ಸಾರಾಂಶ
ವಿದ್ಯಾರ್ಥಿಗಳು ಸ್ನೇಹಿತರ ಒತ್ತಡಕ್ಕೆ ಮಣಿದು ಕ್ಷಣಿಕ ಸುಖಕ್ಕಾಗಿ ಜೀವನವನ್ನೆ ಹಾಳು ಮಾಡಿಕೊಳ್ಳಬಾರದು. ೨೦೩೦ರ ವೇಳೆಗೆ ಎಚ್ಐವಿ ಮುಕ್ತ ಭಾರತ ಮಾಡುವ ನಿಟ್ಟಿನಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಶಿಗ್ಗಾಂವಿ: ಎಚ್ಐವಿ ಮುಕ್ತ ಭಾರತ ನಿರ್ಮಾಣ ಮಾಡಲು ನಾನಾ ಬಗೆಯ ಪ್ರಚಾರಾಂದೋಲನ ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪ್ರಾಚಾರ್ಯೆ ಸಿಸ್ಟರ್ ಎನಿ ಜಾರ್ಜ್ ತಿಳಿಸಿದರು.ಪಟ್ಟಣದ ಜೆಎಂಜೆ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಎಚ್‌ಐವಿ ಜಾಗೃತಿ ಪ್ರಯುಕ್ತ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮದ ವಿಜೇತರಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಎಚ್ಐವಿ ಕುರಿತು ಜಾಗೃತಿ ಮೂಡಿಸಲು ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಜಿಲ್ಲಾ ಮೇಲ್ವಿಚಾರಕ ಸುಧಾಕರ ದೈವಜ್ಞ ಮಾತನಾಡಿ, ವಿದ್ಯಾರ್ಥಿಗಳು ಸ್ನೇಹಿತರ ಒತ್ತಡಕ್ಕೆ ಮಣಿದು ಕ್ಷಣಿಕ ಸುಖಕ್ಕಾಗಿ ಜೀವನವನ್ನೆ ಹಾಳು ಮಾಡಿಕೊಳ್ಳಬಾರದು. ೨೦೩೦ರ ವೇಳೆಗೆ ಎಚ್ಐವಿ ಮುಕ್ತ ಭಾರತ ಮಾಡುವ ನಿಟ್ಟಿನಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಡ್ಯಾಪ್ಕೂ ಕಚೇರಿ ಎಂ.ಇ. ಮಂಜುನಾಥ ಹಟ್ಟಿ, ಆಪ್ತ ಸಮಾಲೋಚಕ ವಿಜಯ ವೈ.ಬಿ. ಅವರು ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಸುಮಾರು ೧೨ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಥಮ ಸ್ಥಾನ ಚಾಕಾಪೂರದ ಏಕಲವ್ಯ ಇಂಟರ್‌ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳಾದ ಅಭಿಜ್ಞಾ ದೈವಜ್ಞ, ಫಾಲಕನಿಧಾ ಕಲಬುರ್ಗಿ, ದ್ವಿತೀಯ ಸ್ಥಾನ ಶಿಗ್ಗಾಂವಿಯ ಜೆಎಂಜೆ ಶಾಲೆಯ ವಿದ್ಯಾರ್ಥಿಗಳಾದ ಅಯಿಷಾ ನದಾಫ, ದಿವ್ಯಾ ಮುದಿಗೌಡ್ರ, ತೃತೀಯ ಸ್ಥಾನ ಕ್ಯಾಲಕೊಂಡದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸಹನಾ ಮಾದರ, ಸವಿತಾ ಮುಂದಿನಮನಿ ಪಡೆದರು.ಕಾರ್ಯಕ್ರಮದಲ್ಲಿ ಶಿಕ್ಷಕರಾದ ಈರಣ್ಣಾ ಇರೂರ, ಸುರೇಶ, ವಸಂತ ಮಹಾರಾಜಪೇಟ, ಹನುಮಂತ ಮಾದರ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿ ಶಮ್ಸ್ ತಬರೀಜ ಸ್ವಾಗತಿಸಿದರು. ಆಪ್ತ ಸಮಾಲೋಚಕಿ ರೇಣುಕಾ ಹೊಸಮನಿ ಕಾರ್ಯಕ್ರಮ ನಿರ್ವಹಿಸಿದರು.