ಸಾರಾಂಶ
ಬಸ್ ನಿಲ್ದಾಣಕ್ಕೆ ತೆರಳುವ ಮಾರ್ಗದ ಹೊಂಡದಲ್ಲಿ ಸಿಲುಕಿದ ಐರಾವತ ಬಸ್‌ಅನ್ನು ಹೊರ ತೆಗೆಯಲು ಚಾಲಕ ಹಾಗೂ ನಿರ್ವಾಹಕ ಗಂಟೆಗಳ ಕಾಲ ಪರದಾಡಿದರು. ಬುಧವಾರ ರಾತ್ರಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವಾಗ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದ ವೇಳೆ ಹೆದ್ದಾರಿ ಬದಿಯಲ್ಲಿ ನಿರ್ಮಾಣವಾಗಿರುವ ಅಡಿಗಳಷ್ಟು ಆಳದ ಹೊಂಡಕ್ಕೆ ಸಿಲುಕಿ ಒಂದು ಗಂಟೆಗೂ ಹೆಚ್ಚಿನ ಕಾಲ ಪರದಾಡುವಂತಾಗಿತ್ತು.
ಸಕಲೇಶಪುರ: ಪಟ್ಟಣದ ಬಸ್ ನಿಲ್ದಾಣಕ್ಕೆ ತೆರಳುವ ಮಾರ್ಗದ ಹೊಂಡದಲ್ಲಿ ಸಿಲುಕಿದ ಐರಾವತ ಬಸ್‌ಅನ್ನು ಹೊರ ತೆಗೆಯಲು ಚಾಲಕ ಹಾಗೂ ನಿರ್ವಾಹಕ ಗಂಟೆಗಳ ಕಾಲ ಪರದಾಡಿದರು. ಬುಧವಾರ ರಾತ್ರಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವಾಗ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದ ವೇಳೆ ಹೆದ್ದಾರಿ ಬದಿಯಲ್ಲಿ ನಿರ್ಮಾಣವಾಗಿರುವ ಅಡಿಗಳಷ್ಟು ಆಳದ ಹೊಂಡಕ್ಕೆ ಸಿಲುಕಿ ಒಂದು ಗಂಟೆಗೂ ಹೆಚ್ಚಿನ ಕಾಲ ಪರದಾಡುವಂತಾಗಿತ್ತು. ನೂರಾರು ಜನರು ಸೇರಿ ಬಸ್ಸ್‌ನ್ನು ಹಿಂಬದಿಯಿಂದ ತಳ್ಳಿ ಹೊಂಡದಿಂದ ಮೇಲೆ ತರುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜವಾಗಲಿಲ್ಲ. ಅಂತಿಮವಾಗಿ ಜಾಕ್ ಬಳಸಿ ಬಸ್‌ನ್ನು ಹೊಂಡದಿಂದ ಹೊರತರಲಾಯಿತು.