ಅಜ್ಜಂಪುರ: ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

| Published : Nov 25 2025, 01:30 AM IST

ಸಾರಾಂಶ

ಅಜ್ಜಂಪುರ: ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷ ಎಂ. ಜೆ.ಕುಮಾರ್ ನೇತೃತ್ವದಲ್ಲಿ ನಡೆದು ವಾರ್ಷಿಕ ವರದಿ, ಅಂಕಿ ಅಂಶಗಳ ಪ್ರಗತಿ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಯಿತು.

ಅಜ್ಜಂಪುರ: ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷ ಎಂ. ಜೆ.ಕುಮಾರ್ ನೇತೃತ್ವದಲ್ಲಿ ನಡೆದು ವಾರ್ಷಿಕ ವರದಿ, ಅಂಕಿ ಅಂಶಗಳ ಪ್ರಗತಿ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಂ. ಜೆ.ಕುಮಾರ್‌ 23, 649 ಆಹಾರ ಪಡಿತರದಾರರಿಗೆ ನವೆಂಬರ್ ನಲ್ಲಿ 5 ಕೆಜಿ ಅಕ್ಕಿ, 3 ಕೆ.ಜಿ ರಾಗಿಯಂತೆ ಒಟ್ಟು ₹97, 76,190 ನಗದು ಹಣ ವರ್ಗಾವಣೆ ಮಾಡುತ್ತಿದೆ. ಪಂಚ ಗ್ಯಾರಂಟಿಗಳ ಒಟ್ಟು ಹಣ ₹18.20 ಕೋಟಿ ಗೃಹಲಕ್ಷ್ಮಿ ಯೋಜನೆಯಡಿ ನೇರ ಹಣ ವರ್ಗಾವಣೆ ಮಾಡಲಾಗುತ್ತದೆ. ಗೃಹಜ್ಯೋತಿಗೆ ಸಂಬಂಧಿಸಿದಂತೆ 75,000 ಫಲಾನುಭವಿಗಳಿಗೆ ಶೇ.90 ರಷ್ಟು ಸಬ್ಸಿಡಿ ಒಟ್ಟು ₹18.97 ಲಕ್ಷ ಮೆಸ್ಕಾಂ ಇಲಾಖೆಗೆ ಸಂದಾಯವಾಗಿದೆ. ಯುವನಿಧಿ ಯೋಜನೆಯನ್ನು ಜೂನ್-ಜುಲೈನಲ್ಲಿ 342 ಫಲಾನುಭವಿಗಳಿಗೆ ನೀಡಲಾಗಿರುವ ಭತ್ಯೆ ₹71,21,000 ಎಂದು ಸಭೆಯಲ್ಲಿ ತಿಳಿಸಿದರು.

ಸಿದ್ದರಾಮಯ್ಯ ಸರ್ಕಾರದ ಕಾರ್ಯದಲ್ಲಿ ಅತಿ ಹೆಚ್ಚು ಸಕ್ರಿಯವಾಗಿ ತಾಲೂಕಿನ ಅಭಿವೃದ್ಧಿ ಕಾರ್ಯ ಮಾಡಿದ ಶಾಸಕ ಜಿ. ಎಚ್. ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಮನವಿ ಮಾಡಿದರು. ಈ ಸಭೆಯಲ್ಲಿ ಸದಸ್ಯರಾದ ಕಿರಣ್, ಮದನ್ ಕೆ ಆರ್, ಲತಾ, ಹೇಮಂತ್ ಬಿ.ಪಿ , ಲೋಹಿತ್ ಹಾಗೂ ಎಮ್. ಕೆ. ವಿಜಯ್ ಕುಮಾರ್, ಇ.ಒ ನೀವು ಸರ್ವ ಸದಸ್ಯರು ಹಾಜರಿದ್ದರು.