪಂ ಸಿಇಒ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಗುಣಮಟ್ಟದ ಗ್ರಂಥಾಲಯ, ಸಂಶೋಧನಾ ಕೊಠಡಿ ಹಾಗೂ ಉತ್ತಮ ಕಂಪ್ಯೂಟರ ಲ್ಯಾಬ್ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳು ಹೊಂದಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ಎಂ.ತುಮ್ಮರಮಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ ಸೇರಿದಂತೆ ವಸತಿ ನಿಲಯದ ಮೇಲ್ವಿಚಾರಕಿ ಶಶಿಕಲಾ ಚವ್ಹಾಣ ಹಾಗೂ ಇತರರು ಉಪಸ್ಥಿತರಿದ್ದರು.