19ರಂದು ಅಜ್ಜಂಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

| Published : May 12 2024, 01:21 AM IST

19ರಂದು ಅಜ್ಜಂಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
Share this Article
  • FB
  • TW
  • Linkdin
  • Email

ಸಾರಾಂಶ

ಅಜ್ಜಂಪುರತಾಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾಲೂಕಿನ ಕಸಬಾ ಹೋಬಳಿಯ ಕಾಟಿಗನೆರೆ ಗ್ರಾಮದಲ್ಲಿ ಇದೇ ಮೇ 19 ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ.

ಕಾಟಿಗನೆರೆ ಗ್ರಾಮದಲ್ಲಿ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನ । ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾಹಿತಿ

--

- ಪರಂಪರೆ ಉಳಿಸಿ, ಬೆಳೆಸಲು ನಾವೆಲ್ಲರೂ ಕೈಜೋಡಿಸಬೇಕು

- ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ಸಮ್ಮೇಳನ ಉದ್ಘಾಟನೆ

- ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳು ಸಾನ್ನಿಧ್ಯ

- ಜನಪದದಲ್ಲಿ ಜೀವನ ಮೌಲ್ಯ ಕುರಿತು ಉಪನ್ಯಾಸ

--

ಕನ್ನಡಪ್ರಭ ವಾರ್ತೆ, ಅಜ್ಜಂಪುರ

ತಾಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾಲೂಕಿನ ಕಸಬಾ ಹೋಬಳಿಯ ಕಾಟಿಗನೆರೆ ಗ್ರಾಮದಲ್ಲಿ ಇದೇ ಮೇ 19 ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ. ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಲೆ ನಾಡು ನುಡಿ ಸಾಹಿತ್ಯ ಸಂಗೀತ ಈ ಪರಂಪರೆಯನ್ನು ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸಬೇಕಾಗಿದೆ ಎಂದರು.ಸಮ್ಮೇಳನದ ಸ್ವಾಗತ ಸಮಿತಿ ಮಹಾ ಪೋಷಕರಾಗಿ ಕಾಟಿಗನೆರೆ ಗ್ರಾಮದ ನಿವೃತ್ತ ಶಿಕ್ಷಕ ಜಿ. ಉಮಾಪತಿ ಆರಾಧ್ಯ, ಅಧ್ಯಕ್ಷರಾಗಿ ಕಾಟಿಗನೆರೆ ಶ್ರೀ ಮಲ್ಲಿಕಾರ್ಜುನ, ಗ್ರಾಮ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಿ. ಮಲ್ಲಿಕಾರ್ಜುನ ಅವರನ್ನು ಹಾಗೂ ಕೋಶಾಧ್ಯಕ್ಷರಾಗಿ ಸಿ. ಶಿವಪ್ರಸಾದ್, ಪ್ರಧಾನ ಕಾರ್ಯದರ್ಶಿಯಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಆರ್. ಚಂದ್ರಪ್ಪ, ಗೌರವಾಧ್ಯಕ್ಷರಾಗಿ ಎನ್. ಸಿದ್ಧರಾಮಪ್ಪ, ಕಾರ್ಯದರ್ಶಿಯಾಗಿ ಕಸಬಾ ಹೋಬಳಿ ಕಸಾಪ ಅಧ್ಯಕ್ಷರಾದ ಜಿ. ಎಲ್. ಮಂಜುನಾಥ್ ಹಾಗೂ ಮಹಿಳಾ ಘಟಕದ ತಾಲೂಕು ಅಧ್ಯಕ್ಷರಾದ ಎಸ್. ಗಾಯತ್ರಮ್ಮ ಎ.ಬಿ. ನವೀನ್ ಮತ್ತು ಮೋಹನ್ ಜಾದವ್ ಕಾಂತೇಶ್ ಜಿ. ಆರ್ ಮಂಜಪ್ಪ ಹ. ಪುಟ್ಟಸ್ವಾಮಿ. ಟಿ. ಸಿ. ಶಿವಕುಮಾರ್ ಹಾಗೂ ಸಾಹಿತಿ ಡಿ. ಟಿ. ರಾಜಪ್ಪ, ಪತ್ರಕರ್ತ ಪವಿತ್ರ ವೆಂಕಟೇಶ್ ಮಂಜುನಾಥ್ ಎಂ ಹೊಸಳ್ಳಿ ಉಮೇಶ್ ಅಜ್ಜಂಪುರ ರಾಜೇಂದ್ರ ಕುಮಾರ್ ನಾಗೇಶ್, ಮಂಜು, ವಿನಯ್ ಕುಮಾರ್ ಆಯ್ಕೆಯಾದರು.ಈ ಸಮ್ಮೇಳನದ ಉದ್ಘಾಟನೆಯಲ್ಲಿ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳು ಸಾನ್ನಿಧ್ಯ ವಹಿಸಲಿದ್ದಾರೆ. ಯಡಿಯೂರು ಶ್ರೀಗಳು ಹಾಗೂ ಬೀರೂರು ಶಾಖಾ ಮಠದ ಶ್ರೀಗಳು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆ ಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ನೆರವೇರಿಸಲಿದ್ದಾರೆ.

ಅಂದು ಮಧ್ಯಾಹ್ನ 1 ಗಂಟೆಗೆ ಏರ್ಪಡಿಸಿರುವ ಜಾನಪದ ಗೋಷ್ಠಿಯಲ್ಲಿ ಯಳನಾಡು ಸಂಸ್ಥಾನದ ಕಡೂರು ಶಾಖಾ ಮಠದ ಜ್ಞಾನ ಪ್ರಭು ದೇಶಿಕೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಎಸ್ .ಎಸ್. ವೆಂಕಟೇಶ್ ಜನಪದದಲ್ಲಿ ಜೀವನ ಮೌಲ್ಯಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಚನ್ನೇಗೌಡರು ಅಧ್ಯಕ್ಷತೆ ವಹಿಸಲಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ನಡೆಯುವ ಮಹಿಳಾ ಗೋಷ್ಠಿಯ ಅಧ್ಯಕ್ಷತೆಯನ್ನು ಜಾನಪದ ಪ್ರಶಸ್ತಿ ಪುರಸ್ಕೃತ ಮುಗಳಿ ಲಕ್ಷ್ಮಿದೇವಮ್ಮ ವಹಿಸಲಿದ್ದು ಉಪನ್ಯಾಸವನ್ನು ಮಂಜುಳಾ ನೀಡಲಿದ್ದಾರೆ. ಸಮರೋಪ ಸಮಾರಂಭದಲ್ಲಿ ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು ಅಜ್ಜಂಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್. ಆರ್. ಚಂದ್ರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.ಸಮಾರೋಪ ನುಡಿಯನ್ನು ಬೀರೂರು ಕೆ. ಎಲ್. ಕೆ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ. ವಿ. ಭಾಗ್ಯಮ್ಮ ನೀಡಲಿದ್ದಾರೆ. ತಾಲೂಕಿನ ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.ಪೋಟೋ ಫೈಲ್‌ ನೇಮ್‌ 11 ಕೆಸಿಕೆಎಂ 5