ಅಜೆಕಾರು-ಎಣ್ಣೆಹೊಳೆ: ಐದು ಕಿ.ಮೀ. ವ್ಯಾಪ್ತಿ ರಸ್ತೆ ಸ್ವಚ್ಛತಾ ಅಭಿಯಾನ

| Published : Feb 20 2025, 12:47 AM IST

ಅಜೆಕಾರು-ಎಣ್ಣೆಹೊಳೆ: ಐದು ಕಿ.ಮೀ. ವ್ಯಾಪ್ತಿ ರಸ್ತೆ ಸ್ವಚ್ಛತಾ ಅಭಿಯಾನ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಕಳ ಎಂಪಿಎಂ ಕಾಲೇಜು ರಾಷ್ಟ್ರೀಯ ಸೇವಾಯೋಜನೆ ಘಟಕ, ಬಾಂಧವ್ಯ ಯುವಕ ಮಂಡಲ ಮಂಗಳಾನಗರ, ಮರ್ಣೆ ಗ್ರಾಮ ಪಂಚಾಯತಿ, ಹಾಗೂ ಶೌರ್ಯ ವಿಪತ್ತು ತಂಡ ಅಜೆಕಾರು ಘಟಕ ಸಹಯೋಗದೊಂದಿಗೆ ಅಜೆಕಾರು ಬಸ್ ನಿಲ್ದಾಣ ದಿಂದ ಎಣ್ಣೆಹೊಳೆ ಏತ ನೀರಾವರಿ ಯೊಜನೆಯ ಪಂಪ್ ಹೌಸ್ ವರೆಗೆ ಒಟ್ಟು ಐದು ಕಿ.ಮೀ. ದೂರದ ವರೆಗೆ ಬೃಹತ್ ಸ್ವಚ್ಛತಾ ಆಬಿಯಾನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಕಸವನ್ನು ಮರ್ಣೆ ಎಸ್ಎಲ್‌ಆರ್‌ಎಂ ಘಟಕಕ್ಕೆ ರವಾನಿಸಲಾಯಿತು

ಮರ್ಣೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದ 50 ವರ್ಷಗಳಿಂದ ರಸ್ತೆ ದುರಸ್ತಿ ಮಾಡುತ್ತಿರುವ 80 ವರ್ಷದ ಹಿರಿಜೀವ ಅಪ್ಪಿಯಣ್ಣ ಯಾನೇ ಶ್ರೀನಿವಾಸ ಮೂಲ್ಯ ಕಾರ್ಯಕ್ರಮ ಉದ್ಘಾಟಿಸಿದರು.

ಎನ್‌ಎಸ್‌ಎಸ್‌ ಸೇವಾರ್ಥಿಗಳು ಹಾಗೂ ಬಾಂಧವ್ಯ ಯುವಕ ಮಂಡಲದ ಸದಸ್ಯರು, ಹಾಗೂ ಶೌರ್ಯ ವಿಪತ್ತು ತಂಡ ಸದಸ್ಯರು, ಅಜೆಕಾರು ಎಸ್ ಎಲ್ ಆರ್ ಎಂ ಘಟಕದ ಸದಸ್ಯರು ಸೇರಿದಂತೆ ಒಟ್ಟು129 ಸದಸ್ಯರು ಸಹಕಾರ ನೀಡಿದರು.

ವಿದ್ಯಾರ್ಥಿ ಗಳೊಂದಿಗೆ ಸಂವಾದ:

ಸ್ವಚ್ಛತಾ ಅಭಿಯಾನ ಮುಗಿದ ಬಳಿಕ ವಿದ್ಯಾರ್ಥಿಗಳು ಶ್ರೀನಿವಾಸ ಮೂಲ್ಯರ ಜೊತೆ ಸಂವಾದ ನಡೆಸಿದರು. ಬದುಕು ಹಾಗೂ ಅವರ ನಡುವಿನ ಸಾಧನೆಯ ವಿಷಯವನ್ನು ಹಂಚಿಕೊಂಡರು.

ಈ ಕಾರ್ಯಕ್ರಮದಲ್ಲಿ ಕಾರ್ಕಳ ಎಂಪಿಎಂ ಕಾಲೇಜಿನ ಎನ್‌ಎಸ್‌ಎಸ್‌ ಘಟಕದ ಶಿಬಿರ ಅಧಿಕಾರಿಗಳಾದ ಸೌಮ್ಯ, ಪ್ರಸನ್ನ , ಹಾಗೂ ಬಾಂಧವ್ಯ ಯುವಕ ಮಂಡಲದ ಅಧ್ಯಕ್ಷ ಜಯಾನಂದ ಕುಲಾಲ್, ಕಾರ್ಯದರ್ಶಿ ಪ್ರತಾಪ್,ಶೌರ್ಯ ವಿಪತ್ತು ನಿರ್ವಹಣಾ ತಂಡದ ವಿಜಯ ಕಾಮತ್, ಪ್ರವೀಣ್, ಹಾಗೂ ಅಮರ್ ನಾಯಕ್ ಇದ್ದರು. ಎಸ್‌ಎಲ್‌ಆರ್‌ಎಂ ಘಟಕದ ರಿಯಾಜ್ ಉಪಸ್ಥಿತರಿದ್ದರು.