ಸಾರಾಂಶ
- ''''''''ಆರಂಭ-2024 ಫ್ರೆಷರ್ಸ್ ಡೇ'''''''' ಸ್ವಾಗತ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಸತತ ಪ್ರಯತ್ನ, ಆತ್ಮವಿಶ್ವಾಸದಿಂದ ಗುರಿಯನ್ನು ಸಾಧಿಸಬೇಕು. ದೃಢ ಮನಸ್ಸಿನ ಪ್ರಯತ್ನದಿಂದ ಮಾತ್ರವೇ ಸಾಧನೆ ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಎಸ್.ವೆಂಕಟೇಶ್ ಬಾಬು ಹೇಳಿದರು.ನಗರದ ಆದಿಕೇಶವ ಅಕಾಡೆಮಿ ಅಸೋಸಿಯೇಟೆಡ್ ವಿತ್ ಎಂಈಎಸ್ ಪಿಯು ಕಾಲೇಜು ಮತ್ತು ಶಾಹಿದ್ ಫಾಲ್ಕಾನ್ ಪಿಯು ಕಾಲೇಜಿನ ಆಶ್ರಯದಲ್ಲಿ ''''''''ಆರಂಭ-2024 ಫ್ರೆಷರ್ಸ್ ಡೇ'''''''' ಹೆಸರಿನಲ್ಲಿ ಶೈಕ್ಷಣಿಕ ವರ್ಷದ ಸ್ವಾಗತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾಜಿ ಮೇಯರ್ ಬಿ.ಜಿ.ಅಜಯಕುಮಾರ ಮಾತನಾಡಿ, ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ತಮ್ಮ ತಂದೆ- ತಾಯಿ ಆಶಯದಂತೆ ಅವರ ಕನಸುಗಳನ್ನು ನನಸಾಗಿಸಬೇಕು. ತಂದೆ ತಾಯಿಗಳನ್ನು ಗೌರವಿಸಬೇಕು ಎಂದರು.ಅಕಾಡೆಮಿ ನಿರ್ದೇಶಕ ಧನರಾಜ್ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಅಕಾಡೆಮಿ ಕಾರ್ಯದರ್ಶಿ ಜ್ಯೋತಿ ಕುಮಾರ, ಹರಿಹರದ ಡಾ. ಬಿ.ಆರ್. ಅಂಬೇಡ್ಕರ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಕರುಣಾಕರನ್, ಶಾಹಿನ್ ಫಾಲ್ಕನ್ ಕಾಲೇಜಿನ ಅಧ್ಯಕ್ಷ ದಾದಾಪೀರ್, ಕಾಲೇಜಿನ ಪ್ರಾಚಾರ್ಯ ನಾಗರಾಜ, ಅಕಾಡೆಮಿ ನಿರ್ದೇಶಕರಾದ ಬಲ್ಲೂರು ಬಸವರಾಜ್, ಎಂ.ಸಿ. ಸುಜಾತ, ಮಲ್ಲೇಶಪ್ಪ, ಪವನ್, ಎಂಇಎಸ್ ಕಾಲೇಜಿನ ನಿರ್ದೇಶಕ ಪ್ರದೀಪ್, ಉಪನ್ಯಾಸಕರಾದ ಸತೀಶ್, ಮಲ್ಲೇಶ್ ಎಂ ನಾಯ್ಕ, ಅನಿಲ್, ನಿರಂಜನ್, ರಾಜೇಶ್, ದಸ್ತಗಿರ, ನಾಗರಾಜ, ಆಶಾ, ಮೋನಿಕಾ, ಕೋಮಲ, ಮೇಘನ, ಶಿವಾನಿ, ಜ್ಯೋತಿ, ಭಾಗ್ಯ, ಶುಭ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.
- - - -10ಕೆಡಿವಿಜಿ31ಃ:ದಾವಣಗೆರೆಯ ಎಂಈಎಸ್ ಪಿಯು ಕಾಲೇಜು ಮತ್ತು ಶಾಹಿದ್ ಫಾಲ್ಕಾನ್ ಪಿಯು ಕಾಲೇಜಿನಲ್ಲಿ ನಡೆದ ಆರಂಭ-2024 ಫ್ರೆಷರ್ಸ್ ಡೇ ಕಾರ್ಯಕ್ರಮವನ್ನು ಡಾ.ವೆಂಕಟೇಶ್ ಬಾಬು ಉದ್ಘಾಟಿಸಿದರು.