ಸಾರಾಂಶ
ಹೊನ್ನಾಳಿ ತಾಲೂಕಿನ ಕೋಣನತಲೆ ಗ್ರಾಮದಲ್ಲಿ ಶನಿವಾರ ಐರಣಿ ಹೊಳೆ ಮಠದ ಶಾಖೆಯಲ್ಲಿ ಶ್ರೀ ಸದ್ಗುರು ಬಸವರಾಜ ದೇಶೀಕೇಂದ್ರ ಮಹಾಸ್ವಾಮಿಗಳ ಪಟ್ಟಾಭಿಷೇಕದ 47ನೇ ವಾರ್ಷಿಕೋತ್ಸವ, ಕಾರ್ತಿಕೋತ್ಸವ ಹಾಗೂ ಅಡ್ಡಪಲ್ಲಕ್ಕಿ ಮಹೋತ್ಸವ ಹಿನ್ನೆಲೆ ಶ್ರೀಮಠದ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು.
ಕನ್ನಡ ಪ್ರಭೆ ವಾರ್ತೆ ಹೊನ್ನಾಳಿ
ತಾಲೂಕಿನ ಕೋಣನತಲೆ ಗ್ರಾಮದಲ್ಲಿ ಶನಿವಾರ ಐರಣಿ ಹೊಳೆ ಮಠದ ಶಾಖೆಯಲ್ಲಿ ಶ್ರೀ ಸದ್ಗುರು ಬಸವರಾಜ ದೇಶೀಕೇಂದ್ರ ಮಹಾಸ್ವಾಮಿಗಳ ಪಟ್ಟಾಭಿಷೇಕದ 47ನೇ ವಾರ್ಷಿಕೋತ್ಸವ, ಕಾರ್ತಿಕೋತ್ಸವ ಹಾಗೂ ಅಡ್ಡಪಲ್ಲಕ್ಕಿ ಮಹೋತ್ಸವ ಹಿನ್ನೆಲೆ ಶ್ರೀಮಠದ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು.ಶನಿವಾರ ಬೆಳಗ್ಗೆ ವಿವಿಧ ಪುಷ್ಪಗಳಿಂದ ಆಲಂಕರಿಸಿದ್ದ ಪಲ್ಲಕ್ಕಿಯಲ್ಲಿ ಸ್ವಾಮೀಜಿ ಅವರನ್ನು ಆಸೀನಗೊಳಿಸಿ ವಿವಿಧ ಮಂಗಳವಾದ್ಯಗಳೊಂದಿಗೆ ಗ್ರಾಮದ ಜನತೆ ಹಾಗೂ ಇತರೆಡೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರ ಸಮ್ಮುಖ ಅದ್ಧೂರಿ ಅಡ್ಡಪಲ್ಲಕ್ಕಿ ಉತ್ಸವ ನಡೆಸಲಾಯಿತು.
ಪಲ್ಲಕ್ಕಿ ಮಹೋತ್ಸವ ಹಾಗೂ ಕಾರ್ತಿಕೋತ್ಸಗಳ ಕಾರಣ ನ.28 ರಿಂದ ನ.30ರವರೆಗೆ ಶ್ರೀಮಠದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡವು. ಸದ್ಗುರು ಬಸವರಾಜ ದೇಶೀಕೇಂದ್ರ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ, ಸದ್ಗುರು ಬಾಲಯೋಗಿ ಸಿದ್ಧಾರೂಢ ಮಹಾಸ್ವಾಮೀಜಿ ಸಮ್ಮುಖ ನ.28 ಮತ್ತು ನ.29ರಂದು ನಡೆದ ಕಾರ್ಯಕ್ರಮಗಳಲ್ಲಿ ಹದಡಿಯ ಚಂದ್ರಗಿರಿ ಮಠದ ಶ್ರೀ ಮುರಳೀಧರ ಮಹಾಸ್ವಾಮೀಜಿ, ಹಾನಗಲ್ ಹೋತನಹಳ್ಳಿ ಶ್ರೀ ಶಂಕರಾನಂದ ಸ್ವಾಮೀಜಿ, ಸಿದ್ಧಾರೂಢ ಮಠ ಬಸವಾನಂದ ಭಾರತೀ ಮಹಾಸ್ವಾಮೀಜಿ ಯಡೇಹಳ್ಳಿ ಹಾಗೂ ಸಿದ್ಧಾರೂಢ ಶಾಖಾ ಮಠದ ಸ್ವಾಮೀಜಿಗಳು, ಶಾಸಕ ಡಿ.ಜಿ.ಶಾಂತನಗೌಡ, ಎಚ್.ಬಿ.ಮಂಜಪ್ಪ, ಗಣ್ಯರು ಭಾಗವಹಿಸಿದ್ದರು.ಸ್ವಾಮೀಜಿ ಅವರಿಗೆ ಸಕ್ಕರೆ, ನಾಣ್ಯ ಹಾಗೂ ತೆಂಗಿನಕಾಯಿ ತುಲಾಭಾರ ನಡೆಸಲಾಯಿತು, ಅಡ್ಡಪಲ್ಲಕ್ಕಿ ಮಹೋತ್ಸವ, ಕಾರ್ತಿಕೋತ್ಸವಗಳು ಕೋಣನತಲೆ ಗ್ರಾಮದ ಮುಖಂಡರಾದ ಎನ್.ನಾಗಪ್ಪ, ನಾಗೇಂದ್ರಪ್ಪ, ಸುಭಾಷ್ ರವಿಗೌಡ, ಲೋಕಣ್ಣ, ಮಲ್ಲನಗೌಡ, ಮಂಜಪ್ಪ ಡಿ.ಎನ್. ನಾಗರಾಜ್ ಕೆ., ಕೆ.ಎನ್. ಬಸವನಗೌಡ, ನಿಂಗನಗೌಡ, ರಾಜು ಡಿ., ದಯಾನಂದಪ್ಪ, ಕೆ.ಎಸ್. ಶಾಂತರಾಜ್, ನಿವೃತ್ತ ಪ್ರಾಂಶುಪಾಲ ಬಸವರಾಜಪ್ಪ ಸೇರಿದಂತೆ ಇನ್ನಿತರೆ ಗ್ರಾಮಗಳ ಮುಖಂಡರು, ಭಕ್ತಾಧಿಗಳು ಉತ್ಲವದಲ್ಲಿ ಭಾಗವಹಿಸಿದ್ದರು.
- - - -30ಎಚ್.ಎಲ್.ಐ2:ಹೊನ್ನಾಳಿ ತಾಲೂಕಿನ ಕೋಣತಲೆ ಗ್ರಾಮದಲ್ಲಿ ಶನಿವಾರ ಸದ್ಗುರು ಬಸವರಾಜ ದೇಶಿಕೇಂದ್ರ ಮಹಾಸ್ವಾಮೀಜಿ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು.