ಮಾದರಿ ರಾಂಪುರದೊಡ್ಡಿ ಮಾಡುವ ಗುರಿ: ಆದಿತ್ಯಾ ಬಿರ್ಲಾ ಪ್ಯಾಶನ್ ಅಂಡ್ ಡೀಟೇಲ್ ಕಂಪನಿಯ ರಾಮನಗರ ಘಟಕದ ಮುಖ್ಯಸ್ಥ ಜಗದೀಶ್

| Published : Dec 15 2024, 02:03 AM IST

ಮಾದರಿ ರಾಂಪುರದೊಡ್ಡಿ ಮಾಡುವ ಗುರಿ: ಆದಿತ್ಯಾ ಬಿರ್ಲಾ ಪ್ಯಾಶನ್ ಅಂಡ್ ಡೀಟೇಲ್ ಕಂಪನಿಯ ರಾಮನಗರ ಘಟಕದ ಮುಖ್ಯಸ್ಥ ಜಗದೀಶ್
Share this Article
  • FB
  • TW
  • Linkdin
  • Email

ಸಾರಾಂಶ

ರಾಂಪುರದೊಡ್ಡಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಕಂಪ್ಯೂಟರ್ ಘಟಕಗಳಿಗೆ ಆದಿತ್ಯಾ ಬಿರ್ಲಾ ಪ್ಯಾಶನ್ ಅಂಡ್ ಡೀಟೇಲ್ ಕಂಪನಿಯ ರಾಮನಗರ ಘಟಕದ ಮುಖ್ಯಸ್ಥ ಜಗದೀಶ್ ಚಾಲನೆ ನೀಡಿದರು.

ಅಭಿವೃದ್ಧಿ । ಶುದ್ಧ ಕುಡಿವ ನೀರಿನ ಘಟಕ ಹಾಗೂ ಕಂಪ್ಯೂಟರ್ ಘಟಕಗಳಿಗೆ ಚಾಲನೆಕನ್ನಡಪ್ರಭ ವಾರ್ತೆ ರಾಮನಗರ

ಆದಿತ್ಯ ಬಿರ್ಲಾ ಪ್ಯಾಶನ್ ಮತ್ತು ರೀಟೇಲ್ ಜನಕಲ್ಯಾಣ ಟ್ರಸ್ಟ್ ವತಿಯಿಂದ ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಂಪುರದೊಡ್ಡಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಕಂಪ್ಯೂಟರ್ ಘಟಕಗಳಿಗೆ ಆದಿತ್ಯಾ ಬಿರ್ಲಾ ಪ್ಯಾಶನ್ ಅಂಡ್ ಡೀಟೇಲ್ ಕಂಪನಿಯ ರಾಮನಗರ ಘಟಕದ ಮುಖ್ಯಸ್ಥ ಜಗದೀಶ್ ಚಾಲನೆ ನೀಡಿದರು.

ಯೋಜನೆ ಅಡಿಯಲ್ಲಿ ರಾಂಪುರದೊಡ್ಡಿಯನ್ನು ಮಾದರಿ ಗ್ರಾಮವನ್ನಾಗಿ ಪರಿವರ್ತಿಸುಲು ಉದ್ದೇಶಿಸಲಾಗಿದೆ. ಈಗ ಗ್ರಾಮಸ್ಥರ ಅನುಕೂಲಕ್ಕಾಗಿ 8 ಲಕ್ಷ ರು. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದೇವೆ. ಅಲ್ಲದೆ, 7 ಲಕ್ಷ ವೆಚ್ಚದಲ್ಲಿ ವಿಲೇಜ್ ಇನ್ಫಾರ್ಮೇಷನ್ ಸೆಂಟರ್ ಸ್ಥಾಪನೆ ಮಾಡಲಾಗಿದ್ದು, 12 ಲಕ್ಷ ವೆಚ್ಚದಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ ಎಂದರು.

ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಕಂಪ್ಯೂಟರ್ ಘಟಕವನ್ನು ಒಂದು ವರ್ಷ ನಮ್ಮ ಸಂಸ್ಥೆಯೇ ನಿರ್ವಹಣೆ ಮಾಡಲಿದೆ. ಆನಂತರ ಗ್ರಾಪಂಸುಪರ್ದಿಗೆ ನೀಡಲಾಗುವುದು. ಕಂಪ್ಯೂಟರ್ ಘಟಕದಲ್ಲಿ ಓರ್ವ ಶಿಕ್ಷಕರನ್ನು ನಿಯೋಜಿಸಿ ಶಾಲಾ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದರು.

ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಪಾರ್ವತಿ ಶೆಟ್ಟಿ ಮಾತನಾಡಿ, ರಾಂಪುರದೊಡ್ಡಿ ಗ್ರಾಮದಲ್ಲಿ ಅವಶ್ಯಕ ಅಭಿವೃದ್ಧಿ ಕಾರ್ಯಗಳನ್ನು ಕಂಪನಿ ಸಿಎಸ್ ಆರ್ ಘಟಕದಡಿ ಕೈಗೆತ್ತಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಯೋಜನೆಗಳನ್ನು ಅನುಷ್ಟಾನಗೊಳಿಸುವ ಉದ್ದೇಶವಿದೆ ಎಂದರು.

ಸಿಎಸ್‌ಆರ್ ವಿಭಾಗದ ಮುಖ್ಯಸ್ಥ ಮುನಿರಾಜು, ಕಂಪನಿಯ ಹಿರಿಯ ಮಾನವ ಸಂಪನ್ಮೂಲ ಅಧಿಕಾರಿ ಮಧುಗೌಡ, ಗ್ರಾಮದ ಮುಖಂಡರಾದ ಶಂಕರ್, ಗೋಪಿ, ರವಿ ಇತರರು ಹಾಜರಿದ್ದರು.