ವಿಜಯಪುರ ನಗರದಲ್ಲಿ ಪ್ರತಿ ವರ್ಷ ಆಯೋಜಿಸುತ್ತಿರುವ ವೃಕ್ಷಥಾನ್ ಹೆರಿಟೇಜ್ ರನ್ ಗೆ ಅಂತಾರಾಷ್ಟ್ರೀಯ ಮ್ಯಾರಥಾನ್ ಆಯೋಜಕರ ಸಂಘಟನೆ (ಎಐಎಂಎಸ್)ನಿಂದ ಮಾನ್ಯತೆ ಲಭಿಸಿದೆ.
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಪ್ರತಿ ವರ್ಷ ಆಯೋಜಿಸುತ್ತಿರುವ ವೃಕ್ಷಥಾನ್ ಹೆರಿಟೇಜ್ ರನ್ ಗೆ ಅಂತಾರಾಷ್ಟ್ರೀಯ ಮ್ಯಾರಥಾನ್ ಆಯೋಜಕರ ಸಂಘಟನೆ (ಎಐಎಂಎಸ್)ನಿಂದ ಮಾನ್ಯತೆ ಲಭಿಸಿದೆ. ವಿಶ್ವ ಅಥ್ಲೆಟಿಕ್ಸ್ ಮತ್ತು ಅಂತಾರಾಷ್ಟ್ರೀಯ ಮ್ಯಾರಥಾನ್ ಆಯೋಜಕರ ಸಂಘಟನೆ (ಎಐಎಂಎಸ್) ವಿಶ್ವಾದ್ಯಂತ ನಡೆಯುವ ಮ್ಯಾರಥಾನ್‌ಗಳನ್ನು ನಿಗದಿತ ಮಾನದಂಡಗಳೊಂದಿಗೆ ಪರಿಶೀಲನೆ ನಡೆಸುತ್ತದೆ. ಅಲ್ಲದೆ, ಮ್ಯಾರಥಾನ್‌ಗಳ ಆಯೋಜನೆಯಲ್ಲಿ ಪಾಲಿಸಲಾಗುವ ಪಾರದರ್ಶಕತೆ, ಓಟಗಳ ನಿಖರವಾದ ದೂರ ಹಾಗೂ ಉದ್ದೇಶಗಳನ್ನು ಪರಿಗಣಿಸಿ ಪ್ರಮಾಣ ಪತ್ರ ನೀಡುತ್ತದೆ. ಅಂತಾರಾಷ್ಟ್ರೀಯ ಮ್ಯಾರಥಾನ್ ಆಯೋಜಕರ ಸಂಘಟನೆ ಅಧಿಕಾರಿಗಳು ನಗರಕ್ಕೆ ಇತ್ತೀಚೆಗೆ ಭೇಟಿ ನೀಡಿ, ವೃಕ್ಷಥಾನ್ ಹೆರಿಟೇಜ್ ರನ್ ನಲ್ಲಿ ಆಯೋಜಿಸಲಾದ 21.1 ಕಿ.ಮೀ. ಹಾಫ್ ಮ್ಯಾರಥಾನ್, 10 ಕಿ.ಮೀ. ಹಾಗೂ 5 ಕಿ.ಮೀ. ವಿಭಾಗಗಳ ಮಾರ್ಗ ಹಾಗೂ ದೂರವನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಈ ಪ್ರಮಾಣ ಪತ್ರ ನೀಡಿದ್ದಾರೆ. ಈ ಓಟಕ್ಕೆ ದೊರೆತ ಮಾನ್ಯತೆಯಿಂದಾಗಿ ವಿಜಯಪುರ ನಗರ ಜಾಗತಿಕ ಮಟ್ಟದಲ್ಲಿ ಮ್ಯಾರಥಾನ್ ಕ್ರೀಡೆಯಿಂದ ಪ್ರತಿ ವರ್ಷ ಗುರುತಿಸಲು ಸಾಧ್ಯವಾಗುತ್ತದೆ. ಕೋಟಿವೃಕ್ಷ ಅಭಿಯಾನ ವೃಕ್ಷಥಾನ್ ರನ್ ಕಮಿಟಿ, ವಿಜಯಪುರ ಸೈಕ್ಲಿಂಗ್ ಗ್ರುಪ್ ಸೇರಿದಂತೆ ವಿವಿಧ ಪರಿಸರ ಸಂಘಟನೆಗಳು ಹರ್ಷ ವ್ಯಕ್ತಪಡಿಸಿವೆ.