ಸಾರಾಂಶ
ಚಿಕ್ಕಮಗಳೂರು, ಅಜ್ಜಂಪುರ ತಾಲೂಕು ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಇಲ್ಲಿನ ಪಟ್ಟಣ ಪಂಚಾಯ್ತಿಗೆ ಚುನಾವಣೆ ನಡೆಯುತ್ತಿದ್ದು, ಭಾನುವಾರ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿ ಸಂಜೆ 5 ಗಂಟೆಗೆ ಮುಕ್ತಾಯಗೊಳ್ಳಲಿದೆ.
- ವಾರ್ಡ್‌ಗಳ ಸಂಖ್ಯೆ 11, ಕಣದಲ್ಲಿ 31 ಮಂದಿ, 10,028 ಮಂದಿ ಮತದಾರರು
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅಜ್ಜಂಪುರ ತಾಲೂಕು ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಇಲ್ಲಿನ ಪಟ್ಟಣ ಪಂಚಾಯ್ತಿಗೆ ಚುನಾವಣೆ ನಡೆಯುತ್ತಿದ್ದು, ಭಾನುವಾರ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿ ಸಂಜೆ 5 ಗಂಟೆಗೆ ಮುಕ್ತಾಯಗೊಳ್ಳಲಿದೆ.
ಒಟ್ಟು 11 ವಾರ್ಡ್‌ಗಳಲ್ಲಿ 31 ಮಂದಿ ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್ ಇಲ್ಲಿನ ಎಲ್ಲಾ ವಾರ್ಡ್‌ಗಳಲ್ಲಿ ಸ್ಪರ್ಧೆ ಮಾಡಿದ್ದರೆ, ಬಿಜೆಪಿ 10 ವಾರ್ಡ್‌ಗಳಲ್ಲಿ ಸ್ಪರ್ಧೆ ಮಾಡಿ, ಇನ್ನುಳಿದ ಒಂದು ವಾರ್ಡ್‌ವನ್ನು ತನ್ನ ಮಿತ್ರ ಪಕ್ಷವಾದ ಜೆಡಿಎಸ್‌ಗೆ ಬಿಟ್ಟು ಕೊಟ್ಟಿದೆ. ಹಾಗಾಗಿ ಈ ಎರಡು ಪಕ್ಷಗಳಿಗೆ ಪಟ್ಟಣ ಪಂಚಾಯ್ತಿ ಗದ್ದುಗೆ ಏರುವುದು ಪ್ರತಿಷ್ಠೆಯಾಗಿದೆ. ಆಮ್ ಆದ್ಮಿ ಪಕ್ಷವೂ ಕೂಡ ಒಂದು ವಾರ್ಡ್‌ನಲ್ಲಿ ಸ್ಪರ್ಧೆ ಮಾಡಿದೆ. ಪಕ್ಷೇತರರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆ ಮಾಡಿದ್ದು, ಬರೋಬ್ಬರಿ 8 ವಾರ್ಡ್‌ಗಳಲ್ಲಿ ಸ್ಪರ್ಧಾ ಕಣದಲ್ಲಿ ಇದ್ದಾರೆ.13 ಮತಗಟ್ಟೆಗಳು:ಅಜ್ಜಂಪುರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಟ್ಟು 11 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದ್ದು, ಮತದಾನಕ್ಕಾಗಿ 13 ಮತಗಟ್ಟೆಗಳನ್ನು ತೆರೆಯಲಾಗಿದೆ. ಒಟ್ಟು 10,028 ಮಂದಿ ಮತದಾರರು ಇದ್ದು, ಇವರಲ್ಲಿ ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳಾ ಮತದಾರರ ಸಂಖ್ಯೆಯೇ ಅಧಿಕವಾಗಿದೆ. ಶನಿವಾರ ಬೆಳಿಗ್ಗೆ ಮತಗಟ್ಟೆ ಅಧಿಕಾರಿಗಳು ಕರ್ತವ್ಯ ನಿಯೋಜಿತ ಸ್ಥಳಗಳಿಗೆ ತೆರಳಿದರು.--ಕೊಟ್--
ಅಜ್ಜಂಪುರ ಪುಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ 13 ಮತಗಟ್ಟೆಗಳಿದ್ದು, ಚುನಾವಣಾ ಕರ್ತವ್ಯಕ್ಕಾಗಿ ಒಟ್ಟು 60 ಮಂದಿ ನಿಯೋಜನೆ ಮಾಡಲಾಗಿದೆ. ಹಾಗೆಯೇ ಪ್ರತಿ ಮತಗಟ್ಟೆಗೆ 5 ಮಂದಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಶಾಂತಿಯುತವಾಗಿ ಮತದಾನ ನಡೆಸುವ ಉದ್ದೇಶದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.- ವಿನಾಯಕ್ ಸಾಗರ್ತಹಸೀಲ್ದಾರ್ ಅಜ್ಜಂಪುರ ತಾಲೂಕು
- ಬಾಕ್ಸ್ ---ಮತದಾರರ ವಿವರ
ಪುರುಷರು4863ಮಹಿಳೆಯರು 5165
ಒಟ್ಟು 10,028--
ವಾರ್ಡ್‌ವಾರು ಮೀಸಲಾತಿ ವಿವರವಾರ್ಡ್ ಸಂಖ್ಯೆ ಮೀಸಲು
1ಹಿಂದುಳಿದ ವರ್ಗ (ಎ) ಮಹಿಳೆ2ಸಾಮಾನ್ಯ
3ಸಾಮಾನ್ಯ4 ಪರಿಶಿಷ್ಟ ಪಂಗಡ
5ಪರಿಶಿಷ್ಟ ಜಾತಿ6ಹಿಂದುಳಿದ ವರ್ಗ (ಎ)
7 ಸಾಮಾನ್ಯ ಮಹಿಳೆ8ಹಿಂದುಳಿದ ವರ್ಗ (ಬಿ)
9ಸಾಮಾನ್ಯ10ಸಾಮಾನ್ಯ ಮಹಿಳೆ
11ಸಾಮಾನ್ಯ ಮಹಿಳೆ